ತಿರುಪತಿ ತಿಮ್ಮಪ್ಪನ ರಕ್ಷಣೆಗೋಸ್ಕರ ಅರ್ಚಕರಿಗೆ ಕರಾಟೆ ತರಬೇತಿ

ತಿರುಪತಿ ತಿಮ್ಮಪ್ಪನ ರಕ್ಷಣೆಗೋಸ್ಕರ ಅರ್ಚಕರಿಗೆ ಕರಾಟೆ ತರಬೇತಿ
ತಿರುಪತಿಗೆ ಉಗ್ರಗಾಮಿಗಳ ಸಂಭವನೀಯ ದಾಳಿಯ ಭೀತಿ

ಹೈದರಾಬಾದ್‌ : ತಿರುಪತಿ ದೇವಸ್ಥಾನಕ್ಕೆ ಉಗ್ರಗಾಮಿಗಳು ದಾಳಿ ನಡೆಸಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನದ ಅರ್ಚಕರಿಗೆ ಮಾರ್ಷಲ್‌ ಆರ್ಟ್ಸ್‌ ತರಬೇತಿ ನೀಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಐಎಸ್‌ಐ ಬೆಂಬಲಿತ ಉಗ್ರಗಾಮಿಗಳು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುವ ಸಂಭವನೀಯ ಯೋಜನೆಯಲ್ಲಿ ತಿರುಪತಿ ತಿರುಮಲ ದೇವಸ್ಥಾನವೂ ಸೇರಿರುವ ಬಗ್ಗೆ ಗುಪ್ತಚಾರ ದಳ ದೇವಾಲಯದ ಆಡಳಿತ ಮಂಡಳಿಗೆ ಮುನ್ನೆಚ್ಚರಿಕೆಯನ್ನು ಆಗಾಗ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಆಡಳಿತ ಮಂಡಳಿಯು ದೇವಾಲಯದ ಹಾಗೂ ಭಕ್ತಾದಿಗಳ ರಕ್ಷಣೆಗಾಗಿ ಸೂಕ್ತ ತಂತ್ರಜ್ಞಾನ ಬಳಸಿ ಕ್ರಮ ಕೈಗೊಳ್ಳಲಾಗಿದ್ದರೂ ಶ್ರೀ ವೆಂಕಟೇಶ್ವರ ವಿಗ್ರಹ ಮತ್ತು ಅಪಾರ ಸಂಪತ್ತು ಇರುವ ಗರ್ಭಗುಡಿಯನ್ನು ದೇವಾಲಯದ ರಕ್ಷಣಾ ದಳವು ಸಂಪ್ರದಾಯ ಮುರಿದು ಪ್ರವೇಶಿಸುವಂತಿಲ್ಲ. ಅಲ್ಲೇನಾದರೂ ಅವಘಡ ಸಂಭವಿಸಿದರೆ ವಿಧ್ವಂಸಕರಿಂದ ಗರ್ಭಗುಡಿಯನ್ನು ರಕ್ಷಿಸಲು ಅರ್ಚಕರಿಗೆ ಕರಾಟೆ ತರಬೇತಿ ನೀಡಲಾಗುವುದು.

ದೇವಸ್ಥಾನದ ಆಡಳಿತ ಮಂಡಳಿ ಮತ್ತು ದೇವಾಲಯದ ರಕ್ಷಣೆಯ ಸಲಹೆಗಾರ ಡಾ. ಸುಬ್ರಹ್ಮಣ್ಯ ಹಾಗೂ ಉನ್ನತ ಅಧಿಕಾರಿ ಅಜಯ ಕುಮಾರ ಈ ಕುರಿತು ಚರ್ಚೆ ನಡೆಸಿ ಚೆನ್ನೈನಲ್ಲಿ ಅಷ್ಟಲಕ್ಷ್ಮೀ ದೇವಾಲಯದ ಅರ್ಚಕ ಮತ್ತು ಕರಾಟೆ ಪಟು ಶೇಷಾದ್ರಿ ಅವರನ್ನು ತಿರುಪತಿ ಅರ್ಚಕರಿಗೆ ಕರಾಟೆ ತರಬೇತಿ ನೀಡಲು ಆಯ್ಕೆ ಮಾಡಲಾಗಿದೆ.

(ಇನ್ಫೋ ವಾರ್ತೆ)

ಮುಖಪುಟ / ವಾಟ್ಸ್‌ ಹಾಟ್‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+