ಇನ್ನು ಸ್ವಲ್ಪ ಹೊತ್ತು ಕರೆಂಟು ಬರದಿದ್ದರೆ 21 ಕೂಸುಗಳು ಬದುಕುತ್ತಿರಲಿಲ್ಲ
ಬೆಂಗಳೂರು : ಮೇ 14, ಮಂಗಳವಾರ. ನಗರದ ಪ್ರತಿಷ್ಠಿತ ಆಸ್ಪತ್ರೆಯಾಂದರಲ್ಲಿ ಕರೆಂಟು ಖೋತಾ. ಜನರೇಟರ್ರೂ ಕೈಕೊಟ್ಟಿತು. ಆಸ್ಪತ್ರೆಯ ಎಲ್ಲಾ ದೀಪಗಳೂ ನಂದಿ ಹೋದವು. ಕರೆಂಟನ್ನೇ ನೆಚ್ಚಿಕೊಂಡಿದ್ದ ವೈದ್ಯಕೀಯ ಉಪಕರಣಗಳು ಕಣ್ಣು ಮುಚ್ಚಿದವು. ಎಲ್ಲಕ್ಕೂ ಮಿಗಿಲಾಗಿ, ಇನ್ಕ್ಯುಬೇಟರ್ನಲ್ಲಿ ಮಲಗಿದ್ದ 21 ಕಂದಮ್ಮಗಳು ಜೀವನ್ಮರಣ ಹೋರಾಟ ನಡೆಸಿದವು!
ಗ್ರಿಡ್ ವೈಫಲ್ಯದ ಪರಿಣಾಮ ಎಗ್ಗು ಸಿಗ್ಗಿಲ್ಲದೆ ಖೋತಾ ಆಗುತ್ತಿರುವ ವಿದ್ಯುತ್ತಿನ ದೆಸೆಯಿಂದ ಸಾಮಾಜಿಕ ವ್ಯವಸ್ಥೆ ಏನೆಲ್ಲಾ ಸ್ವರೂಪದ ತೊಂದರೆಗಳನ್ನು ಎದುರಿಸಬೇಕಾಗುತ್ತಿದೆ ಎಂಬುದಕ್ಕೆ ಇದು ಇನ್ನೊಂದು ನಮೂನೆ. ಪುಣ್ಯಕ್ಕೆ ಅರ್ಧ ತಾಸು ಕಳೆದಿತ್ತು ಅಷ್ಟೆ. ಅಷ್ಟರಲ್ಲಿ ಕರೆಂಟು ಬಂತು. ನಲುಗಿಹೋಗುತ್ತಿದ್ದ ಇನ್ಕ್ಯುಬೇಟರಿನ ಮಕ್ಕಳಿಗೆ ದೊರೆತದ್ದು ಅಕ್ಷರಶಃ ಮರುಜೀವ.
ಅಂದಹಾಗೆ, ಈ ಆಸ್ಪತ್ರೆ ಯಾವತ್ತೂ ಇಂಥಾ ತೊಂದರೆ ಅನುಭವಿಸಿರಲಿಲ್ಲವಂತೆ. ಖಾಸಗಿ ಆಸ್ಪತ್ರೆಗಳ ಸ್ಥಿತಿಯೇ ಹೀಗಾದರೆ ಸರ್ಕಾರಿ ಆಸ್ಪತ್ರೆಗಳ ಗತಿ? ದೇವರೇ ಗತಿ. ಯಾಕೆಂದರೆ, ಜನರೇಟರಿನ ಮುಖ ಕೂಡ ಕಾಣದ ಸರ್ಕಾರಿ ಆಸ್ಪತ್ರೆಗಳು ಅಸಂಖ್ಯ.
(ಇನ್ಫೋ ವಾರ್ತೆ)
ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications