ಬಾತ್‌ರೂಮ್ ಪಕ್ಕದಲ್ಲಿ ಅಡುಗೆಮನೆ ಅಥವಾ ಪೂಜಾ ಕೋಣೆ ಇರಬಹುದೇ? ವಾಸ್ತು ಏನು ಹೇಳುತ್ತದೆ?

ಸ್ವಂತ ಮನೆ ಕಟ್ಟಿಸಬೇಕು ಎನ್ನುವುದು ಪ್ರತಿಯೊಬ್ಬರ ಕನಸು ಆಗಿರುತ್ತದೆ, ಆದರೆ ಹಳೆಯ ಮನೆಯಲ್ಲಿ ಎದುರಿಸಿದ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಹೊಸ ಮನೆಯಲ್ಲಿ ಎದುರಿಸರಬಾರದು ಎಂಬುದು ಎಲ್ಲರ ಒಂದು ಆಶಯವಾಗಿರುತ್ತದೆ. ಮನೆ ಕಟ್ಟುವಾಗ ಜಾಗ ಚಿಕ್ಕದಾಗಿದ್ದರು ತಮ್ಮದೆ ಆದ ಸ್ವಂತ ಮನೆಯನ್ನು ಕಟ್ಟಬೇಕು ಎನ್ನುವುದು ಒಂದು ಪ್ರಶ್ನೆ ಆಗಿರುತ್ತದೆ. ಆ ಮನೆಯಲ್ಲಿ ಯಾವ ಕೋಣೆ ಯಾವ ಜಾಗದಲ್ಲಿ ಇರಬೇಕು ಅದು ವಾಸ್ತು ಶಾಸ್ತ್ರದ ಪ್ರಕಾರ ಇರಬೇಕು ಎಂದು ಕೆಲವರ ಅಭಿಪ್ರಾಯ ಆಗಿರುತ್ತದೆ.

ಸಾಮಾನ್ಯವಾಗಿ ವಾಸ್ತು ಪ್ರಕಾರ ಬಾತ್‌ರೂಮ್ ಗೋಡೆ ಪೂಜಾ ಕೋಣೆಗೆ ಅಥವಾ ಅಡುಗೆ ಮನೆಯ ಕೋಣೆಗೆ ತಾಗುವಂತೆ ಇರಬಾರದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಆದರೆ ತಜ್ಞರ ಅಭಿಪ್ರಾಯದಂತೆ ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಬೇರ್ಪಡಿಸುವ ಗೋಡೆ ಇರುವುದರಿಂದ ಪ್ರತ್ಯೇಕ ಶಕ್ತಿಗಳು ನಿರ್ಮಾಣವಾಗುತ್ತವೆ. ಆದ್ದರಿಂದ ಬಾತ್‌ರೂಮ್ ಗೋಡೆಯ ಪಕ್ಕದಲ್ಲಿ ಪೂಜಾ ಕೋಣೆಯನ್ನು ಅಥವಾ ಅಡುಗೆಮನೆ ನಿರ್ಮಿಸಿದರೆ ಅದು ದೊಡ್ಡ ಮಟ್ಟದ ದೋಷ ಎಂದು ಪರಿಗಣಿಸುವ ಅಗತ್ಯವಿಲ್ಲ.

Vastu Tips

ಜಾಗ ಕಡಿಮೆ ಇದ್ದರೆ ಹೇಗೆ ಪ್ಲಾನ್ ಮಾಡಬೇಕು?

ಆದರೆ ಮನೆ ಕಟ್ಟುವಾಗ ಜಾಗದ ಅಭಾವ ಇದ್ದಲ್ಲಿ ಕೆಲವು ಮುನ್ನಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಒಂದು ವೇಳೆ ಪೂಜಾ ಕೊಠಡಿ ಬಾತ್‌ರೂಮ್ ಪಕ್ಕದಲ್ಲಿ ನಿರ್ಮಿಸಿದ್ದೆ ಆದರೆ, ಅದರ ಮಧ್ಯದಲ್ಲಿ ಸಣ್ಣದಾದ ಕಪಾಟು ಅಥವಾ ಶೆಲ್ಪ್ ಇಡುವುದು ಒಳ್ಳೆಯದು. ಇದರಿಂದ ಕೋಣೆಗಳ ನೇರ ಸಂಪರ್ಕ ತಪ್ಪಿಸಬಹುದಾಗಿದೆ. ಪೂಜಾ ಕೋಣೆಯನ್ನು ಯಾವಗಲೂ ಸ್ವಚ್ಛ ಮತ್ತು ಬೆಳಕಿನಿಂದ ಇರುವ ಹಾಗೆ ನೋಡಿಕೊಳ್ಳಬೇಕಾಗುತ್ತದೆ.

ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ
ಪರ್ಸ್‌ನಲ್ಲಿ ಈ 6 ವಸ್ತು ಇಡಬೇಡಿ! ನಿಮ್ಮ ಕೈಯಲ್ಲಿ ಹಣ ಉಳಿಯದಿರಲು ಇದೇ ಕಾರಣ

ವಾಸ್ತು ದೋಷ ತಪ್ಪಿಸಲು ಸರಳ ಪರಿಹಾರಗಳು

ನಮ್ಮ ಆರ್ಥಿಕ ಸಮಸ್ಯೆಗಳಿಂದ ಮನೆ ಮಾರಾಟ ಮಾಡುವುದು ಒಳ್ಳೆಯ ನಿರ್ಧಾರವಲ್ಲ. ಕೆಲವೊಮ್ಮೆ ನಮ್ಮ ಜಾತಕದ ದೋಷಗಳು ಅಥವಾ ದಶಾ-ಭುಕ್ತಿಗಳ ಪ್ರಭಾವವು ಜೀವನದ ಘಟನೆಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ. ಸಂಪೂರ್ಣವಾಗಿ ಮನೆಯನ್ನು ಕೆಡುವುದರ ಬದಲಾಗಿ, ಕಿಟಕಿಗಳ ಬದಲಾಯಿಸಬಹುದು, ದ್ವಾರಗಳನ್ನು ಬದಲಾಯಿಸಬಹುದು, ಬಣ್ಣಗಳನ್ನು ಬದಲಾಯಿಸಬಹುದು ಮತ್ತು ನೀರಿನ ಟ್ಯಾಂಕ್ ಇರುವ ಸ್ಥಳಗಳನ್ನು ಬದಲಾವಣೆ ಮಾಡುವ ಮೂಲಕ ಮನೆಯಲ್ಲಿನ ನಕಾರತ್ಮಕ ಶಕ್ತಿಯನ್ನು ಕಡಿಮೆ ಮಾಡಬಹುದು. ಇದೆಲ್ಲದಕ್ಕೂ ಮೊದಲು ವಾಸ್ತು ತಜ್ಞರ ಸಲಹೆಯನ್ನು ಪಡೆದು ಮತ್ತು ಕೆಲವೊಂದು ದೋಷಗಳನ್ನು ನಾವು ಸರಿ ಮಾಡಲಾಗದಂತಹ ಸ್ಥಿತಿಯಲ್ಲಿ ಇದ್ದರೆ ಮಾತ್ರ ಮನೆ ಮಾರಾಟ ಮಾಡುವ ಬಗ್ಗೆ ಯೋಚಿಸುವುದು ಉತ್ತಮ.

ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿ ನೇತು ಹಾಕಬೇಕು? ಇಲ್ಲಿದೆ ವಾಸ್ತು ನಿಯಮ
ಮನೆಯಲ್ಲಿ ಕ್ಯಾಲೆಂಡರ್ ಎಲ್ಲಿ ನೇತು ಹಾಕಬೇಕು? ಇಲ್ಲಿದೆ ವಾಸ್ತು ನಿಯಮ

ವಾಸ್ತು ಶಾಸ್ತ್ರದ ಪ್ರಕಾರ ಅಡುಗೆಮನೆಯನ್ನು ಸಾಧ್ಯವಾದಷ್ಟು ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ಹಾಗೂ ಬಾತ್‌ರೂಮ್ ಅನ್ನು ಉತ್ತರ ಮತ್ತು ಪಶ್ಚಿಮ ದಿಕ್ಕಿನಲ್ಲಿ ಮಾಡುವುದು ಒಳ್ಳೆಯದು ಎಂದು ಹೇಳಲಾಗುತ್ತದೆ. ಮನೆಯು ಎಷ್ಟೇ ಚಿಕ್ಕದಾಗಿದ್ದರೊ ಈಶಾನ್ಯ ಭಾಗವನ್ನು ಖಾಲಿಯಾಗಿರಿಸಬೇಕು ಇದು ಮನೆಗೆ ಮಂಗಳಕರ ಎಂದು ಹೇಳಲಾಗುತ್ತದೆ. ಈ ಭಾಗದಲ್ಲಿ ಪೂಜಾ ಕೊಠಡಿ ಇಡುವುದು ಉತ್ತಮ. ಮನೆಗೆ ಸಾಕಷ್ಟು ಗಾಳಿ ಮತ್ತು ಬೆಳಕು ಬರುವಂತೆ ಕಿಟಕಿಗಳ ವ್ಯವಸ್ಥೆಯನ್ನು ಮಾಡುವುದು ಬಹಳ ಮುಖ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+