ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮಾಜಮುಖಿಗಳಾಗಿ- ಸ್ವಾಮೀಜಿಗಳಿಗೆ ಚುಂಚನಗಿರಿ ಶ್ರೀ ಕರೆ

By Staff
|
Google Oneindia Kannada News

ಸಮಾಜಮುಖಿಗಳಾಗಿ- ಸ್ವಾಮೀಜಿಗಳಿಗೆ ಚುಂಚನಗಿರಿ ಶ್ರೀ ಕರೆ
ಪ್ರತಿ ಸಮಾಜಕ್ಕೂ ಮಠ ಬೇಕೇಬೇಕು- ಸಚಿವ ಡಿ.ಕೆ.ಶಿವಕುಮಾರ್‌

ಬೆಂಗಳೂರು : ಸಮಾಜದ ಸ್ವಾಸ್ಥ್ಯ ಕೆಡದಂತೆ ವ್ಯವಸ್ಥಿತವಾಗಿ ಕಾಪಾಡಲು, ಸ್ವಾಮೀಜಿಗಳು ಸಮಾಜ ಮುಖಿಗಳಾಗಿ ಕೆಲಸ ಮಾಡುವ ಅಗತ್ಯವಿದೆ ಎಂದು ಆದಿಚುಂಚನಗಿರಿ ಮಠದ ಬಾಲಗಂಗಾಧರ ನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ನಗರದಲ್ಲಿ ಭಾನುವಾರ (ಜೂ.08) ನಡೆದ ಪರಮ ಪ್ರಸಾದಿ ಶಿವಶರಣ ಮಾದಾರ ಚೆನ್ನಯ್ಯ ಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತಾಡುತ್ತಿದ್ದರು. ಪ್ರಕೃತಿ ಈಗ ಮುನಿದಿದೆ. ಜನ ಬಿಸಿಲ ಧಗೆಯಲ್ಲಿ ಬೇಯುತ್ತಿದ್ದಾರೆ. ಪರಿಸ್ಥಿತಿ ಹೀಗೆ ಬರಡಾದಾಗ ಜನರಲ್ಲಿ ಭಕ್ತಿ ತುಂಬುವ ಕೆಲಸವಾಗಬೇಕು ಎಂದು ಸ್ವಾಮೀಜಿ ಕರೆಕೊಟ್ಟರು.

ವಿದ್ಯಾವಂತರಾಗಿ ಬೆಳಕು ಕಂಡಿರುವ ನಾವು, ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಬಾಳಬೇಕು. ಎಡಗೈ, ಬಲಗೈ ಎಂಬ ಭೇದ- ಭಾವ ಕೂಡದು. ಹಾಗಾದಾಗ ಮಾತ್ರ ಸಮಾಜ ಉದ್ಧಾರವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಮಠಗಳು ಬೇಕು : ಕಾರ್ಯಕ್ರಮ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್‌ ಪ್ರತಿ ಸಮಾಜಕ್ಕೂ ಮಠಗಳ ಅವಶ್ಯಕತೆಯಿದೆ. ಇವುಗಳಿಂದ ಸಮಾಜದ ಉದ್ಧಾರ ಸಾಧ್ಯ ಎಂದು ಅಭಿಪ್ರಾಯ ಪಟ್ಟರು.

ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಚಂದ್ರಶೇಖರ ಕಂಬಾರ, ಮಾದಾರ ಚೆನ್ನಯ್ಯನ ಕುರಿತು ಉಪನ್ಯಾಸ ಮಾಡಿದರು.

ಚಿತ್ರದುರ್ಗ ಮುರುಘರಾಜೇಂದ್ರ ಮಠದ ಶಿವಮೂರ್ತಿ , ಇಳಕಲ್‌ ವಿಜಯ ಮಹಾಂತೇಶ್ವರ ಸಂಸ್ಥಾನದ ಮಹಾಂತ ಅಪ್ಪಗಳು, ಚಿತ್ರದುರ್ಗ ಕಬೀರಾನಂದ ಆಶ್ರಮದ ಶಿವಲಿಂಗಾ ನಂದಸ್ವಾಮಿ, ಗೋಸಾಯಿ ಮಠದ ಸುರೇಶ್ವರಾನಂದ ಭಾರತಿ ಸ್ವಾಮೀಜಿ, ಸಿದ್ಧಯ್ಯನ ಕೋಟೆ ವಿಜಯ ಮಹಾಂತೇಶ್ವರ ಶಾಖಾ ಮಠದ ಬಸವಲಿಂಗ ಸ್ವಾಮಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಚಿವ ಆರ್‌.ಬಿ.ತಿಮ್ಮಾಪುರ ಅಧ್ಯಕ್ಷತೆ ವಹಿಸಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X