20ನೇ ಶತಮಾನದ ಅಮೆರಿಕ : ಬಣ್ಣದ ಮಾತು

*ನಾಡಿಗೇರ್‌ ಚೇತನ್‌

ಚಂದ್ರನ ಮೇಲೆ ಮಾನವನ ಮೊದಲ ಹೆಜ್ಜೆ, ರೈಟ್‌ ಸಹೋದರರು ತಯಾರಿಸಿದ ಮೊದಲ ವಿಮಾನ, ಗಲ್ಫ್‌ ಯುದ್ಧದ ರಕ್ತ ರಂಗು, ಎಂಪೈರ್‌ ಎಸ್ಟೇಟ್‌ನ ಕಟ್ಟಡ, ಎರಡನೇ ಮಹಾಯುದ್ಧದಲ್ಲಿ ಮುಗಿಲು ಮುಟ್ಟಿದ ಆಕ್ರಂದನ, ದಿ ಗ್ರೇಟ್‌ ಡಿಪ್ರೆಷನ್‌... ಇವೆಲ್ಲಾ ಬೆಂಗಳೂರಿನ ಕನ್ನಡ ಭವನದಲ್ಲಿ !

20ನೇ ಶತಮಾನದಲ್ಲಿ ಅಮೆರಿಕೆಯಲ್ಲಿ ನಡೆದ ಘಟನಾವಳಿಗಳನ್ನು ಒಂದೇ ನಡೆಯಲ್ಲಿ ನೋಡಿ, ಮೆಲುಕು ಹಾಕುವ ಭಾಗ್ಯ ಕಲ್ಪಿಸಿದೆ ಚೆನ್ನೈನ ಅಮೆರಿಕನ್‌ ಕಾನ್ಸುಲೇಟ್‌ ಜನರಲ್‌. ಚಿತ್ರಗಳಿಗೆ ಮನೆ ಒದಗಿಸಿ ಸಹಕಾರ ಕೊಟ್ಟಿರುವುದು ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ.

ವಾಲ್ಟರ್‌ ಲ್ಯೂಬ್‌ಕೆನ್‌, ಲೂಯಿಸ್‌ ಹೈನ, ಜಾರ್ಜ್‌ ಡಬ್ಲ್ಯು. ಆಕರ್‌ಮನ್‌, ಡೊರೊಥಿಯ ಲ್ಯಾಂಜ್‌, ಆ್ಯನ್ಸೆಲ್‌ ಆ್ಯಡಮ್ಸ್‌, ಚಾರ್ಲ್ಸ್‌ ಫೆನ್ನೊ ಜಾಕಬ್ಸ್‌, ಡ್ಯಾನಿ ಲಯಾನ್‌... ಮೊದಲಾದ ದಿಗ್ಗಜರು ಕ್ಯಾನ್‌ವಾಸ್‌ ಮೇಲೆ ಚೆಲ್ಲಿದ ಕಲಾ ರಂಗು ಇದೋ ನಿಮ್ಮ ಪಾಲಿಗೆ- 110 ಅಪರೂಪದ ಚಿತ್ರಗಳನ್ನು ಆರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಅಮೆರಿಕೆಯ ನ್ಯಾಷನಲ್‌ ಆರ್ಕೈವ್ಸ್‌ ಅಂಡ್‌ ರೆಕಾರ್ಡ್ಸ್‌ ಅಡ್ಮಿನಿಸ್ಟ್ರೇಷನ್‌ ಈ ಚಿತ್ರಗಳನ್ನು ಆರಿಸಿದೆ.

ವಾರದ ಹಿಂದೆ ಈ ಚಿತ್ರ ಗ್ಯಾಲರಿಯನ್ನು ನೋಡುಗರಿಗೆ ಅನಾವರಣಗೊಳಿಸಿದ ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಡಾ.ಯು.ಆರ್‌.ಅನಂತ ಮೂರ್ತಿ ಸ್ಮೃತಿ ಪಟಲದಲ್ಲಿ ಇನ್ನೂ ಈ ಚಿತ್ರಗಳು ಅಚ್ಚಳಿಯದೆ ನಿಂತಿವೆ. ನಿಂತಲ್ಲೇ 20ನೇ ಶತಮಾನದ ಅಮೆರಿಕಾವನ್ನು ಬೆಂಗಳೂರಲ್ಲೇ ಕಣ್ಣುತುಂಬಿಕೊಳ್ಳುವ ಅಪರೂಪದ ಈ ಅವಕಾಶವನ್ನು ಮಿಸ್‌ ಮಾಡಿಕೊಳ್ಳಬೇಡಿ. ಅಂದಹಾಗೆ, ಈ ಚಿತ್ರ ಗ್ಯಾಲರಿ ಪ್ರದರ್ಶನ ನವೆಂಬರ್‌ 24ರವರೆಗೆ ಮಾತ್ರ.

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+