ಬಹಿರಂಗ ಸಭೆಯಲ್ಲಿ ಸಮಾಜವಾದಿ ಪಕ್ಷದ ಮನಝೂರ್ ಅಹ್ಮದ್ ಹತ್ಯೆ
ಲಖನೌ: ರಾಜಭವನದ ಹೊರಭಾಗದಲ್ಲಿ ರ್ಯಾಲಿಯಾಂದನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಸಮಾಜವಾದಿ ಪಕ್ಷದ ಶಾಸಕ ಮನಝೂರ್ ಅಹ್ಮದ್ ಅವರನ್ನು ಹಂತಕರು ಗುಂಡಿಟ್ಟು ಕೊಂದಿದ್ದಾರೆ.
ಬುಧವಾರ ಮಧ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಬರೇಲಿಯ ಬಹೇರಿ ವಿಧಾನ ಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದ ಮನಝೂರ್ ಅವರು, ಪಕ್ಷದ ರ್ಯಾಲಿಯಲ್ಲಿ ಮುಖ್ಯಭಾಷಣ ಮಾಡುತ್ತಿದ್ದರು. ಗುಂಡು ಹಾರಿಸಿ ಹತ್ಯೆ ಮಾಡಿದರೆಂದು ಸಂಶಯಿಸಲಾದ ಇಬ್ಬರು ವ್ಯಕ್ತಿಗಳನ್ನು ಗುರುತಿಸಲಾಗಿದ್ದು, ಒಬ್ಬ ವ್ಯಕ್ತಿಯನ್ನು ಈಗಾಗಲೇ ಬಂಧಿಸಲಾಗಿದೆ. ಆತನನ್ನು ಹೆಸರು ಅಭಿಷೇಕ್ ಭಾರದ್ವಾಜ್ ಎಂದು ಗುರುತಿಸಲಾಗಿದೆ.
ಮನಝೂರ್ ಹತ್ಯೆಯ ಹಿಂದೆ ವೈಯಕ್ತಿಕ ದ್ವೇಷಗಳೇ ಕೆಲಸ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರೆದಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications