‘ಭಾರತ ಜಾಗತಿಕ ಮಟ್ಟದ ಯುದ್ಧಾಸ್ತ್ರ ತಯಾರಿಸಬೇಕು’
ಬೆಂಗಳೂರು : ಭಾರತ ತನ್ನದೇ ಆದ ತಂತ್ರಜ್ಞಾನದ ಆಧುನಿಕ ಯುದ್ಧೋಪಕರಣದೊಂದಿಗೆ ಸಜ್ಜಾಗಬೇಕೆಂಬ ಕರೆಗಂಟೆಯನ್ನು ಈಚೆಗೆ ನಡೆದ ಅಮೆರಿಕ- ಇರಾಕ್ ಯುದ್ಧ ಬಾರಿಸಿದೆ ಎಂದು ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಹೇಳಿದರು.
ನಗರದ ಭಾರತ್ ಇಲೆಕ್ಟ್ರಿನಿಕ್ಸ್ ಲಿಮಿಟೆಡ್‌ನ (ಬಿಇಎಲ್) ಸ್ವರ್ಣ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಫರ್ನಾಂಡಿಸ್ ಮಾತಾಡುತ್ತಿದ್ದರು. ಇರಾಕ್ ಯುದ್ಧದಲ್ಲಿ ಏನಾಯಿತು ಎಂಬುದನ್ನು ಕಂಡಿದ್ದೇವೆ. ಅದು ಕೇವಲ ಇರಾಕ್- ಅಮೆರಿಕಕ್ಕೆ ಸೀಮಿತವಾದ ಸಂಗತಿಯಲ್ಲ. ತಂತ್ರಜ್ಞಾನ ಜಾಗದಿಂದ ಜಾಗಕ್ಕೆ ಹರಿಯುತ್ತದೆ ಎಂಬ ಪ್ರಜ್ಞೆ ನಮಗಿರಬೇಕು. ಪಾಕಿಸ್ತಾನ ನ್ಯೂಕ್ಲಿಯಾರ್ ಬಾಂಬ್‌ಗಳನ್ನು ಇಟ್ಟುಕೊಳ್ಳುವಷ್ಟು ಶಕ್ತ ಅಂತ ಯಾರೂ ಎಣಿಸಿರಲಿಲ್ಲ. ಆದರೆ ಆದದ್ದೇ ಬೇರೆ ಎಂದರು.
ಶತ್ರುವನ್ನು ಎದುರಿಸುವಾಗ, ಅವರ ಸಮಕ್ಕೆ ನಾವೂ ಸುಸಜ್ಜಿತ ಆಧುನಿಕ ಶಸ್ತ್ರಾಸ್ತ್ರ ಹೊಂದಿರದಿದ್ದರೆ, ಯೋಧನ ಒಂದು ಕೈಯನ್ನು ಕಟ್ಟಿ ಹಾಕಿದಂತೆ. ಹೀಗೆ ಆದಾಗ ಎದುರಾಳಿಗೆ ಎದೆಗೊಡುವ ಮೊದಲೇ ನಾವು ಎದೆಗುಂದಿದಂತಾಗುತ್ತದೆ. ಭಾರತ ಜಾಗತಿಕ ಮಟ್ಟದ ಅತ್ಯಾಧುನಿಕ ತಂತ್ರಜ್ಞಾನದ ಶಸ್ತ್ರಾಸ್ತ್ರಗಳನ್ನು ಉತ್ಪಾದಿಸಬೇಕು ಎಂದು ಜಾರ್ಜ್ ಕರೆಕೊಟ್ಟರು.
ಪಾಕಿಸ್ತಾನದಿಂದ ಭಾರತಕ್ಕೆ ನುಸುಳುತ್ತಿರುವ ಅತಿಕ್ರಮಣಕಾರರ ಸಂಖ್ಯೆಯೀಗ ಗಣನೀಯವಾಗಿ ಕುಸಿದಿದೆ. ಹಾಗಂತ ಮುಂದೆ ಈ ಸಂಖ್ಯೆ ಏರುವುದಿಲ್ಲ ಎಂದು ಕೈಕಟ್ಟಿ ಕೂರುವ ಹಾಗಿಲ್ಲ ಎಂದು ಅವರು ಎಚ್ಚರಿಸಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications