ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲ್‌ಬಾಗ್‌, ಕಬ್ಬನ್‌ಪಾರ್ಕಲ್ಲಿ ಪ್ಲಾಸ್ಟಿಕ್‌ ಬಿಸುಟರೆ 100 ರು. ದಂಡ!

By Staff
|
Google Oneindia Kannada News

ಬೆಂಗಳೂರು :ಲಾಲ್‌ಬಾಗ್‌, ಕಬ್ಬನ್‌ ಪಾರ್ಕಲ್ಲಿ ಪ್ಲಾಸ್ಟಿಕ್‌ ಚೀಲ, ಬಾಟ್ಲಿ ಬಿಸುಡುವವರಿಗೆ 100 ರುಪಾಯಿ ದಂಡ !

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಆದೇಶವನ್ನು ಜಾರಿ ಮಾಡಿದೆ. ಹಸಿರಿನ ಉಸಿರುಗಟ್ಟಿಸುವ ಪ್ಲಾಸ್ಟಿಕ್‌ಗಳನ್ನು ತಿನ್ನುವ ಪ್ರಾಣಿಗಳು ಸಾಯುತ್ತಿವೆ. ಬಿಸುಟ ಪ್ಲಾಸ್ಟಿಕ್‌ಗಳನ್ನು ವಿಲೇವಾರಿ ಮಾಡುವುದೇ ದೊಡ್ಡ ತಲೆನೋವಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರಿಗೆ ಈ ದಂಡ ವಿಧಿಸುವುದು ಅನಿವಾರ್ಯವಾಗಿದೆ ಎಂದು ಮಂಡಳಿ ಹೇಳಿದೆ.

ತೋಟಗಾರಿಕಾ ಇಲಾಖೆಗೆ ಈಗಾಗಲೇ ಈ ಕುರಿತು ಆದೇಶ ಕಳುಹಿಸಲಾಗಿದ್ದು, ತಪ್ಪಿತಸ್ಥರಿಂದ ದಂಡ ವಸೂಲು ಮಾಡುವ ಜವಾಬುದಾರಿ ಇಲಾಖೆಯದ್ದು. ಪದೇಪದೇ ದಂಡ ಕಟ್ಟುವ ಮಟ್ಟಿಗೆ ತಪ್ಪು ಮಾಡುವವರಿಗೆ ಸೆರೆವಾಸದ ಜೊತೆಗೆ 1 ಲಕ್ಷ ರುಪಾಯಿಯಷ್ಟು ದಂಡ ವಿಧಿಸುವುದಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿದೆ. ದಂಡದ ಮಾಹಿತಿಯನ್ನು ಜನರಿಗೆ ನೀಡುವ ಸಲುವಾಗಿ ಜಾಗೆಗಳಲ್ಲಿ ಫಲಕಗಳನ್ನು ಹಾಕಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 50 ಸಾವಿರ ರುಪಾಯಿ ಬಿಡುಗಡೆ ಮಾಡಿದೆ.

ಇದು ಮೊದಲ ಹಂತದ ಹೆಜ್ಜೆ. ಮುಂದೆ ನಂದಿ ಬೆಟ್ಟ, ಕುದುರೆಮುಖ ಮುಂತಾದ ಪ್ರವಾಸಿ ತಾಣಗಳಲ್ಲೂ ಪ್ಲಾಸ್ಟಿಕ್‌ ನಿಷೇಧವನ್ನು ಜಾರಿಗೆ ತರುವ ಬಗ್ಗೆ ಮಂಡಳಿ ಚಿಂತಿಸುತ್ತಿದೆ.

ಅದಿರಲಿ, ಇತ್ತೀಚೆಗೆ ಬನ್ನೇರುಘಟ್ಟದಲ್ಲಿ ಪ್ಲಾಸ್ಟಿಕ್‌ ತಿಂದು ಕೃಷ್ಣಮೃಗವೊಂದು ಸತ್ತಿತ್ತು. ಅಲ್ಲಿ ಪ್ಲಾಸ್ಟಿಕ್‌ ನಿಷೇಧಿಸಲು ಮಂಡಳಿ ಇನ್ನೂ ಯಾಕೆ ಮನಸ್ಸು ಮಾಡಿಲ್ಲ ?

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X