BPCL Recruitment: ಬರೋಬ್ಬರಿ 250 ಹುದ್ದೆಗಳ ನೇಮಕಾತಿ, ಆಕರ್ಷಕ ವೇತನ, ಇಂದೇ ಅರ್ಜಿ ಸಲ್ಲಿಸಿ

BPCL Recruitment Updates: ಭಾರತದ ಮಹಾರತ್ನ ಸಾರ್ವಜನಿಕ ವಲಯದ ಉದ್ಯಮವಾದ ಭಾರತ ಪೆಟ್ರೋಲಿಯಂ ಕಾರ್ಪೊರೇಷನ್ ಕಂಪನಿ (BPCL) ಪ್ರಸ್ತಕ 2026 ನೇ ಸಾಲಿನಲ್ಲಿ ಖಾಲಿ ಇರುವ ಹುದ್ದೇಗಳ ಭರ್ತಿಗೆ ಮುಂದಾಗಿದೆ. ಕಂಪನಿಯ ಜೂನಿಯರ್ ಮತ್ತು ಅಸೋಸಿಯೇಟ್ ಎಕ್ಸಿಕ್ಯೂಟಿವ್ ಹುದ್ದೆಗಳ ನೇಮಕಾತಿ ಅಧಿಸೂಚನೆ ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಇಲ್ಲಿನ ಮಾಹಿತಿ ತಿಳಿದು ಅರ್ಜಿ ಸಲ್ಲಿಸಬಹುದು. ನೇಮಕಾತಿ ವಿವರ ಮುಂದಿದೆ.

ಬಿಪಿಸಿಎಲ್ ನಲ್ಲಿ ವಿವಿಧ ತಾಂತ್ರಿಕ ಮತ್ತು ಆಡಳಿತಾತ್ಮಕ ವಿಭಾಗಗಳಲ್ಲಿ ಒಟ್ಟು 250 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇದೇ ಏಪ್ರಿಲ್ 18 ರಿಂದಲೇ ಪ್ರಕ್ರಿಯೆ ಪ್ರಾರಂಭವಾಗಿದ್ದು, 2026 ಮೇ 17 ಅರ್ಜಿ ಸಲ್ಲಿಕೆಗೆ ಅರ್ಜಿ ಸಲ್ಲಿಸಬಹುದಾಗಿದೆ ಂಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

BPCL Recruitment 2026

ನೇಮಕಾತಿ ಹೇಗಿರುತ್ತದೆ, ಮಾಸಿಕ ವೇತನ?

ಈ ನೇಮಕಾತಿ ಪ್ರಕ್ರಿಯೆಯು ಇಂಜಿನಿಯರಿಂಗ್, ಲೆಕ್ಕಪತ್ರ, ಗುಣಮಟ್ಟ ಭರವಸೆ ಮತ್ತು ಇತರ ಹಲವು ವಿಭಾಗಗಳನ್ನು ಒಳಗೊಂಡಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದಾದ್ಯಂತ ಬಿಪಿಸಿಎಲ್‌ನ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸಬೇಕಿರುತ್ತದೆ. ಎಲ್ಲಿಯೇ ಪೋಸ್ಟಿಂಗ್ ಸಿಕ್ಕರೂ ತೆರಳಲು ಸಿದ್ಧರಿರಬೇಕು. ವಾರ್ಷಿಕ 12.28 ಲಕ್ಷ ರೂ.ನಿಂದ 17.11 ಲಕ್ಷ ರೂಪಾಯಿವರೆಗೆ ಆಕರ್ಷಕ ವೇತನ ನೀಡಲಾಗುತ್ತದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದ್ದು, ಪರೀಕ್ಷಾ ದಿನಾಂಕವು ಶೀಘ್ರದಲ್ಲೇ ಪ್ರಕಟಗೊಳ್ಳಲಿದೆ. ಸಾಮಾನ್ಯ, ಇತರೆ ಹಿಂದುಳಿದ ವರ್ಗಗಳು (ಒಬಿಸ) ಮತ್ತು ಆರ್ಥಿಕವಾಗಿ ದುರ್ಬಲ ವರ್ಗಗಳ (ಇಡಬ್ಲುಎಸ್) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 1180 ರೂ. ನಿಗದಿಪಡಿಸಿದ್ದು, ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು. ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ (ಎಸ್‌ಟಿ) ಮತ್ತು ಬೆಂಚ್‌ಮಾರ್ಕ್ ವಿಕಲಚೇತನ (ಪಿಡಬ್ಲುಡಿ) ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಹುದ್ದೆಗಳ ವಿವರ, ಅರ್ಹತೆ ಏನೇನಿರಬೇಕು?

* ಜೂನಿಯರ್ ಎಕ್ಸಿಕ್ಯೂಟಿವ್ (ಇಂಜಿನಿಯರಿಂಗ್) ವಿಭಾಗದಲ್ಲಿ 175 ಹುದ್ದೆಗಳು ಖಾಲಿ ಇವೆ. ಈ ಹುದ್ದೆಗಳಿಗೆ ಸೇರಬಯಸುವವರು ಇಂಜಿನಿಯರಿಂಗ್ ಡಿಪ್ಲೊಮಾ ಹಾಗೂ ಐದು ವರ್ಷಗಳ ಅನುಭವ ಹೊಂದಿರುವುದು ಕಡ್ಡಾಯ.

* ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರ) ವಿಭಾಗದ 25 ಹುದ್ದೆಗಳಿಗೆ ಪದವಿ ಜೊತೆಗೆ ಸಿಎ/ಸಿಎಂಎ ಇಂಟರ್‍‌ನೀಡಿಯೆಟ್ ಪೂರ್ಣಗೊಳಿಸಿ ಐದು ವರ್ಷಗಳ ಕೆಲಸದ ಅನುಭವ ಹೊಂದಿರುವುದ ಕಡ್ಡಾಯಗೊಳಿಸಲಾಗಿದೆ.

* ಜೂನಿಯರ್ ಎಕ್ಸಿಕ್ಯೂಟಿವ್ (ವೇಸೈಡ್ ಅಮೆನಿಟೀಸ್) ಅಡಿಯಲ್ಲಿ 10 ಹುದ್ದೆಗಳಿಗೆ ವಾಣಿಜ್ಯ, ವ್ಯವಹಾರ ಆಡಳಿತ, ವಿಜ್ಞಾನ ಅಥವಾ ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್ ಪದವಿ ಜೊತೆ ಐದು ವರ್ಷಗಳ ಅನುಭವ ಇರಲೇಬೇಕಿದೆ.

* ಇನ್ನೂ ಕಾರ್ಯದರ್ಶಿ ಹುದ್ದೆಯ 8 ಸ್ಥಾನಗಳಿಗೆ 10ನೇ, 12ನೇ ತರಗತಿ ಹಾಗೂ ಯಾವುದೇ ವಿಷಯದಲ್ಲಿ ಪದವಿ ಜೊತೆ ಐದು ವರ್ಷಗಳ ಅನುಭವ ಇದ್ದವರು ಅರ್ಜಿ ಸಲ್ಲಿಸಬಹುದು.

* ಅಸೋಸಿಯೇಟ್ ಎಕ್ಸಿಕ್ಯೂಟಿವ್ ವಿಭಾಗದಲ್ಲಿ ಖಾಲಿ ಇರುವ 30 ಹುದ್ದೆಗಳಿದ್ದು, ಎಂ.ಎಸ್ಸಿ ಕೆಮಿಸ್ಟ್ರಿ ಪದವಿ ಜೊತೆಗೆ ಕನಿಷ್ಠ ಮೂರು ವರ್ಷಗಳ ಅನುಭವ ಇರಬೇಕು. ಅಸೋಸಿಯೇಟ್ ಎಕ್ಸಿಕ್ಯೂಟಿವ್ (ಅಧಿಕೃತ ಭಾಷೆ) ಹುದ್ದೆಯ 2 ಸ್ಥಾನಗಳಿಗೆ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಮತ್ತು ಮೂರು ವರ್ಷಗಳ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳ ವಯೋಮಿತಿ ಅರ್ಹತೆ ಮತ್ತು ಸಡಿಲಿಕೆ

* ಜೂನಿಯರ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ - ಗರಿಷ್ಠ 32 ವರ್ಷ
* ಜೂನಿಯರ್ ಎಕ್ಸಿಕ್ಯೂಟಿವ್ (ಲೆಕ್ಕಪತ್ರ) ಹುದ್ದೆ- 30 ರಿಂದ 35 ವರ್ಷ
* ಅಸೋಸಿಯೇಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ಗರಿಷ್ಠ- 35 ವರ್ಷ ಇರಬೇಕು

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರೆ ಹಿಂದುಳಿದ ವರ್ಗಗಳು, ಬೆಂಚ್‌ಮಾರ್ಕ್ ವಿಕಲಚೇತನರು ಮತ್ತು ಮಾಜಿ ಸೈನಿಕರಿಗೆ ಸರ್ಕಾರಿ ನಿಯಮಾವಳಿಗಳ ಪ್ರಕಾರ ವಯೋಮಿತಿ ಸಡಿಲಿಕೆ ಸಿಗಲಿದೆ.

ವಿವಿಧ ಹಂತಗಳಲ್ಲಿ ಅಭ್ಯರ್ಥಿಗಳ ಆಯ್ಕೆ

ಅರ್ಹ ಅಭ್ಯರ್ಥಿಗಳನ್ನು ಅಪ್ಲಿಕೇಶನ್ ಸ್ಕ್ರೀನಿಂಗ್, ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ಕೇಸ್ ಆಧಾರಿತ ಚರ್ಚೆ, ವೈಯಕ್ತಿಕ ಸಂದರ್ಶನ, ದಾಖಲೆ ಪರಿಶೀಲನೆ, ಮತ್ತು ವೈದ್ಯಕೀಯ ಪರೀಕ್ಷೆ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿಗಳ ಸಂಖ್ಯೆಗೆ ಅನುಗುಣವಾಗಿ ಆಯ್ಕೆ ಪ್ರಕ್ರಿಯೆಯ ಸ್ವರೂಪದಲ್ಲಿ ಬದಲಾವಣೆಗಳು ಆಗಬಹುದೆಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅರ್ಜಿ ಸಲ್ಲಿಕೆ ಲಿಂಕ್

ಅರ್ಜಿ ಸಲ್ಲಿಸಲು ಇಲ್ಲಿರುವ ಲಿಂಕ್ https://www.bharatpetroleum.in/bharat-petroleum-for/careers/job-openings ಬಳಸಬೇಕು. ಹೆಚ್ಚಿನ ಮಾಹಿತಿಗೆ ಒಂದೊಮ್ಮೆ ಅಧಿಸೂಚನೆ ಓದಿಕೊಂಡು ಅರ್ಜಿ ಸಲ್ಲಿಸಿದರೆ ಉತ್ತಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+