ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಟ್ಸ್‌ಕನ್ನಡ ಡಾಟ್‌ ಕಾಂ ಪ್ರವಾಸಿಕೈಪಿಡಿ- ಬೆಂಗಳೂರು ನಗರ

By Oneindia Staff
|
Google Oneindia Kannada News

ಭಾರತದ ಸಿಲಿಕಾನ್‌ ವ್ಯಾಲಿ ಎಂದು ಪ್ರಸಿದ್ಧವಾಗಿರುವ ಬೆಂಗಳೂರನ್ನು ಕೆಂಪೇಗೌಡ 1537 ರಲ್ಲಿ ಕಟ್ಟಿದ. ದೇಶದ ಮಹಾ ನಗರಗಳಲ್ಲಿ ಒಂದಾದರೂ, ಬೆಂಗಳೂರು ಇವತ್ತಿಗೂ ಸಾಕಷ್ಟು ಮಟ್ಟಿಗೆ ಹಸಿರನ್ನು ಆಕರ್ಷಣೆಯನ್ನು ಉಳಿಸಿಕೊಂಡ ನಗರ. ರೂಪಕದ ದೃಷ್ಟಿಯಲ್ಲಿ ಹೇಳುವುದಾದರೆ ತುಂಬು ಜವ್ವನೆಯ ಆಕರ್ಷಣೆ ಬೆಂಗಳೂರಿನದು. ನೋಡಲಬೇಕಾದ ಅನೇಕ ಚಾರಿತ್ರಿಕ- ಸಾಂಸ್ಕೃತಿಕ ಸ್ಥಳಗಳೂ ಇಲ್ಲಿವೆ.

ಇತ್ತೀಚಿನ ವರ್ಷಗಳಲ್ಲಿ ರಾಜ ತಾಂತ್ರಿಕರು, ವಿಜ್ಞಾನಿಗಳು ಮತ್ತು ಉನ್ನತ ಸ್ಥರದ ರಾಜಕಾರಣಿಗಳಿಗೆ ಇನ್ಫೋಸಿಸ್‌ ಆಧುನಿಕ ಬೆಂಗಳೂರಿನ ದೇಗುಲವಾಗಿದೆ. ಆದರೆ ನಾವು ಮಾತನಾಡುತ್ತಿರುವುದು ಜನ ಸಾಮಾನ್ಯರ ದೃಷ್ಟಿಯಿಂದ. ಅವರೆಲ್ಲ ಕೈ ಮುಗಿದು ಒಳಗೆ ಬರಬೇಕಾದ ಸಸ್ಯಕಾಶಿ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಇಲ್ಲಿದೆ. ಬೆಂಗಳೂರಿನ ಅರಮನೆ ಮತ್ತು ಅರಮನೆಯನ್ನು ನಾಚಿಸುವಂಥ ಪಂಚತಾರಾ ಹೊಟೇಲುಗಳ ಆತಿಥ್ಯಕ್ಕೂ ಬೆಂಗಳೂರು ಹೆಸರುವಾಸಿ. ವಾಯು ಮಾಲಿನ್ಯ ದಿನೇ ದಿನೇ ಏರುತ್ತಿದೆ. ಮಾಲಿನ್ಯದ ಪ್ರಮಾಣ ದೆಹಲಿ, ಮುಂಬಯಿ ಮತ್ತು ಕೋಲ್ಕತಾ ಮೀರುವುದರೊಳಗೆ ಬೆಂಗಳೂರನ್ನು ಆಸ್ವಾದಿಸಿಬಿಡಿ.

ಸಹಾಯ ಬೇಕೆ? ಪ್ರಿಯಾ ಅವರನ್ನು ಸಂಪರ್ಕಿಸಿ- ಫೋನು : 91-80-5735289
ಇ- ಮೇಲ್‌ :
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X