ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಂದ್ರಬಜೆಟ್‌; ಇದು ವೋಟರ್‌ಫ್ರೆಂಡ್ಲಿ ಬಜೆಟ್‌ !

By Staff
|
Google Oneindia Kannada News
  • ಆದಾಯ ತೆರಿಗೆ ಹಾಗೂ ವಾಣಿಜ್ಯ ತೆರಿಗೆಗಳಲ್ಲಿ ಯಾವುದೇ ಬದಲಾವಣೆಯಿಲ್ಲ .
  • ಹೊಸ ಆರೋಗ್ಯ ವಿಮೆ ಜಾರಿ. ಈ ಯೋಜನೆಯ ಪ್ರಕಾರ ವ್ಯಕ್ತಿಯು ದಿನಕ್ಕೆ ಒಂದು ರೂಪಾಯಿಯಂತೆ 365 ದಿನಗಳ ಕಾಲ ಹಾಗೂ ಐದು ಜನರ ಕುಟುಂಬವೊಂದಕ್ಕೆ ದಿನಕ್ಕೆ 1. 50 ರೂಪಾಯಿಗಳಂತೆ, ಏಳು ಜನರ ಕುಟುಂಬಕ್ಕೆ ದಿನಕ್ಕೆ ಎರಡು ರೂಪಾಯಿಯಂತೆ ಕಂತುಗಳನ್ನು ಕಟ್ಟಿದಲ್ಲಿ 30ಸಾವಿರ ರೂಪಾಯಿಗಳ ಆಸ್ಪತ್ರೆ ವೆಚ್ಚ, ಅಥವಾ ಸಾವು ಸಂಭವಿಸಿದಲ್ಲಿ 25 ಸಾವಿರ ರೂಪಾಯಿ ಪರಿಹಾರ ಧನಕ್ಕೆ ಆರ್ಹತೆ.
  • ಮಕ್ಕಳ ಶಿಕ್ಷಣಕ್ಕೆ ನೆರವು- ಪ್ರತಿ ಮಗುವಿನ ಶಿಕ್ಷಣದಲ್ಲಿ 12 ಸಾವಿರ ರೂಪಾಯಿಗಳವರೆಗಿನ ಟ್ಯಾಕ್ಸ್‌ ರಿಬೇಟ್‌.
  • 1 ಲಕ್ಷ 43 ಸಾವಿರ ರೂಪಾ ಯಿಯವರೆಗಿನ ಹಿರಿಯ ನಾಗರಿಕರ ಆದಾಯಕ್ಕೆ ಪೂರ್ಣ ತೆರಿಗೆ ವಿನಾಯಿತಿ.
  • ಬ್ಯಾಂಕುಗಳಿಂದ ಅತೀ ಹೆಚ್ಚು ಬಡ್ಡಿದರ ಸರಕಾರೀ ಬಾಂಡ್‌ಗಳ ಖರೀದಿ.
  • ಮನೆ ಸಾಲಗಳಿಗೆ ಇರುವ ಬಡ್ಡಿ ರಿಯಾಯಿತಿ ಮುಂದುವರಿಕೆ.
  • ಜೀವ ವಿಮಾ ನಿಗಮದಿಂದ ಪಿಂಚಣಿ ಸ್ಕೀಮ್‌.
  • 48 ಹೊಸ ರಸ್ತೆ ಕಾಮಗಾರಿ ಯೋಜನೆಗಳಿಗೆ 400 ಬಿಲಿಯನ್‌ ರೂಪಾಯಿ ವೆಚ್ಚ .
  • ಮುಂಬಯಿ , ದೆಹಲಿ ಏರ್‌ ಪೋರ್ಟ್‌ಗಳ ಆಧುನೀಕರಣ, ಹೈದರಾಬಾದ್‌ ಮತ್ತು ಬೆಂಗಳೂರಿನಲ್ಲಿ ಖಾಸಗಿ ಏರ್‌ಪೋರ್ಟ್‌ಗಳ ನಿರ್ಮಾಣ.
  • ಕ್ವಿಂಟಾಲ್‌ಗೆ 24 ರೂಪಾಯಿಯಂತೆ ಯೂರಿಯಾ ನೀಡಿಕೆ ದರದಲ್ಲಿ ಹೆಚ್ಚಳ.
  • ಬೃಹತ್‌ ಸಂಖ್ಯೆಯ ಜವುಳಿ ಯಂತ್ರಗಳ ಕಸ್ಟಮ್ಸ್‌ ಡ್ಯೂಟಿ ಶೇ 25ರಿಂದ ಶೇ 5ಕ್ಕೆ ಇಳಿಕೆ.
  • ಪಾಲಿಯಸ್ಟರ್‌ ಫಿಲಮೆಂಟ್‌ ಮೇಲಿನ ಉತ್ಪಾದನಾ ಸುಂಕ ಶೇ32ರಿಂದ ಶೇ 24ಕ್ಕೆ ಇಳಿಕೆ.
  • ಇತರ ಎಲ್ಲ ರೀತಿಯ ಫಿಲಮೆಂಟ್‌ಗಳಿಗೂ ಉತ್ಪಾದನಾ ಶೇ 16ರಿಂದ ಶೇ 12ಕ್ಕೆ ಇಳಿಕೆ.
  • ಟೆಲಿಕಾಮ್‌, ಐಟಿ, ಸರಕುಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿ ಶೇ 25ರಿಂದ ಶೇ 15ಕ್ಕೆ ಇಳಿಕೆ.
  • ಆಪ್ಟಿಕ್‌ ಫೈಬರ್‌ ಕೇಬಲ್‌ ಸರಕು ಮೇಲಿನ ಕಸ್ಟಮ್ಸ್‌ ಡ್ಯೂಟಿ ಶೇ 25ರಿಂದ 20ಕ್ಕೆ ಇಳಿಕೆ.
  • ಪಾಲಿಶ್‌ ಮಾಡಿದ ಹರಳುಗಳು, ಕಲ್ಲುಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿ ತೆಗೆದು ಹಾಕಲಾಗಿದೆ.
  • ಚಿನ್ನದ ಮೇಲಿನ ಕಸ್ಟಮ್ಸ್‌ ಡ್ಯೂಟಿಯನ್ನು 10 ಗ್ರಾಂಗೆ ರೂಪಾಯಿ 250ರಿಂದ 100ಕ್ಕೆ ಇಳಿಕೆ.
  • ಗಾರ್ಮೆಂಟ್ಸ್‌ ಮೇಲಿನ ಉತ್ಪಾದನಾ ಸುಂಕ ಶೇ 12ರಿಂದ 10ಕ್ಕೆ ಇಳಿಕೆ.
  • ಆರ್‌ ಆ್ಯಂಡ್‌ ಡಿ ಕಂಪೆನಿಗಳಿಗೆ ಟ್ಯಾಕ್ಸ್‌ ಹಾಲಿಡೇ.
  • ಏಪ್ರಿಲ್‌ 1ರಿಂದ ಸೇವಾ ತೆರಿಗೆ ಮತ್ತು ವ್ಯಾಟ್‌ ಜಾರಿ.
  • ತೆರಿಗೆ ಸುಧಾರಣೆಗಳ ಮೂಲಕ ಹಣಕಾಸು ಕ್ರೋಢೀಕರಣ.
  • ಡೀಸೆಲ್‌ ಮೇಲಿನ ಸೆಸ್‌ ಏರಿಸುವಿಕೆಯಿಂದ ಗ್ರಾಮೀಣ ರಸ್ತೆಗಳಿಗೆ ಹೆಚ್ಚುವರಿ ನಿಧಿ.
  • ಸರಕಾರೀ ನೌಕರರಿಗೆ ರಜಾ ಕಾಲೀನ ಪ್ರಯಾಣ ಭತ್ಯೆ ಮುಂದರಿಕೆ.
  • ಜೀವ ರಕ್ಷಕ ಉಪಕರಣಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿ ಇಳಿಕೆ.
  • ತೆರಿಗೆ ವಾಪಸಾತಿ ಬಗ್ಗೆ ಹಿರಿಯ ನಾಗರಿಕರಿಗೆ ಸ್ವಯಂ ಘೋಷಣಾ ಅವಕಾಶ.
  • ಹೈ ಟೆಕ್‌ ತೋಟಗಾರಿಕೆಗೆ ಹೊಸ ಯೋಜನೆ.
  • ಸೆಕ್ಷನ್‌ 10 ಎ ಮತ್ತು 12 ಬಿ ಅನ್ವಯ ಐಟಿ ಮೇಲಿ ರಿಯಾಯಿತಿಗಳು ಮುಂದುವರಿಕೆ.
  • ಐಟಿ ಕ್ಷೇತ್ರದ ಆದಾಯ ತೆರಿಗೆ ರಿಯಾಯಿತಿಗಳ ಮಾದರಿಯನ್ನೇ ಫಾರ್ಮಾಸ್ಯೂಟಿಕಲ್‌ ಹಾಗೂ ಬಯೋಟೆಕ್ನಾಲಜಿ ಕ್ಷೇತ್ರಕ್ಕೂ ಅಳವಡಿಕೆ.
  • ದೇಶದ ಕಡು ಗ್ರಾಮೀಣ ಪ್ರದೇಶಗಳೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಒಟ್ಟು 227 ನಿವೃತ್ತರ ಮೆಡಿಕಲ್‌ ಸೆಂಟರ್‌ಗಳ ಆರಂಭ, ಪ್ರಧಾನಿಯವರಿಂದ ಉದ್ಘಾಟನೆ.
  • ಹಿರಿಯ ನಾಗರಿಕರಿಗಾಗಿ ವರಿಷ್ಠ ವಿಮಾ ಯೋಜನೆ ಆರಂಭ.
  • ಟ್ರೆೃಸಿಕಲ್‌, ಶ್ರವಣ ಸಾಮಾಗ್ರಿಗಳ ಮೇಲಿನ ಕಸ್ಟಮ್ಸ್‌ ಡ್ಯೂಟಿಯಲ್ಲಿ ಶೇ 5ರಷ್ಟು ಇಳಿಕೆ.
  • ಪುಸ್ತಕಗಳೇ ಮೊದಲಾದ ಮೂಲಗಳಿಂದ ಬರುವ, 3 ಲಕ್ಷ ರೂಪಾಯಿಯಾಳಗಿನ ಗೌರವ ಧನಕ್ಕೆ ಆದಾಯ ತೆರಿಗೆಯಿಂದ ವಿನಾಯಿತಿ.
  • ಖಾಸಗಿ ಆಸ್ಪತ್ರೆಗಳಿಗೆ ತೆರಿಗೆಗಳಲ್ಲಿ ರಿಯಾಯಿತಿ.
  • ಕ್ರೀಡಾ ಮೂಲಭೂತ ಸೌಕರ್ಯಗಳಿಗೆ ನಿಧಿ ಒದಗಿಸಲು ಸದ್ಯದಲ್ಲೇ ಕ್ರಮ.
  • ಜೀವ ರಕ್ಷಕ ಸಲಕರಣೆಗಳ ಮೇಲಿನ ಕಸ್ಟಂಸ್‌ ಡ್ಯೂಟಿಯನ್ನು ಶೇ.25ರಿಂದ 5 ಕ್ಕೆ ಇಳಿಕೆ.
  • ಭಾರೀ ವಿದ್ಯುತ್‌ ಕಾಮಗಾರಿಗಳಲ್ಲಿ ಸರ್ಕಾರದ ಮೆದು ಧೋರಣೆ.
  • ಅಭಿವೃದ್ಧಿ ಕಾರ್ಯಗಳಿಗೆ ನಿಧಿ ಸಂಗ್ರಹಿಸಲು ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲೆ ಲೀಟರ್‌ಗೆ 50 ಪೈಸೆ ಹೆಚ್ಚುವರಿ ತೆರಿಗೆ.
  • 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 48 ಹೊಸ ರಸ್ತೆಗಳ ನಿರ್ಮಾಣ. 8 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ರಾಷ್ಟ್ರೀಯ ರೈಲ್‌ವಿಕಾಸ್‌ ಯೋಜನೆ. 11 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಬಂದರುಗಳ ಮೇಲ್ದರ್ಜೆಗೆ ಯೋಜನೆ. 1 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ 2 ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳ ನಿರ್ಮಾಣ.
  • ನೀರು ಪೂರೈಕೆ ಯೋಜನೆಗಳ ಮೇಲೆ ಯಾವುದೇ ತೆರಿಗೆ ಇಲ್ಲ .
  • ವಿದ್ಯುತ್‌ ಯೋಜನೆಗಳ ಮೇಲಿನ ಕಸ್ಟಂಸ್‌ ಡ್ಯೂಟಿ ಶೇ.5ಕ್ಕೆ ಇಳಿಕೆ.
(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X