ಗಂಗೂಬಾಯಿಗೆ ಅನಾರೋಗ್ಯ ; ಸರ್ಕಾರದಿಂದ 5 ಲಕ್ಷ ರು.ನೆರವು

ಗಂಗೂಬಾಯಿಗೆ ಅನಾರೋಗ್ಯ ; ಸರ್ಕಾರದಿಂದ 5 ಲಕ್ಷ ರು.ನೆರವು
ಬಿಸ್ಮಿಲ್ಲಾ ಖಾನ್‌ ಪಟ್ಟ ತೊಂದರೆ ಇವರಿಗೆ ಪಾಠವಾಗಿದೆಯಾದರೆ ಸಂತೋಷ

ಹುಬ್ಬಳ್ಳಿ : ಬಿಸ್ಮಿಲ್ಲಾ ಖಾನ್‌ ದಾರುಣ ಸ್ಥಿತಿ ಹಾಗೂ ಅವರು ಶುಶ್ರೂಷೆಗೆ ಕಾಸಿಲ್ಲದೆ ಪರದಾಡಿದ ಪರಿ ಹೊರ ಬಿದ್ದ ನಂತರ ಸರ್ಕಾರಗಳು (ಕೇಂದ್ರ ಹಾಗೂ ರಾಜ್ಯ) ಹಾಡುಗಾರ/ಗಾರ್ತಿಯರ ವಿಷಯದಲ್ಲಿ ಆಸ್ಥೆ ವಹಿಸುತ್ತಿವೆ. ಬಹು ದಿನಗಳಿಂದ ಹಾಸಿಗೆ ಹಿಡಿದಿರುವ ಕರ್ನಾಟಕದ ಹಿಂದೂಸ್ಥಾನಿ ಗಾಯಕಿ ಗಂಗೂಬಾಯಿ ಹಾನಗಲ್‌ ಅವರ ಚಿಕಿತ್ಸೆಗಾಗಿ ಘನ ರಾಜ್ಯ ಸರ್ಕಾರ 4.99 ಲಕ್ಷ ರುಪಾಯಿ ಚೆಕ್ಕು ಕೊಟ್ಟಿದೆ.

ಗಂಗೂಬಾಯಿ ಅವರ ದೇಹಸ್ಥಿತಿಯ ಬಗ್ಗೆ ತಿಳಿದ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೆರವು ನೀಡುವಂತೆ ಆದೇಶ ಕೊಟ್ಟ ಬೆನ್ನಿಗೇ ಇಲಾಖೆಯ ನಿರ್ದೇಶಕ ವೈ.ಕೆ.ಮುದ್ದುಕೃಷ್ಣ ಚುರುಕಾಗಿದ್ದಾರೆ. ಖುದ್ದು ಮುದ್ದುಕೃಷ್ಣ ಗಂಗೂಬಾಯಿ ಹಾನಗಲ್‌ ಅವರ ಮನೆಗೆ ಹೋಗಿ, ಆಕೆಯ ಆರೋಗ್ಯ ವಿಚಾರಿಸಿಕೊಂಡು, ಆಕೆಯ ಕೈಗೇ ಚೆಕ್ಕನ್ನು ಕೊಟ್ಟು ಬಂದಿದ್ದಾರೆ.

ಕೊನೆಗಾಲದಲ್ಲಿ ಅನಾರೋಗ್ಯದ ನಿಮಿತ್ತ ಕಲಾವಿದರು ಪರದಾಟ ಪಡದಿರಲಿ ಎಂಬ ಕಾರಣಕ್ಕೆ ಆರೋಗ್ಯ ವಿಮೆ ಮಾಡಿಸುವ ಯೋಚನೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್‌ ಅವರದ್ದು. ಅದು ಬೇಗ ಜಾರಿಗೆ ಬರಲಿ. ಕಲಾವಿದರ ಅಳಲು ಇನ್ನು ಮುಂದಾದರೂ ಜೋರಾಗದಿರಲಿ.

(ಪಿಟಿಐ)

ಮುಖಪುಟ / ಕೃಷ್ಣಗಾರುಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+