ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಟಿ ಹತ್ತಿ ನಿಷೇಧಿಸದಿದ್ದಲ್ಲಿ ದೇಶವ್ಯಾಪೀ ಚಳವಳಿ-ನಂಜುಂಡಸ್ವಾಮಿ ಎಚ್ಚರಿಕೆ

By Staff
|
Google Oneindia Kannada News

ಧಾರವಾಡ: ಬಿಟಿ ಹತ್ತಿ ಸೇರಿದಂತೆ ಏಕಬೆಳೆ ಬೀಜಗಳನ್ನು ನಿಷೇಧಿಸದೇ ಇದ್ದಲ್ಲಿ ದೇಶಾದ್ಯಂತ ಬಹೃತ್‌ ಚಳವಳಿ ನಡೆಸುವುದಾಗಿ ಉತ್ತರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡಿನ ರೈತಮುಖಂಡರು ಸರಕಾರಕ್ಕೆ ಧಮಕಿ ಹಾಕಿದ್ದಾರೆ.

ಉತ್ತರಪ್ರದೇಶದ ರೈತ ಮುಖಂಡ ಮಹೇಂದ್ರ ಸಿಂಗ್‌ ಟಿಕಾಯತ್‌,ಇ ತಮಿಳುನಾಡಿನ ರೈತ ನಾಯಕ ಸೆಲ್ವ ಮುತ್ತು ಹಾಗೂ ಕನಾಂಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಪ್ರೊ. ಎಂ.ಡಿ. ನಂಜುಡ ಸ್ವಾಮಿ ಬುಧವಾರ ಏಕಬೆಳೆ ಬೀಜಗಳ ಬಗ್ಗೆ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ ರಾಜಸ್ಥಾನ ಹಾಗೂ ತಮಿಳುನಾಡಿನಲ್ಲಿ ಬಿಟಿ ಹತ್ತಿಗೆ ಪ್ರವೇಶವಿಲ್ಲ. ಅಲ್ಲಿನ ಕೃಷಿ ಸಚಿವರು ಹಾಗೂ ಅಧಿಕಾರಿಗಳು ಈ ಹತ್ತಿ ತಳಿಯ ವಿರುದ್ಧ ದನಿ ಎತ್ತಿದ್ದಾರೆ. ಆದರೆ ಕರ್ನಾಟಕದಲ್ಲಿ ಮಾತ್ರ ಸರಕಾರ ಬಿಟಿ ಹತ್ತಿಗೆ ರತ್ನಗಂಬಳಿ ಹಾಸಿ ಬರಮಾಡಿಕೊಳ್ಳುತ್ತಿದೆ. ಇದರ ವಿರುದ್ಧ ನಾವು ರಾಷ್ಟ್ರವ್ಯಾಪೀ ಚಳವಳಿ ನಡೆಸುತ್ತೇವೆ ಎಂದು ಸಂಯುಕ್ತ ಸುದ್ದಿಗೋಷ್ಠಿಯಲ್ಲಿ ಮೂರು ರಾಜ್ಯದ ನಾಯಕರು ತಿಳಿಸಿದ್ದಾರೆ.

ರಾಜ್ಯದ ಎಲ್ಲ ರೈತರು ಏಕ ಬೆಳೆ ಬೀಜಗಳನ್ನು ಬಳಸಬಾರದು ಎಂದು ಮನವಿ ಮಾಡಿಕೊಂಡ ನಂಜುಂಡ ಸ್ವಾಮಿ ಏಕ ಬೆಳೆ ಬೀಜಗಳ ಬಿತ್ತುವ ರೈತರ ಹೊಲಕ್ಕೆ ಬೆಂಕಿ ಇಡಲಾಗುವುದು. ರಾಯಚೂರು, ಕೊಪ್ಪಳ, ಶಿವಮೊಗ್ಗ ಮತ್ತಿತರ ಕಡೆಗಳಲ್ಲಿ ಮೊನ್ಸಾಂಟೋ ಬಿಟಿ ಹತ್ತಿ ಸುಡುವ ಕಾರ್ಯ ಮುಂದುವರೆದಿದ್ದು, ಇಂತಹ ಅಪಾಯಕಾರಿ ಬೀಜಗಳನ್ನು ಮಾರಾಟ ಮಾಡುವ ಅಂಗಡಿಗಳ ಮೇಲೆ ಧಾಳಿ ನಡೆಸಲಾಗುವುದು, ಇದು ರೈತ ಸಂಘದ ಕಡೆಯ ಎಚ್ಚರಿಕೆ ಎಂದು ಗುಡುಗಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X