ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಡಿಕೆಯಲ್ಲಿ ಹೋದ ಮಾನ ವೆನಿಲ್ಲಾ ಬೆಳೆಯಲ್ಲೂ ಬರಲಿಲ್ಲ

By Staff
|
Google Oneindia Kannada News

ಅಡಿಕೆಯಲ್ಲಿ ಹೋದ ಮಾನ ವೆನಿಲ್ಲಾ ಬೆಳೆಯಲ್ಲೂ ಬರಲಿಲ್ಲ
ವೆನಿಲ್ಲಾ ಬೆಳೆಗೆ ಅಂಟಿಕೊಂಡ ಸಾಂಕ್ರಾಮಿಕ ರೋಗ

ಬೆಂಗಳೂರು : ಬೆಲೆ ಕುಸಿತದ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅಡಿಕೆ ಬೆಳೆಗಾರರು ಸೋಲಿನಿಂದ ಮೇಲೇಳಲು ವೆನಿಲ್ಲಾ ಎಂಬ ಹೊಸ ಬೆಳೆಯಾಂದನ್ನು ಕಂಡುಕೊಂಡಿದ್ದರು. ಆದರೆ ಅಡಿಕೆ ಬೆಳೆಗಾರರಿಗೆ ಈಗ ವೆನಿಲ್ಲಾ ಕೈಕೊಟ್ಟಿದೆ.

ಅಡಿಕೆ ಮರಕ್ಕೆ ವೆನಿಲ್ಲಾ ಬಳ್ಳಿಯನ್ನು ಹರಡಿ ನಾಜೂಕು ಬೇಸಾಯ ನಡೆಸುತ್ತಿದ್ದ ರೈತರು ಅಡಿಕೆಯಲ್ಲಿ ಕಳೆದು ಹೋದ ಲಾಭವನ್ನು ವೆನಿಲ್ಲಾ ಮುಖಾಂತರ ಪಡೆಯಲಾರಂಭಿಸಿದ್ದರು. ವೆನಿಲ್ಲಾಕ್ಕೆ ಮಾರುಕಟ್ಟೆಯಲ್ಲಿ ಸಿಗುತ್ತಿದ್ದ ಬೆಲೆಯಿಂದ ಅಡಿಕೆ ರೈತರು ಇನ್ನೇನು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನುವಷ್ಟರಲ್ಲಿ ವೆನಿಲ್ಲಾ ಬೆಳೆ ಸುಟ್ಟು ಹೋಗುತ್ತಿದೆ.

ಸಾಗರ, ಉತ್ತರ ಕನ್ನಡ ಹಾಗೂ ಕರಾವಳಿಯ ಕಾರ್ಕಳ ಮತ್ತು ಸುಳ್ಯಗಳಲ್ಲಿ ವೆನಿಲ್ಲಾ ಬೆಳೆ ವ್ಯಾಪಕವಾಗಿ ಕಂಡು ಬರುತ್ತಿದೆ. ಆದರೆ ಹೊಸಗದ್ದೆ, ಸಾಗರ ಪ್ರಾಂತ್ಯದಲ್ಲಿ ಇತ್ತೀಚೆಗೆ ವೆನಿಲ್ಲಾ ಬಳ್ಳಿಗೆ ವಿಚಿತ್ರ ರೋಗವೊಂದು ಅಂಟಿಕೊಂಡಿದ್ದು ರೈತ ಕಂಗಾಲಾಗಿದ್ದಾನೆ. ಅಲ್ಲದೆ ಈ ರೋಗ ಸಾಂಕ್ರಾಮಿಕವಾಗಿದ್ದು, ರೋಗ ಅಂಟಿಕೊಂಡ ವೆನಿಲ್ಲಾ ಬಳ್ಳಿಯನ್ನು ಸುಟ್ಟು ಹಾಕದೇ ರೈತನಿಗೇ ಬೇರೆ ದಾರಿ ತೋಚುತ್ತಿಲ್ಲ.

ತೆಂಗಿನ ಬೆಳೆಗೆ ನುಸಿ ರೋಗ ಹರಡಿದಂತೆ ವೆನಿಲ್ಲಾಕ್ಕೆ ಹರಡಿರುವ ಈ ರೋಗದ ಕುರಿತು ಸಂಶೋಧನೆಗಳು ನಡೆಯುತ್ತಿವೆ. ಸಕಲೇಶಪುರದ ಸಂಬಾರ ಮಂಡಳಿ ಪ್ರಾದೇಶಿಕ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸುದರ್ಶನ್‌ ಪ್ರಕಾರ ವೆನಿಲ್ಲಾಕ್ಕೆ ಅಂಟುತ್ತಿರುವ ರೋಗದಿಂದ ದೂರ ಇರಲು ಮುನ್ನೆಚ್ಚರಿಕೆ ಕ್ರಮವಾಗಿ ಮಣ್ಣಿನಲ್ಲಿರುವ ರೋಗ ಹರಡುವ ಶಿಲೀಂಧ್ರವನ್ನು ನಾಶಮಾಡಬೇಕು. ಆದರೆ ಇನ್ನೂ ರೋಗ ತಗುಲಿರುವ ವೆನಿಲ್ಲಾ ಗಿಡಗಳನ್ನು ಬಚಾವ್‌ ಮಾಡುವ ವಿಧಾನವನ್ನು ಪತ್ತೆ ಹಚ್ಚಲಾಗಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X