ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪಾಲ : ಮಕ್ಕಳಿಗೆ ಕನಸು ಕೊಟ್ಟ ಕಲಮ್‌ !

By Staff
|
Google Oneindia Kannada News

ಮಣಿಪಾಲ : ದೇಶದ ರಕ್ಷಣೆಗೆ ಕ್ಷಿಪಣಿ ತಂತ್ರಜ್ಞಾನ ಅತ್ಯಗತ್ಯ ಎನ್ನುವ ತಮ್ಮ ವಾದವನ್ನು ರಾಷ್ಟ್ರಪತಿ ಎಪಿಜೆ ಅಬ್ದುಲ್‌ ಕಲಮ್‌ ಮಾ.28ರ ಶುಕ್ರವಾರ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡರು.

ಪ್ರಸ್ತುತ ಇರಾಕ್‌ನಲ್ಲಿ ಉಂಟಾಗುತ್ತಿರುವ ಸಾವು ನೋವುಗಳಿಗೆ ಕೂಡ ಕ್ಷಿಪಣಿಗಳ ಬಳಕೆಯೇ ಕಾರಣ. ಆದರೆ, ಇದೇ ಕ್ಷಿಪಣಿಗಳನ್ನು ನೋವನ್ನು ತೊಡೆಯಲು ಏಕೆ ಬಳಸಿಕೊಳ್ಳಬಾರದು ಎಂದು ಪ್ರಶ್ನಿಸಿದ ಕಲಮ್‌- ದೇಶದ ರಕ್ಷಣೆಗೆ ಕ್ಷಿಪಣಿಗಳ ಬಳಕೆ ಅಗತ್ಯ ಎಂದರು. ಅವರು ಶುಕ್ರವಾರ ಮಣಿಪಾಲದ ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನ ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ನಮಗೊಂದು ಸ್ಪಷ್ಟ ಗುರಿ ಬೇಕು. ನಾವು ಕನಸೊಂದನ್ನು ಹೊಂದಿದ್ದಾಗ ಮಾತ್ರ, ಆ ಕನಸು ಯೋಚನೆಗಳ ಮೂಲಕ ಕಾರ್ಯಗತಗೊಂಡು ಫಲಿತಾಂಶ ದೊರಕಲು ಸಾಧ್ಯ. ಆ ಕಾರಣದಿಂದಾಗಿ ಎಲ್ಲರೂ ಗುರಿ ಹಾಗೂ ಕನಸು ಹೊಂದಿರುವುದು ಅಗತ್ಯ ಎಂದು ಕ್ಷಿಪಣಿ ಮನುಷ್ಯ ಎಂದು ಪ್ರಸಿದ್ಧರಾದ ಕಲಮ್‌ ಹೇಳಿದರು.

ಮಕ್ಕಳೊಂದಿಗೆ ಬೆರೆತ ರಾಷ್ಟ್ರಪತಿ

ಕಸ್ತೂರಿ ಬಾ ವೈದ್ಯಕೀಯ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮದ ನಂತರ ರಾಷ್ಟ್ರಪತಿ ಕಲಮ್‌ ಶಾಲಾ ಮಕ್ಕಳೊಂದಿಗೆ ಬೆರೆತರು. ಕಠಿಣ ಶ್ರಮ ಹಾಗೂ ಸಿಹಿ-ಸ್ಪಷ್ಟ ಯೋಚನೆಗಳ ಮೂಲಕ ಭಾರತವನ್ನು ಅಭಿವೃದ್ಧಿ ದೇಶಗಳ ಸಾಲಿಗೆ ಸೇರ್ಪಡೆಗೊಳಿಸಲು ಸಾಧ್ಯವಿದೆ ಎಂದು ಮಕ್ಕಳಿಗೆ ಕಲಮ್‌ ತಿಳಿ ಹೇಳಿದರು.

2020ನೇ ಇಸವಿಯಾಳಗೆ ಅನಕ್ಷರತೆ, ಬಡತನ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಅಳಿಸಿಹಾಕಿರುವ ಸಮಾಜವನ್ನು ಭಾರತದಲ್ಲಿ ಕಾಣುವ ಕನಸು ನನ್ನದು ಎಂದು ಕಲಮ್‌ ತಮ್ಮ ಕನಸನ್ನು ತೋಡಿಕೊಂಡರು.

ರಕ್ಷಣಾ ಸಚಿವ ಜಾರ್ಜ್‌ ಫರ್ನಾಂಡಿಸ್‌, ರಾಜ್ಯಪಾಲ ಟಿ.ಎನ್‌.ಚತುರ್ವೇದಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಜಿ.ಪರಮೇಶ್ವರ ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X