ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ಕೇರಳ ಶಾಲಾ ಶಿಕ್ಷಣ ಕಾಯಕಲ್ಪ
ಅನಂತಮೂರ್ತಿ ಅಧ್ಯಕ್ಷತೆಯಲ್ಲಿ ಕೇರಳ ಶಾಲಾ ಶಿಕ್ಷಣ ಕಾಯಕಲ್ಪ
ಕರ್ನಾಟಕದಲ್ಲಿ ಶಾಲಾ ಮಕ್ಕಳಿಗೆ ಬಿಸಿಯೂಟ, ಕೇರಳದಲ್ಲಿ ಶಿಕ್ಷಣದ ಸ್ವರೂಪದ ಮರುಚಿಂತನೆ
ಅನಂತಮೂರ್ತಿ ನೇತೃತ್ವದ ಐವರು ತಜ್ಞರ ಆಯೋಗ ಶಾಲಾ ಶಿಕ್ಷಣ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಪ್ರಯತ್ನದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಿದೆ. ಕೇರಳದ ಶಾಲೆಗಳ ಸ್ಥಿತಿಗತಿ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಆಯೋಗಕ್ಕೆ ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ.
ಡಾ. ಎ.ಸುಕುಮಾರನ್ ನಾಯರ್, ಡಾ. ಡಿ.ಬಾಬು ಪೌಲ್, ಪ್ರೊ. ಎನ್. ಪುರುಷೋತ್ತಮ್, ಪ್ರೊ.ಕೆ.ಎಂ. ಬಹುವುದ್ದೀನ್ ಅವರು ಅನಂತಮೂರ್ತಿ ಅಧ್ಯಕ್ಷತೆಯಲ್ಲಿನ ಆಯೋಗದ ಸದಸ್ಯರು.
ಸಂತಸ : ಕೇರಳ ಶಾಲಾ ಶಿಕ್ಷಣ ಆಯೋಗದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕುರಿತು ಅನಂತಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications