ಮೈಸೂರಿನ ಕುಕ್ಕರ ಹಳ್ಳಿ ಕೆರೆ ರಿಪೇರಿ ಕಾರ್ಯ ಆರಂಭವಾಯಿತು !
ಮೈಸೂರಿನ ಕುಕ್ಕರ ಹಳ್ಳಿ ಕೆರೆ ರಿಪೇರಿ ಕಾರ್ಯ ಆರಂಭವಾಯಿತು !
ಸಾಂಸ್ಕೃತಿಕ ಮಹತ್ವದ ಜಲ ತಾಣ ಕೊನೆಗೂ ಸುಂದರವಾಗುತ್ತಿದೆ...
ಮೈಸೂರಿನ ಕುಕ್ಕರ ಹಳ್ಳಿ ಕೆರೆ ಎಂದಾಕ್ಷಣ ಹಿರಿಯ ಸಾಹಿತಿಗಳು ನೆನಪಾಗುತ್ತಾರೆ. ಕುವೆಂಪು, ಆರ್.ಕೆ. ನಾರಾಯಣ್ ಬರಹಗಳಿಗೆ ಸ್ಫೂರ್ತಿಯಾಗಿದ್ದ ಕುಕ್ಕರ ಹಳ್ಳಿ ಕೆರೆಯಲ್ಲಿ ಹೂಳು ತುಂಬಿಕೊಂಡು, ಅದು ತನ್ನ ಸೌಂದರ್ಯ ಕೆಡಿಸಿಕೊಂಡದ್ದೆಲ್ಲಾ ಹಳೇ ಕತೆ. ಆದರೆ ಇಲ್ಲಿದೆ ನೋಡಿ ಖುಷಿಯ ಸುದ್ದಿ-
ಕುಕ್ಕರ ಹಳ್ಳಿ ಕೆರೆಯ ನವೀಕರಣ ಕೆಲಸ ಜುಲೈ 9 ರಂದು ಶುರುವಾಗಿದೆ !
ಏಷ್ಯನ್ ಅಭಿವ್ಯದ್ಧಿ ಬ್ಯಾಂಕ್ ನಿಧಿಯಿಂದ ರಾಜ್ಯ ನಗರ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಕುಕ್ಕರ ಹಳ್ಳಿ ಕೆರೆಗೆ ಮುಕ್ತಿ ಸಿಕ್ತಾ ಇದೆ. ಮೈಸೂರು ಜಲ ಸಂರಕ್ಷಣಾ ಒಕ್ಕೂಟ ಈ ಕರೆ ಅಭಿವೃದ್ಧಿ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದೆ.
ಕುಕ್ಕರಹಳ್ಳಿ ಕೆರೆ ರಿಪೇರಿಗೆ ತಗುಲುತ್ತಿರುವ ವೆಚ್ಚ - 91 ಲಕ್ಷ ರುಪಾಯಿ.
ಕೆರೆ ಅಭಿವೃದ್ಧಿ ಇಡೀ ಯೋಜನೆ ವೆಚ್ಚವನ್ನು ಸರಕಾರವು ಮೈಸೂರು ವಿಶ್ವ ವಿದ್ಯಾಲಯಕ್ಕೆ ಅನುದಾನ ರೂಪದಲ್ಲಿ ನೀಡಿದೆ. ಇತ್ತೀಚೆಗೆ ವಿವಿಯ ಉಪ ಕುಲಪತಿ ಪ್ರೊ. ಎಸ್. ಎನ್. ಹೆಗಡೆ ಕೆರೆ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಿದರು. ಇನ್ನು ಹತ್ತು ತಿಂಗಳ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ಕೆರೆಯನ್ನು ಇಕೋ- ಟೂರಿಸಂ ಪ್ರೊಜೆಕ್ಟ್ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ.
ಕಳೆ ಕೀಳುವುದು, ಹೂಳೆತ್ತುವುದು ಈ ಯೋಜನೆಯಲ್ಲಿ ಅಡಗಿದೆ. ಕೆರೆಯ ಆಸು ಪಾಸಿನ ವಸತಿ ಪ್ರದೇಶಗಳಿಂದ ಕೆರೆಯನ್ನು ಆಕ್ರಮಿಸಿರುವ ಕೊಳೆ ನೀರಿನಿಂದಾಗಿ ಕೆರೆಯ ನೀರು ಕಲುಷಿತವಾಗಿದೆ. ಈ ವಸತಿ ಪ್ರದೇಶದ ಕೊಳೆ ನೀರು ಬೇರೆಡೆಗೆ ಸಾಗುವಂತೆ ವ್ಯವಸ್ಥೆ ಮಾಡುವ ಮೂಲಕ ಮಾಲಿನ್ಯವನ್ನು ತಡೆಗಟ್ಟಲಾಗುವುದು.
ಒಟ್ಟಿನಲ್ಲಿ ಕುಕ್ಕರ ಹಳ್ಳಿ ಕೆರೆ ಸುಂದರವಾಗಲಿದೆ ! ಆದರೆ ಈ ಬಾರಿ ಕೆರೆ ತುಂಬುತ್ತದಾ ? ಮೈಸೂರಿನಲ್ಲಿ ಬೇಕೋ ಬೇಡವೋ ಎಂದು ಮೀನ ಮೇಷ ಎಣಿಸಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆಗಳು ತುಂಬುತ್ತವಾ ಎನ್ನುವುದೇ ಸಂಶಯದ ಮಾತು. ಸುಂದರವಾಗುತ್ತಿರುವ ಕೆರೆಗೆ ಮಾಯದಂಥ ಮಳೆ ಬರಲಿ !
ಮುಖಪುಟ / ವಾರ್ತೆಗಳು












Click it and Unblock the Notifications