Get Updates
Get notified of breaking news, exclusive insights, and must-see stories!

ಬಾಗಲಕೋಟೆಯನ್ನು ಕನ್ನಡ ತಿಂಗಳಲ್ಲಿ ಮುತ್ತಲಿರುವ ಶರಣರ ಕಂಪು

ಬಾಗಲಕೋಟೆ : ಈ ವರ್ಷದ ನವಂಬರ್‌ ತಿಂಗಳಲ್ಲಿ ಕನ್ನಡದ ಕಂಪಿನ ಜೊತೆಗೆ ಶರಣ ಜನದ ಕಂಪು ಬಾಗಲಕೋಟೆ ಪಟ್ಟಣವನ್ನು ತುಂಬಲಿದೆ.

ಅಖಿಲ ಭಾರತ ಏಳನೆಯ ಶರಣ ಸಾಹಿತ್ಯ ಸಮ್ಮೇಳನವನ್ನು ಬಾಗಲಕೋಟೆಯಲ್ಲಿ ನಡೆಸಲು, ಬಾಗಲಕೋಟೆ ಬಸವೇಶ್ವರ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಇತ್ತೀಚೆಗೆ ನಡೆದ ಪೂರ್ವಭಾವಿ ಸಮಾಲೋಚನಾ ಸಭೆ ಈ ನಿರ್ಧಾರ ಕೈಗೊಂಡಿದೆ ಶರಣ ಸಾಹಿತ್ಯ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಸಮ್ಮೇಳನದ ರೂಪು ರೇಷೆಗಳನ್ನು ಸಭೆಯಲ್ಲಿ ವಿವರಿಸಿದರು. ಇಳಕಲ್ಲಿನ ಚಿತ್ತರಗಿ ಸಂಸ್ಥಾನ ಮಠದ ಶ್ರೀ ಮಹಾಂತ ಶಿವಯೋಗಿಗಳು ಮತ್ತು ಬಾಗಲಕೋಟೆ ಚರಂತಿಮಠದ ಪ್ರಭುಸ್ವಾಮಿಗಳ ಗೌರವಾಧ್ಯಕ್ಷತೆ ಮತ್ತು ಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ವೀರಣ್ಣ ಚರಂತಿಮಠದ ಕಾರ್ಯಾಧ್ಯಕ್ಷತೆಯಲ್ಲಿ ಸಮ್ಮೇಳನದ ಸ್ವಾಗತ ಸಮಿತಿ ರಚಿಸಬೇಕೆಂದು ಸಭೆ ನಿರ್ಧರಿಸಿತು.

ಡಾ।ನಾಗಲೋತಿಮಠ, ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಹಿರೇಮಠ ಹಾಗೂ ಜಿಲ್ಲೆಯ ಹಿರಿಯ ಸಾಹಿತಿಗಳು ಸಭೆಯಲ್ಲಿ ಭಾಗವಹಿಸಿದ್ದರು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+