ಅದಮಾರು ಸ್ವಾಮೀಜಿಗಳ ಪರ್ಯಾಯ ಪೂರ್ವ ಸಂಚಾರ ಆರಂಭ
ಅದಮಾರು ಸ್ವಾಮೀಜಿಗಳ ಪರ್ಯಾಯ ಪೂರ್ವ ಸಂಚಾರ ಆರಂಭ
2004, ಜನವರಿ 4ರಂದು ಪುರ ಪ್ರವೇಶ
ಸಂಚಾರ ಹೊರಟ ವಿಶ್ವ ಪ್ರಸನ್ನ ತೀರ್ಥರಿಗೆ ಪರ್ಯಾಯ ಸ್ವಾಮೀಜಿಯಾಗಿರುವ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಗಳು ಫಲ ಪುಷ್ಪ ಗಂಧ ಕಾಣಿಕೆ ದ್ರವ್ಯಗಳನ್ನು ಅರ್ಪಿಸಿದರು. ಬೀಳ್ಕೊಡುಗೆ ಸಂದರ್ಭದಲ್ಲಿ ಈ ಪರ್ಯಾಯ ಪೂರ್ವ ಸಂಚಾರ ರಾಜಸೂಯ ಯಾಗವಿದ್ದಂತೆ. ಅದರಲ್ಲಿ ದಿಗ್ವಿಜಯಿಯಾಗಿ ಬನ್ನಿ. ಇದು ದ್ರವ್ಯ ಸಂಪಾದನೆ ಯಾನವಲ್ಲ. ಕೃಷ್ಣ ಮಠಕ್ಕೆ ಇನ್ನಷ್ಟು ಭಕ್ತರನ್ನು ಕರೆತರಲು ಇದೊಂದು ಸುಯೋಗ ಎಂದು ವಿದ್ಯಾಧೀಶ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥರನ್ನು ಅಭಿನಂದಿಸಿದರು.
ಬೆಂಗಳೂರಿನ ಜಯನಗರದಲ್ಲಿರುವ ರಾಘವೇಂದ್ರ ಮಠದಲ್ಲಿ ಚಾತುರ್ಮಾಸ್ಯ ವ್ರತವನ್ನು ನೆರವೇರಿಸಲಿರುವ ಶ್ರೀ ವಿಶ್ವ ಪ್ರಸನ್ನರು ನಂತರ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನಲ್ಲಿ ಸಂಚಾರ ಕೈಗೊಂಡು ಜನವರಿ 4ರಂದು ಪುರಪ್ರವೇಶ ಮಾಡಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications