ಅಶೋಕ್‌ ಗುತ್ತೇದಾರ್‌ ಕೊಲೆ ಹಿನ್ನೆಲೆಯಲ್ಲಿ ಅಬಕಾರಿ ಮಾಫಿಯ?

ಬೆಂಗಳೂರು : ಆಳಂದ ಕ್ಷೇತ್ರದ ಶಾಸಕ ಸುಭಾಷ್‌ ಗುತ್ತೇದಾರ್‌ ಸಹೋದರ ಹಾಗೂ ಅಬಕಾರಿ ಗುತ್ತಿಗೆದಾರರಾದ ಅಶೋಕ್‌ ಆರ್‌. ಗುತ್ತೇದಾರ್‌ ಅವರು ಶನಿವಾರ ಮಧ್ಯರಾತ್ರಿ ಹಂತಕರ ಗುಂಡಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನಲ್ಲಿ ಪಾತಕಿಗಳ ಲೋಕದ ಅಟ್ಟಹಾಸ ಮತ್ತೆ ಗರಿಗೆದರಿರುವುದು ಸ್ಪಷ್ಟವಾಗಿದೆ.

ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ಮಾವನ ಮನೆಯಲ್ಲಿ ಅಶೋಕ್‌ ಗುತ್ತೇದಾರ್‌ ಕೊಲೆಯಾಗಿದ್ದು , ವಿವರಗಳು ಈವರೆಗೂ ಬಯಲಾಗಿಲ್ಲ . ಗುತ್ತೇದಾರ್‌ ಅವರು ಆತ್ಮರಕ್ಷಣೆಗಾಗಿ ಇರಿಸಿಕೊಂಡಿದ್ದ ರಿವಾಲ್ವರ್‌ನಿಂದಲೇ ಹಂತಕರು ಅವರನ್ನು ಕೊಂಡಿದ್ದಾರೆ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ಶಂಕಿಸಿದ್ದಾರೆ.

ಕೊಲೆಯಾದ ಸಂದರ್ಭದಲ್ಲಿ ಮನೆಯಲ್ಲಿ ಎಲ್ಲರೂ ಇದ್ದರೂ, ದುರ್ಘಟನೆ ಯಾರ ಗಮನಕ್ಕೂ ಬಂದಿಲ್ಲ . ಮಧ್ಯರಾತ್ರಿ ಸುಮಾರಿಗೆ ಅಶೋಕ್‌ರ ಪತ್ನಿ ಪದ್ಮಾ ಮಲಗುವ ಕೋಣೆಗೆ ಹೋದಾಗ ತಮ್ಮ ಪತಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಗಮನಿಸಿದರು. ಅಶೋಕ್‌ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಅಬಕಾರಿ ಹರಾಜಿಗಾಗಿ ಅಶೋಕ್‌ ಬೆಂಗಳೂರಿಗೆ ಬಂದಿದ್ದರು. ಅಬಕಾರಿ ಮಾಫಿಯಾ ಅಶೋಕ್‌ ಅವರನ್ನು ಬಲಿ ತೆಗೆದುಕೊಂಡಿರುವ ಶಂಕೆಯೂ ಇದೆ. ಕೊಲೆಯ ರಹಸ್ವನ್ನು ಬೇಧಿಸಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿದೆ.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+