ಮಳೆ ಬಂದರೆ ಮಾತ್ರ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ
ಮಳೆ ಬಂದರೆ ಮಾತ್ರ ವಿಶ್ವ ಕನ್ನಡ ಸಮ್ಮೇಳನದ ಸಂಭ್ರಮ
’ಬರ ಪರಿಸ್ಥಿತಿಯ ನಡುವೆ ಹೊಸ ಸಮ್ಮೇಳನದ ಯೋಚನೆಯಿಲ್ಲ’
ವಿಶ್ವಕನ್ನಡ ಸಮ್ಮೇಳನ ನಡೆಯದಿದ್ದರೂ- ಮೂಡಬಿದ್ರೆಯಲ್ಲಿ ನಿಗದಿಯಾಗಿರುವ 71ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ ತಿಂಗಳಲ್ಲಿ ನಡೆಯಲಿದೆ. ಅಖಿಲ ಭಾರತ ಸಮ್ಮೇಳನ ನಡೆಸುವುದಕ್ಕೆ ಬರ ಪರಿಸ್ಥಿತಿಯಿಂದ ಅಷ್ಟೇನೂ ತೊಂದರೆ ಉಂಟಾಗಲಿಕ್ಕಿಲ್ಲ ಎಂದು ಪುನರೂರು ಅಭಿಪ್ರಾಯಪಟ್ಟರು.
ಹೊಸದಾಗಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಯೋಚನೆಯನ್ನು ಮಾತ್ರ ಹವಾಮಾನ ಪರಿಸ್ಥಿತಿಯನ್ನು ನೋಡಿಕೊಂಡು ನಿರ್ಧರಿಸಲಾಗುತ್ತದೆ ಎಂದ ಪುನರೂರು- ಸಾಹಿತ್ಯ ಪರಿಷತ್ತಿನ ಹೋರಾಟ-ಸಾಧನೆ- ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಳೆದ 12 ವರ್ಷಗಳಿಂದ ಆಕಾಶವಾಣಿ ದೊಡ್ಡ ಬಳ್ಳಾಪುರ ಕೇಂದ್ರದಲ್ಲಿ ಕನ್ನಡ ಕಾರ್ಯಕ್ರಮ ಪ್ರಸಾರವಾಗುತ್ತಿರಲಿಲ್ಲ . ಈ ಕುರಿತು ಆಕಾಶವಾಣಿ ಕೇಂದ್ರವನ್ನು ಪರಿಷತ್ತು ತರಾಟೆಗೆ ತೆಗೆದುಕೊಂಡ ನಂತರ ಈಗ ಕನ್ನಡ ಕಾರ್ಯಕ್ರಮಗಳು ಬಿತ್ತರವಾಗುತ್ತಿವೆ. ದತ್ತಿ ಸಂಗ್ರಹವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿ ಬಗ್ಗೆ ಪುನರೂರು ಹೇಳಿಕೊಂಡರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications