ವಿವಿಧ ಭಾರತಿಯಲ್ಲಿ 40 ಸಾಹಿತಿಗಳ ಶಬ್ದ ಚಿತ್ರಗಳ ಉಲಿ
ವಿವಿಧ ಭಾರತಿಯಲ್ಲಿ 40 ಸಾಹಿತಿಗಳ ಶಬ್ದ ಚಿತ್ರಗಳ ಉಲಿ
ಜುಲೈ 2ರಿಂದ ಪ್ರತಿ ಬುಧವಾರ ಸಂಜೆ 4.30ರಿಂದ 5ರವರೆಗೆ
ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಒಂದು ಒಳ್ಳೆಯ ಕೋರಿಕೆಯನ್ನು ಆಕಾಶವಾಣಿ ಮುಂದೆ ಇಟ್ಟಿದ್ದರ ಫಲ ಈ ಕಾರ್ಯಕ್ರಮ. ಬೆಂಗಳೂರು ವಿವಿಧ ಭಾರತಿ ಕೇಂದ್ರ ಸಾಹಿತ್ಯಿಕವಾದ ಅಪರೂಪ ಎನ್ನುವಂಥ ಈ ಕಾರ್ಯಕ್ರಮವನ್ನು ಕಟ್ಟಿಕೊಡುತ್ತಿದೆ. ಆದಿಕವಿ ಪಂಪನಿಂದ ಹಿಡಿದು ಹೊಸ ತಲೆಮಾರಿನವರೆಗಿನ 40 ಕವಿವರ್ಯರು ಹಾಗೂ ಸಾಹಿತಿ ದಿಗ್ಗಜರ ಕುರಿತ ಶಬ್ದ ಚಿತ್ರಗಳನ್ನು ಕೇಳರಿಯುವ ಭಾಗ್ಯ.
ಡಾ। ಜಿ.ಎಸ್.ಶಿವರುದ್ರಪ್ಪ, ಡಾ। ಎಂ.ಚಿದಾನಂದ ಮೂರ್ತಿ, ಡಾ। ಕಮಲಾ ಹಂಪಾನ, ಡಾ। ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಡಾ। ಗಿರಡ್ಡಿ ಗೋವಿಂದ ರಾಜು, ಡಾ। ಎಚ್.ಎಸ್.ವೆಂಕಟೇಶ ಮೂರ್ತಿ- ಇವರೆಲ್ಲ ಕವಿ- ಸಾಹಿತಿಗಳ ಕುರಿತು ಶಬ್ದ ಚಿತ್ರಗಳನ್ನು ರಚಿಸಿದ್ದಾರೆ.
ವಿವಿಧ ಭಾರತಿಯು ಧಾರವಾಡ, ಚಿತ್ರದುರ್ಗ, ಹೊಸಪೇಟೆ, ಹಾಸನ, ಮಡಿಕೇರಿ, ರಾಯಚೂರು, ವಿಜಾಪುರ ಹಾಗೂ ಕಾರವಾರ ನಿಲಯಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದೆ. ಸಾಹಿತ್ಯದ ಭೂರಿ ಭೋಜನ ಉಣ್ಣುವ ಭಾಗ್ಯ ಮನೆಯಲ್ಲಿದ್ದವರದ್ದು. ಆಫೀಸಲ್ಲೇ ಇದ್ದವರಿಗೆ ಒಳ್ಳೆ ಕಾರ್ಯಕ್ರಮ ಮಿಸ್ಸು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications