ದಕ್ಷಿಣ ಆಫ್ರಿಕ ಕೌಂಟಿ ಜತೆ ಶ್ರೀನಾಥ್‌ ನೆಂಟಸ್ತಿಕೆ

ಬೆಂಗಳೂರು : ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ದಕ್ಷಿಣ ಆಫ್ರಿಕದ ಹಿಗ್‌ವೆಲ್ಡ್‌ ಸ್ಟ್ರೈಕರ್ಸ್‌ ಎಂಬ ಕೌಂಟಿ ಪರ ಕ್ರಿಕೆಟ್‌ ಆಡುವ ಒಡಂಬಡಿಕೆಗೆ ಸಹಿ ಹಾಕಿದ್ದಾರೆ ಎಂದು ಅವರ ಆಪ್ತ ವಲಯದ ಮೂಲಗಳು ತಿಳಿಸಿವೆ.

ಪ್ರಸ್ತುತ ಇಂಗ್ಲಿಷ್‌ ಕೌಂಟಿ ಡುರ್ಹಾಮ್‌ ಪರ ತರಪೇತುದಾರ ಹಾಗೂ ಆಟಗಾರನಾಗಿ ಕೆಲಸ ಮಾಡುತ್ತಿರುವ ಶ್ರೀನಾಥ್‌, ಬರುವ ಸೆಪ್ಟೆಂಬರ್‌ ತಿಂಗಳ ಮಧ್ಯದಲ್ಲಿ ಒಂದು ದಿನದ ಪಂದ್ಯಗಳನ್ನಾಡಲು ದಕ್ಷಿಣ ಆಫ್ರಿಕಕ್ಕೆ ತೆರಳುವ ಸಾಧ್ಯತೆಯಿದೆ ಎಂದು ಗಾಟಿಂಗ್‌ ಕ್ರಿಕೆಟ್‌ ಮಂಡಳಿ ಹೇಳಿದೆ. ಆದರೆ, ನಾಲ್ಕು ದಿನಗಳ ಪಂದ್ಯಗಳನ್ನಾಡಲು ಶ್ರೀನಾಥ್‌ ಒಪ್ಪಿಗೆ ಸೂಚಿಸಿಲ್ಲ.

ಶ್ರೀನಾಥ್‌ ಒಡಂಬಡಿಕೆಯ ಅವಧಿ ಎಷ್ಟು ಎಂಬುದು ಇನ್ನೂ ದೃಢಪಟ್ಟಿಲ್ಲ. ಆದರೆ, ಅವರು ದಕ್ಷಿಣ ಆಫ್ರಿಕಕ್ಕೆ ತೆರಳಲಿರುವ ಅವಧಿ ಗಮನಿಸಿದರೆ, ನ್ಯೂಜಿಲೆಂಡ್‌ ವಿರುದ್ಧ ಭಾರತದಲ್ಲಿ ನಡೆಯಲಿರುವ ಕ್ರಿಕೆಟ್‌ ಪಂದ್ಯಗಳಲ್ಲಿ ಆಡುವುದು ಅನುಮಾನ ಎನಿಸುತ್ತದೆ. ಯಾಕೆಂದರೆ, ಅಕ್ಟೋಬರ್‌ ತಿಂಗಳಲ್ಲಿ ನ್ಯೂಜಿಲೆಂಡ್‌ ಭಾರತಕ್ಕೆ ಪ್ರವಾಸ ಬರುತ್ತಿದೆ. ಇದು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ಶ್ರೀನಾಥ್‌ ನಿವೃತ್ತಿಯಾಗುತ್ತಿರುವ ಸೂಚನೆ ಎಂಬ ಸುದ್ದಿಯೂ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ವಲಯದಲ್ಲಿ ಹಬ್ಬಿದೆ.

ಹುಟ್ಟಿಕೊಂಡಿರುವ ಅನುಮಾನಗಳಿಗೆ ಉತ್ತರಿಸಲು ಶ್ರೀನಾಥ್‌ ಸಿಗಲಿಲ್ಲ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+