ಖಾದಿಯ ಕೈಯಲ್ಲಿ ಕಾವಿ-ನಿಡುಮಾಮಿಡಿ ಶ್ರೀ
ಹಾಸನ : ರಾಜಕಾರಣದ ಮಾರ್ಗದರ್ಶಕರಾಗಬೇಕಿದ್ದ ಸಾಧು ಸಂತರುಗಳೇ ರಾಜಕಾರಣಿಗಳ ಹಂಗಿಗೆ ಒಳಗಾಗುತ್ತಿದ್ದಾರೆ ಎಂದು ನಿಡುಮಾಮಿಡಿ ಮಠದ ಶ್ರೀ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ವಿಷಾದಿಸಿದ್ದಾರೆ.
ಕೊಳಕು ರಾಜಕಾರಣಿಗಳ ತಿದ್ದುವ ಮೂಲಕ ಅವರನ್ನು ಸನ್ಮಾರ್ಗದಲ್ಲಿ ನಡೆಸಬೇಕಿದ್ದ ಸಾಧು ಸಂತರು ಕರ್ತವ್ಯ ವಿಮುಖರಾಗುತ್ತಿದ್ದಾರೆ. ಅಲ್ಲದೇ ರಾಜಕಾರಣಿಗಳ ಕೈಗೊಂಬೆಯಾಗಿದ್ದಾರೆ ಎಂದು ನಿಡುಮಾಮಿಡಿ ಶ್ರೀ ಹೇಳಿದರು. ಅವರು ಹಾಸನ ಜಿಲ್ಲಾ 7 ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆ.27ರ ಗುರುವಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಸ್ವಾಮೀಜಿಯಾಗಲು ಈಚಿನ ದಿನಗಳಲ್ಲಿ ಭಾರೀ ಪೈಪೋಟಿ ನಡೆಯುತ್ತಿದೆ. ಲಾಬಿಗಳೂ ನಡೆಯುತ್ತಿವೆ ಎಂದ ಸ್ವಾಮೀಜಿ- ಧರ್ಮಗಳು ಸ್ಥಾಪನೆಯಾದ ಉದ್ದೇಶವೇ ನೆರವೇರಿಲ್ಲ ಎಂದರು.
ಧರ್ಮಗಳನ್ನು ಒಡೆಯುವ ದಳ್ಳಾಳಿಗಳು ಹೆಚ್ಚಾಗಿದ್ದಾರೆ. ಈ ದಳ್ಳಾಳಿಗಳನ್ನು ದೂರವಿಡಬೇಕು ಎಂದು ಸ್ವಾಮೀಜಿ ಕರೆ ನೀಡಿದರು. ಪ್ಲೇವಿನ್ ಆನ್‌ಲೈನ್ ಲಾಟರಿಯನ್ನು ನಿಷೇಧಿಸಬೇಕು ಎಂದೂ ಅವರು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications