ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ರೆಡ್‌ಕ್ರಾಸ್ ಭವನ
ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ರೆಡ್‌ಕ್ರಾಸ್ ಭವನ
ರಾಜ್ಯಪಾಲರಿಂದ ನೂತನ ಭವನದ ಉದ್ಘಾಟನೆ
ರಾಜ್ಯದ ಎಲ್ಲ ರಕ್ತ ನಿಧಿಗಳು ಸದಾ ಮುನ್ನೆಚ್ಚರಿಕೆಯಿಂದ ಇರಬೇಕು. ರಕ್ತನಿಧಿಯ ನಿರ್ವಹಣೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ಪ್ರಶ್ನೆ ಇರುವುದರಿಂದ ರಕ್ತ ನಿಧಿಗಳು ಅತ್ಯಂತ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕು ಎಂದು ತಮ್ಮ ಉದ್ಘಾಟನಾ ಭಾಷಣದಲ್ಲಿ ರಾಜ್ಯಪಾಲರು ಕರೆ ನೀಡಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಟಿ. ಎನ್. ಚತುರ್ವೇದಿಯವರು ಸಮಾಜದಲ್ಲಿ ಬಡವರಿಗೆ ನೆರವಾಗುವ ಮನೋಭಾವ ಹೆಚ್ಚಾಗಬೇಕು. ಪರಸ್ಪರ ಸಹಾಯ ಮಾಡುವುದರಿಂದ ಆತ್ಮವಿಶ್ವಾಸ ಹೆಚ್ಚಾಗುವುದು ಎಂದು ಆಶಿಸಿದರು. ಯುವ ಜನ ಮತ್ತು ಕ್ರೀಡಾ ಖಾತೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ ಅವರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು












Click it and Unblock the Notifications