ಬೆಂಗಳೂರಲ್ಲಿ ಯಾಹೂ ! ಸಾಫ್ಟ್‌ವೇರ್‌ನ ಆರ್‌ ಅಂಡ್‌ ಡಿ ಕೇಂದ್ರ

ಬೆಂಗಳೂರಲ್ಲಿ ಯಾಹೂ ! ಸಾಫ್ಟ್‌ವೇರ್‌ನ ಆರ್‌ ಅಂಡ್‌ ಡಿ ಕೇಂದ್ರ
ಭಾರತದಲ್ಲಿ ಯಾಹೂ ತೆರೆಯುತ್ತಿರುವ ಮೊದಲ ಕೇಂದ್ರವಿದು

ಬೆಂಗಳೂರು : ಯಾಹೂ ! ಇನ್‌ಕಾರ್ಪೊರೇಟ್‌ ಕಂಪನಿ ಭಾರತದಲ್ಲಿ ತನ್ನ ಮೊದಲ ಸಾಫ್ಟ್‌ವೇರ್‌ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ತೆರೆಯುತ್ತಿದೆ.

ಮೊನಚು ತಂತ್ರಜ್ಞಾನದ ಸೃಜನಶೀಲ ಉತ್ಪನ್ನಗಳನ್ನು ಒದಗಿಸುವ ಕನಸು ಹೊಸ ಸಂಶೋಧನಾ ಕೇಂದ್ರ ಸ್ಥಾಪಿಸಲು ಕಾರಣವಾಗಿದೆ ಎಂದು ಯಾಹೂ! ಸಾಫ್ಟ್‌ವೇರ್‌ ಡೆವಲಪ್‌ಮೆಂಟ್‌ ಇಂಡಿಯಾ ಪ್ರೆೃವೇಟ್‌ ಲಿಮಿಟೆಡ್‌ನ ಸಿಇಓ ವೆಂಕಟ್‌ ಪಂಚಪಾಕೇಸನ್‌ ಮತ್ತು ಸಿಓಓ ಭಾರತ್‌ ವಿಜಯ್‌ ಸೋಮವಾರ (ಜುಲೈ 14) ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂದಿನ ತಿಂಗಳಿಂದ ಬೆಂಗಳೂರಿನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಕಾರ್ಯಾರಂಭ ಮಾಡಲಿದ್ದು, 2004ರ ಹೊತ್ತಿಗೆ ಒಟ್ಟು 150 ಕಸುಬುದಾರ ಸಾಫ್ಟ್‌ವೇರ್‌ ಎಂಜಿನಿಯರುಗಳು ಇಲ್ಲಿ ಕೆಲಸ ಮಾಡಲಿದ್ದಾರೆ. ಕ್ಯಾಲಿಫೋರ್ನಿಯಾ ಮೂಲದ ಈ ಕಂಪನಿ ಅಲ್ಲಿನ ಸಿಬ್ಬಂದಿಯನ್ನು ಇಲ್ಲಿಗೆ ವರ್ಗಾಯಿಸುವುದಿಲ್ಲ. ಬದಲಿಗೆ, ಸ್ಥಳೀಯ ಪರಿಣತರನ್ನೇ ಕೆಲಸಕ್ಕೆ ಆರಿಸುವುದಾಗಿ ಪಂಚಪಾಕೇಸನ್‌ ಹೇಳಿದರು.

ಸದ್ಯಕ್ಕೆ 100 ಎಂಜಿನಿಯರುಗಳನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ನಡೆದಿದೆ. UNIX/C/C++, Server technologies, Middleware, TCP/IP networking, FreeBSD, Apache, Oracle/MySQL DB, Data Mining Algorithms- ಮೊದಲಾದ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಂಶೋಧನಾ ಕೇಂದ್ರ ಕೆಲಸ ಮಾಡಲಿದೆ ಎಂದು ಭಾರತ್‌ ವಿಜಯ್‌ ತಿಳಿಸಿದರು.

(ಪಿಟಿಐ)

ಮುಖಪುಟ / ಐಟಿ - ಬಿಟಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+