ಬೊಜ್ಜು ಕರಗಿಸಿ : ಹೊಟ್ಟೆ ಪೊಲೀಸರಿಗೆ ಸಾಂಗ್ಲಿಯಾನ ಬೀಸುದೊಣ್ಣೆ
ಬೆಂಗಳೂರು : ಬೆಂಗಳೂರಿನ ಹೊಟ್ಟೆ ಪೊಲೀಸರು ಡಯಟ್ ಮಾಡುತ್ತಿದ್ದಾರೆ!
ಹೌದು, ಪೊಲೀಸ್ ಕಮಿಷನರ್ ಎಚ್.ಟಿ.ಸಾಂಗ್ಲಿಯಾನ ಅವರಿಗೆ ಬೊಜ್ಜು ಇರುವ ಪೊಲೀಸರ ಕಂಡರೆ ನಖಶಿಖಾಂತ ಉರಿದುಹೋಗುತ್ತದೆ. ಇದು ಬೊಜ್ಜು ಇರುವ ಪೊಲೀಸರೇ ಹೇಳಿಕೊಂಡಿರುವ ವಿಷಯ. ಅಷ್ಟೇ ಅಲ್ಲ, ಸಾಂಗ್ಲಿಯಾನ ಅವರ ಸಲಹೆಯಂತೆ ಅಲ್ಲಿ- ಇಲ್ಲಿ ಊಟ ಮಾಡುವುದನ್ನು ಬಿಟ್ಟು, ಮನೆಯಿಂದ ಮುದ್ದೆ ಊಟದ ಬುತ್ತಿ ಹೊತ್ತು ತರುವ ಪೊಲೀಸರ ಸಂಖ್ಯೆಯೂ ಬೆಳೆಯುತ್ತಿದೆ.
ಮೈಸೂರು ರಸ್ತೆಯ ಪೊಲೀಸ್ ಮೈದಾನದಲ್ಲಿ ಶುಕ್ರವಾರ ನಡೆದ ಪಶ್ಚಿಮ ವಿಭಾಗದ ಪೊಲೀಸ್ ಕವಾಯಿತಿನಲ್ಲಿ ಭಾಗವಹಿಸಿದ ಸಾಂಗ್ಲಿಯಾನ ಪೊಲೀಸರಿಗೆ ಕೊಟ್ಟ ಎಚ್ಚರಿಕೆ ಬೊಜ್ಜು ಕರಗಿಸಲೇಬೇಕೆಂಬುದು. ಬೊಜ್ಜು ಕರಗಿಸದಿದ್ದಲ್ಲಿ ಬಡ್ತಿ ಸಿಗುವುದಿಲ್ಲ. ಯಾವುದೇ ಸವಲತ್ತೂ ಕೊಡುವುದಿಲ್ಲ. ಬದಲಿಗೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ನೇರವಾಗಿ ಗದರಿದರು.
ಉತ್ತಮ ಸೇವೆ ಸಲ್ಲಿಸಿದ ಪೊಲೀಸರಿಗೆ ಪ್ರಶಸ್ತಿ ಕೊಡುವ ಸಮಾರಂಭ ಇದಾಗಿತ್ತು. ಆದರೆ ಕವಾಯಿತು ಮಾಡಿದ ಅನೇಕ ಪೊಲೀಸರಲ್ಲಿ ಶಿಸ್ತಿರಲಿಲ್ಲ. ಸರಿಯಾದ ರೀತಿಯಲ್ಲಿ ಹೆಜ್ಜೆ ಹಾಕುತ್ತಿರಲಿಲ್ಲ. ಬೊಜ್ಜಿರುವ ಪೊಲೀಸರ ಹಿಂಡು ಹಿಂಡೇ ಸಾಂಗ್ಲಿಯನ ಕಣ್ಣಿಗೆ ಬಿದ್ದವು. ಪೊಲೀಸರು ಸೋಮಾರಿತನ ಬಿಟ್ಟು ಕೆಲಸ ಮಾಡಬೇಕು. ಇಲ್ಲವಾದರೆ ಬೊಜ್ಜು ಬರುತ್ತದೆ. ಜನ ಇಂಥಾ ಪೊಲೀಸರನ್ನು ನೋಡಿ ತಮಾಷೆ ಮಾಡುತ್ತಾರೆ, ನಾಚಿಕೆಯಾಗಬೇಕು ಎಂದು ಸಾಂಗ್ಲಿಯಾನ ತರಾಟೆಗೆ ತೆಗೆದುಕೊಂಡರು.
ಭ್ರಷ್ಟ, ಲೋಲುಪ ಎಂಬ ಆರೋಪದ ಮೇಲೆ ಬನಶಂಕರಿ ಇನ್ಸ್‌ಪೆಕ್ಟರ್ ಅಮಾನತ್ತು
ಯುಗಾದಿ ದಿನ ಜೂಜು ಆಡುತ್ತಿದ್ದ 16 ಮಂದಿಯನ್ನು ಬಂಧಿಸಿ, ಲಕ್ಷಾಂತರ ರುಪಾಯಿ ಲಂಚ ವಸೂಲಿ ಮಾಡಿ, ಪ್ರಕರಣವನ್ನೇ ದಾಖಲಿಸದ ಬನಶಂಕರಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಚಂದ್ರಮೋಹನ್‌ನನ್ನು ಅಮಾನತ್ತುಗೊಳಿಸಲಾಗಿದೆ.
ನಗರ ಪೊಲೀಸ್ ಆಯುಕ್ತ ಎಚ್.ಟಿ.ಸಾಂಗ್ಲಿಯಾನ ಶುಕ್ರವಾರ ಅಮಾನತ್ತಿನ ಆದೇಶ ಹೊರಡಿಸಿದರು. ಚಂದ್ರಮೋಹನ್ ಭ್ರಷ್ಟಾಚಾರದ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಬನಶಂಕರಿ ಠಾಣೆಯ ಎಸಿಪಿ ಹಾಗೂ ಡಿಸಿಪಿ ತನಿಖೆ ನಡೆಸಿ, ವರದಿಯನ್ನು ಸಾಂಗ್ಲಿಯಾನ ಅವರಿಗೆ ಸಲ್ಲಿಸಿದ್ದರು.
ಚಂದ್ರಮೋಹನ್ ಕೇವಲ ಭ್ರಷ್ಟ ಅಧಿಕಾರಿಯಷ್ಟೇ ಅಲ್ಲದೆ ಹೆಂಗಸರನ್ನು ಕೀಳು ದೃಷ್ಟಿಯಲ್ಲಿ ನೋಡುತ್ತಿದ್ದ ಎಂಬುದೂ ಸಾಕ್ಷಿ ಸಮೇತ ರುಜುವಾತಾಗಿದೆ. ಈ ಹಿಂದೆ ಸಿವಿಲ್ ಪ್ರಕರಣವೊಂದರಲ್ಲಿ ಹೆಂಗಸೊಬ್ಬರಿಂದ 2 ಸಾವಿರ ರುಪಾಯಿ ಲಂಚ ಪಡೆದದ್ದಲ್ಲದೆ, ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಬೇಕೆಂದೂ ಚಂದ್ರಮೋಹನ್ ಕೇಳಿದ್ದ. ಆ ಹೆಂಗಸು ಚಂದ್ರಮೋಹನ್ ಮಾತುಗಳನ್ನು ಕೆಸೆಟ್ಟೊಂದರಲ್ಲಿ ರೆಕಾರ್ಡ್ ಮಾಡಿದ್ದು, ಪ್ರಮುಖ ಸಾಕ್ಷ್ಯವಾಗಿದೆ. ಈ ಎಲ್ಲಾ ಸಾಕ್ಷ್ಯಾಧಾರಗಳ ಹಿನ್ನೆಲೆಯಲ್ಲಿ ಸಾಂಗ್ಲಿಯಾನ ಅಮಾನತ್ತು ಆದೇಶ ಹೊರಡಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸಾಂಗ್ಲಿಯಾನಾ ವಾಚ್
-
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
Banana Price: ತಮಿಳುನಾಡು ಬಿಸಿಗಾಳಿ ಎಫೆಕ್ಟ್ಗೆ ಕುಸಿದ ಬಾಳೆಹಣ್ಣು ಧಾರಣೆ: ಬೆಂಗಳೂರಿನಲ್ಲಿ ಕೆ.ಜಿಗೆ 7 ರೂಪಾಯಿ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
Asha Bosle Net Worth: ದೇಶ-ವಿದೇಶಗಳಲ್ಲಿ ರೆಸ್ಟೊರೆಂಟ್ಸ್, ನೂರಾರು ಕೋಟಿ ಒಡತಿ ಆಶಾ ಭೋಸ್ಲೆ ಒಟ್ಟು ಆಸ್ತಿ ವಿವರ ಹೀಗಿದೆ -
Summer Specail Train: ಮೈಸೂರಿನಿಂದ ಇಲ್ಲಿಗೆ ವಿಶೇಷ ಎಕ್ಸ್ಪ್ರೆಸ್ ರೈಲು, 3 ರಾಜ್ಯಗಳಿಗೆ ಅನುಕೂಲ












Click it and Unblock the Notifications