ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಟ್ಟೆನೋವಿದೆ, ಆದರೆ ಔಷಧಿ ಸಹವಾಸ ಬೇಡ- ಪೋಪಟ್‌

By Staff
|
Google Oneindia Kannada News

ಹೊಟ್ಟೆನೋವಿದೆ, ಆದರೆ ಔಷಧಿ ಸಹವಾಸ ಬೇಡ- ಪೋಪಟ್‌
ಹೊಟ್ಟೆನೋವಿನ ಸಮೇತ ಬರ್ಮಿಂಗ್‌ಹ್ಯಾಮ್‌ಗೆ ಹೊರಟಳು ಶಟ್ಲರ್‌ ಅಪರ್ಣಾ

ಬೆಂಗಳೂರು : ಎರಡು ವರ್ಷಗಳ ಹಿಂದೆ ಗೊತ್ತಿಲ್ಲದೆ ನಿಷೇಧಿತ ಔಷಧಿ ತೆಗೆದುಕೊಂಡು 3 ತಿಂಗಳ ಕಾಲ ಕಣದಿಂದ ಹೊರಕ್ಕೆ ಉಳಿದ ಭಾರತದ ಹೆಮ್ಮೆಯ ಶಟ್ಲರ್‌ಅಪರ್ಣಾ ಪೋಪಟ್‌ ಈಗ ಆಸ್ಪತ್ರೆಯಿಂದ ಗಾವುದ ದೂರ.

ಜುಲೈ 28ನೇ ತಾರೀಕು ಬರ್ಮಿಂಗ್‌ಹ್ಯಾಮ್‌ನಲ್ಲಿ ಶುರುವಾಗಲಿರುವ ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಆಡಲು ಬೆಂಗಳೂರಿನಿಂದ ನವದೆಹಲಿಗೆ ಗುರುವಾರ (ಜು.24) ಪ್ರಯಾಣ ಬೆಳೆಸಿದ ಪೋಪಟ್‌ಗೆ 15 ದಿನಗಳಿಂದ ಹೊಟ್ಟೆನೋವು. ಆದರೆ, ಡಾಕ್ಟರ ಸಹವಾಸ ಬೇಡ ಅಂತ ಅವರು ತೀರ್ಮಾನಿಸಿದ್ದಾರೆ.

‘ನನಗೆ 15 ದಿವಸಗಳಿಂದ ಹೊಟ್ಟೆನೋವು. ಆದರೆ, ಅಪ್ಪಿ ತಪ್ಪಿ ಕೂಡ ಡಾಕ್ಟರ ಹತ್ತಿರ ಹೋಗಲಿಲ್ಲ. ಅದರ ಜೊತೆಗೇ ಆಟ ಆಡುತ್ತಿದ್ದೇನೆ. ಹೊಟ್ಟೆನೋವು ತುಂಬಾ ಜಾಸ್ತಿ ಇಲ್ಲದ್ದೇ ಸಮಾಧಾನ. 2000ನೇ ಇಸವಿಯಲ್ಲಿ ಡಿ ಕೋಲ್ಡ್‌ ತಗೊಂಡಿದ್ದು ನನ್ನ ತಪ್ಪಲ್ಲ. ಆದರೂ, ಶಿಕ್ಷೆ ಅನುಭವಿಸಿದವಳು ನಾನು. ಡೋಪ್‌ ಟೆಸ್ಟ್‌ ಅಂದರೇನೇ ಈಗ ಭಯವಾಗುತ್ತೆ. ಅದಕ್ಕೆ ಯಾವ ಔಷಧಿಯನ್ನೂ ತಗೊಂಡಿಲ್ಲ’ ಅಂತ ಪೋಪಟ್‌ ಹೇಳಿದರು.

ನಮ್ಮ ದೇಶದಲ್ಲಿ ಚೆಂದದ ಆಟಗಾರರಿಗೆ ಸರಿಯಾದ ಡಾಕ್ಟರೂ ಸಿಗೋದಿಲ್ವೆ? ನಿಷೇಧಿತ ಔಷಧಿಗಳ ಬಗ್ಗೆ ಸರಿಯಾದ ಮಾಹಿತಿ ಇರುವ ಡಾಕ್ಟರು ಅಪರ್ಣಾಗೆ ಮೂರು ವರ್ಷಗಳ ಹಿಂದೆ ಚಿಕಿತ್ಸೆ ಕೊಟ್ಟಿದ್ದಿದ್ದರೆ, ಪರಿಸ್ಥಿತಿ ಹೀಗಾಗುತ್ತಿರಲಿಲ್ಲ. ಪೋಪಟ್‌ ಹೊಟ್ಟೆನೋವು ಮಾಯವಾಗಲಿ ಅಂತ ಹಾರೈಸೋಣ.

(ಪಿಟಿಐ)

Post your views

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X