ತಿಮ್ಮಪ್ಪನ ಸನ್ನಿಧಿ ಬಿಟ್ಟು ಎಲ್ಲೆಡೆ ತಿರುಪತಿ ಲಾಡು ಮಾರಾಟ ರದ್ದು

ತಿಮ್ಮಪ್ಪನ ಸನ್ನಿಧಿ ಬಿಟ್ಟು ಎಲ್ಲೆಡೆ ತಿರುಪತಿ ಲಾಡು ಮಾರಾಟ ರದ್ದು
ಹಿಂದೂ ಧಾರ್ಮಿಕ ಮುಖಂಡರ ಮನವಿಗೆ ಸ್ಪಂದಿಸಿದ ಟಿಟಿಡಿ

ತಿರುಪತಿ : ಇನ್ನು ಮುಂದೆ ತಿರುಪತಿ ಲಾಡು ಬೇಕಾದರೆ ತಿಮ್ಮಪ್ಪನ ಸನ್ನಿಧಿಗೇ ಹೋಗಬೇಕು. ಬೇರೆ ನಗರಗಳಲ್ಲಿ ಲಾಡು ಪ್ರಸಾದ ಸಿಗುವುದಿಲ್ಲ.

ಈವರೆಗೆ ತಿರುಪತಿಯ ಲಾಡುಗಳನ್ನು ಚೆನ್ನೈ, ಬೆಂಗಳೂರು, ಪಾಂಡಿಚೆರಿ ಹಾಗೂ ವೆಲ್ಲೂರ್‌ಗಳಲ್ಲೂ ಮಾರಲಾಗುತ್ತಿತ್ತು. ಪ್ರತಿ ತಿಂಗಳ ಮೊದಲ ಶುಕ್ರವಾರ ಬೆಂಗಳೂರಿನಲ್ಲಿ 3 ಸಾವಿರ ಲಾಡುಗಳು ಬಿಕರಿಯಾಗುತ್ತಿದ್ದವು. ಈ ಲಾಡುಗಳನ್ನು ಖರೀದಿಸಲು ಹನುಮಂತನ ಬಾಲದಂಥಾ ಸರತಿ ಸಾಲಿರುತ್ತಿತ್ತು. ಪ್ರತಿ ತಿಂಗಳ ಮೊದಲ ಶನಿವಾರ ಚೆನ್ನೈನಲ್ಲಿ 5 ಸಾವಿರ, ಪಾಂಡಿಚೆರಿಯಲ್ಲಿ 2 ಸಾವಿರ ಹಾಗೂ ವೆಲ್ಲೂರ್‌ನಲ್ಲಿ 2 ಸಾವಿರ ಲಾಡುಗಳನ್ನು ಮಾರಲಾಗುತ್ತಿತ್ತು. ಇನ್ನು ಮುಂದೆ ಈ ನಗರಗಳಲ್ಲಿ ಲಾಡು ಮಾರಾಟವನ್ನು ನಿಲ್ಲಿಸಲು ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿದೆ.

ತಿರುಮಲ ಹೊರತುಪಡಿಸಿ ಬೇರಾವ ಊರಿನಲ್ಲೂ ತಿರುಪತಿ ಪ್ರಸಾದವನ್ನು ಕೊಡಕೂಡದು ಎಂದು ಹಿಂದೂ ಧಾರ್ಮಿಕ ಮುಖಂಡರು ಮನವಿ ಮಾಡಿಕೊಂಡರು. ಇದನ್ನು ದೇವಳದ ಆಡಳಿತ ಮಂಡಳಿ ಗಂಭೀರವಾಗಿ ತೆಗೆದುಕೊಂಡು, ಬೇರೆಡೆ ಲಾಡುಗಳನ್ನು ಮಾರುವುದಿಲ್ಲ ಎಂದು ಜುಲೈ 4ನೇ ತಾರೀಕು ಪ್ರಕಟಿಸಿತು. ಇನ್ನು ಮುಂದೆ ಲಾಡು ಬೇಕಾದರೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಲೇಬೇಕು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+