ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಗೆ ವ್ಯಸನಿಗಳಿಗೆ ನಿಮ್ಹಾನ್ಸ್‌ ನೆರವು: ತಂಬಾಕು ಮುಕ್ತಿ ಕ್ಲಿನಿಕ್‌

By Staff
|
Google Oneindia Kannada News

ಹೊಗೆ ವ್ಯಸನಿಗಳಿಗೆ ನಿಮ್ಹಾನ್ಸ್‌ ನೆರವು: ತಂಬಾಕು ಮುಕ್ತಿ ಕ್ಲಿನಿಕ್‌
ಚಟದಿಂದ ಹೊರಬರಲು ತಜ್ಞರ ಮಾರ್ಗದರ್ಶನ

ಬೆಂಗಳೂರು : ಸಿಗರೇಟು, ಗುಡುಗುಡಿ, ತಂಬಾಕು ಚಟಕ್ಕೆ ಅಂಟಿಕೊಂಡಿರುವ ವ್ಯಸನಿಗಳು ಆ ಚಟದಿಂದ ಮುಕ್ತರಾಗಲು ನೆರವಾಗುವಂತೆ ನಿಮ್ಹಾನ್ಸ್‌ ಆಸ್ರತ್ರೆಯು ತಂಬಾಕು ಮುಕ್ತಿ ಕ್ಲಿನಿಕ್‌ ಆರಂಭಿಸಿದೆ.

ತಂಬಾಕಿನ ದಾಸ್ಯದಿಂದ ಹೊರಬರಲು ತಜ್ಞರ ನೆರವು, ಮಾರ್ಗದರ್ಶನ ನೀಡಲು ಈ ತಂಬಾಕು ಮುಕ್ತಿ ಕ್ಲಿನಿಕ್‌ ಸಹಕಾರಿಯಾಗಲಿದೆ. ದೇಶದಲ್ಲಿ ಪ್ರತಿದಿನ ಸುಮಾರು ಎರಡೂವರೆ ಸಾವಿರ ಮಂದಿ ತಂಬಾಕು ಸಂಬಂಧಿ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಈ ದುರಂತವನ್ನು ತಪ್ಪಿಸಿ ಚಟದಿಂದ ಮುಕ್ತಿ ಹೊಂದಲು ವ್ಯಸನಿಗಳಿಗೆ ನೆರವಾಗಲು ನಿಮ್ಹಾನ್ಸ್‌ ಸಿದ್ಧವಾಗಿದೆ ಎಂದು ನಿಮ್ಹಾನ್ಸ್‌ನ ಸಹಾಯಕ ಪ್ರೊಫೆಸರ್‌ ಡಾ. ಪ್ರತಿಮಾ ಮೂರ್ತಿ ಹೇಳಿದ್ದಾರೆ.

ತಂಬಾಕು ಮುಕ್ತಿ ಕೇಂದ್ರದ ಸೇವೆಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸುವ ಉದ್ದೇಶ ಕೇಂದ್ರಕ್ಕಿದ್ದು, ಈ ಪ್ರಯತ್ನಕ್ಕೆ ಕೈ ಜೋಡಿಸಲು ಇಚ್ಛಿಸುವ ಇತರ ಸಂಸ್ಥೆಗಳಿಗೆ ನಿಮ್ಹಾನ್ಸ್‌ ತರಬೇತಿ ನೀಡಲು ಸಿದ್ಧವಿದೆ ಎಂದೂ ಮೂರ್ತಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X