ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿ.ಸು.ಕೃಷ್ಣಶೆಟ್ಟಿ ಅವರ ವರ್ಣಾವರಣಕ್ಕೆ ದಶಕದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿ

By Staff
|
Google Oneindia Kannada News

Decades award for Chi.Su.Krishnashettys Anaavaranaಬೆಂಗಳೂರು : ನಾಡಿನ ಪ್ರಸಿದ್ಧ ಕಲಾವಿದ ಹಾಗೂ ಕಲಾ ವಿಮರ್ಶಕ ಚಿ.ಸು.ಕೃಷ್ಣಶೆಟ್ಟಿ ಅವರ ವರ್ಣಾವರಣ ಕೃತಿ ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್‌ ಪ್ರತಿಷ್ಠಾನದ ದಶಕದ ಶ್ರೇಷ್ಠ ಸಾಹಿತ್ಯ ಪ್ರಶಸ್ತಿಗೆ ಪಾತ್ರವಾಗಿದೆ.

ಪ್ರಶಸ್ತಿ ಪತ್ರ, ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ಹೊಂದಿರುವ ಪ್ರಶಸ್ತಿಯನ್ನು ಜೂನ್‌ 9 ರಂದು ಕೊಪ್ಪಳದಲ್ಲಿ ನಡೆಯುವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ. ವರ್ಣಾವತರಣ ಕೃತಿ ಇತ್ತೀಚೆಗಷ್ಟೇ ಗೊರೂರು ಪ್ರಶಸ್ತಿಯನ್ನು ಪಡೆದಿತ್ತು .

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದ ಕೃಷ್ಣಶೆಟ್ಟಿ ಅವರು ರಾಜ್ಯದ ಪ್ರಸಿದ್ಧ ಸೃಜನಶೀಲ ಕಲಾವಿದರಲ್ಲೊಬ್ಬರು. ದೇಶದ ವಿವಿಧ ಭಾಗಗಳಲ್ಲಿ ಹಾಗೂ ವಿದೇಶದಲ್ಲೂ ಅವರ ಕಲಾಕೃತಿಗಳ ಪ್ರದರ್ಶನ ನಡೆದಿದೆ. ಕಲಾವಿದ, ಅಂಕಣಕಾರ, ವಿಮರ್ಶಕ ಹಾಗೂ ಕಾಪಿರೈಟರ್‌ ಆಗಿ ಪ್ರಸಿದ್ಧರಾಗಿರುವ ಕೃಷ್ಣಶೆಟ್ಟಿ- ಬಿಇಎಂಎಲ್‌ನಲ್ಲಿ ಉದ್ಯೋಗಿ.

ಕರ್ನಾಟಕ ಲಲಿತ ಕಲಾ ಅಕಾಡೆಮಿ, ಸೆಂಟ್ರಲ್‌ ಬೋರ್ಡ್‌ ಆಫ್‌ ಫಿಲಂ ಸೆನ್ಸಾರ್‌ ಇನ್ನಿತರ ಸಂಘ ಸಂಸ್ಥೆಗಳ ವಿವಿಧ ಹುದ್ದೆಗಳಲ್ಲಿ ಕೃಷ್ಣಶೆಟ್ಟಿ ಸೇವೆ ಸಲ್ಲಿಸಿದ್ದು , ಅವರ ಕಾರ್ಯಕ್ರಮಗಳು ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರವಾಗಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X