ಜು.5ರಿಂದ ಬೆಂಗಳೂರಲ್ಲಿ ‘ನಂಜುಂಡ ಸಿರಿ’ ಸಾಂಸ್ಕೃತಿಕ ಉತ್ಸವ

ಜು.5ರಿಂದ ಬೆಂಗಳೂರಲ್ಲಿ ‘ನಂಜುಂಡ ಸಿರಿ’ ಸಾಂಸ್ಕೃತಿಕ ಉತ್ಸವ
ಅಗಲಿದ ಎಂ.ಎಸ್‌.ನಂಜುಂಡರಾವ್‌ ಹುಟ್ಟುಹಬ್ಬದ ನೆವದಲ್ಲಿ ಸಾಂಸ್ಕೃತಿಕ ನೆನಕೆ

ಬೆಂಗಳೂರು : ಇತ್ತೀಚೆಗೆ ಮೃತರಾದ, ಚಿತ್ರಕಲಾ ಪರಿಷತ್ತಿನ ಪ್ರೊ। ಎಂ.ಎಸ್‌.ನಂಜುಂಡರಾವ್‌ ಅವರ 72ನೇ ಹುಟ್ಟುಹಬ್ಬದ ನೆನಪಿನಲ್ಲಿ ‘ನಂಜುಂಡ ಸಿರಿ’ ಎಂಬ ಮೂರು ದಿನಗಳ ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.

ಜುಲೈ 5ನೇ ತಾರೀಕು ಶನಿವಾರದಿಂದ 7ನೇ ತಾರೀಕಿನವರೆಗೆ ಚಿತ್ರಕಲಾ ಪರಿಷತ್ತಿನಲ್ಲಿ ಉತ್ಸವ ನಡೆಯಲಿದೆ. ಚಿತ್ರಕಲಾ ಪರಿಷತ್ತಿನ ಸಂಗ್ರಹದಲ್ಲಿರುವ ಮೈಸೂರು ಸಾಂಪ್ರದಾಯಿಕ ಚಿತ್ರಕಲೆ, ತೊಗಲುಗೊಂಬೆಗಳು, ಸೂತ್ರದ ಗೊಂಬೆ, ಡಿಜಿಟಲ್‌ ಆವೃತ್ತಿಯ ಕೃತಿಗಳು ಹಾಗೂ ನಂಜುಂಡರಾವ್‌ ಅವರ ಅಪೂರ್ವ ಛಾಯಾ ಚಿತ್ರಗಳನ್ನು ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.

ವಿಧಾನ ಪರಿಷತ್‌ ಸಭಾಪತಿ ಬಿ.ಎಲ್‌.ಶಂಕರ್‌ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಪ್ರೊ। ಎಸ್‌.ಕೆ.ರಾಮಚಂದ್ರ ರಾವ್‌ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಚಿತ್ರನಟ ವಿಷ್ಣುವರ್ಧನ್‌, ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ। ಕೆ. ಬಾಲವೀರರೆಡ್ಡಿ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಪರಿಷತ್ತಿನ ಕಾರ್ಯದರ್ಶಿ ಡಿ.ಕೆ.ಚೌಟ ಗುರುವಾರ (ಜು.03) ಸುದ್ದಿಗಾರರಿಗೆ ತಿಳಿಸಿದರು.

ಜುಲೈ 7ನೇ ತಾರೀಕು ನಂಜುಂಡರಾವ್‌ ಅವರು ಚಿತ್ರಕಲಾ ಲೋಕಕ್ಕೆ ಕೊಟ್ಟಿರುವ ಕಾಣಿಕೆಯನ್ನು ಗುರುತಿಸುವ ವಿಚಾರ ಸಂಕಿರಣ ನಡೆಯಲಿದೆ. ಕೇಂದ್ರ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಪ್ರೊ। ಆರ್‌.ಬಿ. ಭಾಸ್ಕರನ್‌, ಪ್ರೊ । ವಿ.ಜಿ.ಅಂದಾನಿ, ಡಾ । ತಾರಾ ಕಶ್ಯಪ್‌ ಮತ್ತಿತರ ಕಲಾ ಇತಿಹಾಸಕಾರರು ಸಂಕಿರಣದಲ್ಲಿ ವಿಚಾರ ಮಂಡಿಸಲಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+