ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮನಗರ ಮತದಾರರ ಪಟ್ಟಿ ದೋಷಪೂರಿತ: ಸಿ.ಎಂ.ಲಿಂಗಪ್ಪ ಆರೋಪ

By Staff
|
Google Oneindia Kannada News

ಬೆಂಗಳೂರು : ಕನಕಪುರ ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಶಾಂತಿಯುತವಾಗಿ ನಡೆಯುತ್ತಿದ್ದು, ಮಧ್ಯಾಹ್ನದವರೆಗೆ ಉತ್ತರ ಹಳ್ಳಿಯಲ್ಲಿ ಇತಿ ಹೆಚ್ಚು ಅಂದರೆ ಶೇ.35ರಷ್ಟು ಮತದಾನ ಆಗಿದೆ. ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ ಮಂದಗತಿಯಲ್ಲಿ ಸಾಗಿದ್ದ ಮತದಾನ ಆನಂತರ ಚುರುಕುಗೊಂಡಿದ್ದು ಶೇ.30ರಷ್ಟು ಮತದಾನವಾಗಿದೆ.

ಆನೇಕಲ್‌ನಲ್ಲಿ ಮತದಾನ ಶಾಂತಿಯುತವಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಇಲ್ಲಿ ಶೇ.25ರಷ್ಟು ಮತದಾನವಾಗಿದೆ. ಕನಕಪುರ ಹಾಗೂ ಸಾತನೂರುಗಳಲ್ಲಿ ಶೇ.20ರಿಂದ 25ರಷ್ಟು ಮತದಾನ ಆಗಿರುವ ವರದಿಗಳು ಬಂದಿವೆ.

ರಾಮನಗರದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ಬಗ್ಗೆ ನೂರಾರು ಮತದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಮತದಾರರ ಪಟ್ಟಿ ಸಂಪೂರ್ಣ ಲೋಪದೋಷದಿಂದ ಕೂಡಿದೆ ಎಂದು ಕಾಂಗ್ರೆಸ್‌ ನಾಯಕ ಸಿ.ಎಂ. ಲಿಂಗಪ್ಪ ದೂರಿದ್ದಾರೆ. ಆದಾಗ್ಯೂ ಇಲ್ಲಿ ಶೇ. 25ರಷ್ಟು ಮತದಾನವಾಗಿದೆ.

ಕುಟುಂಬದ ಮುಖ್ಯಸ್ಥರೊಬ್ಬರು ಗುರುತು ಚೀಟಿ ತೋರಿಸಿದರೆ, ಕುಟುಂಬದ ಇತರರಿಗೆ ಮತದಾನದ ಹಕ್ಕು ನೀಡುವುದಾಗಿ ಆಯೋಗದ ಪ್ರಕಟಣೆ ತಿಳಿಸಿದ್ದರೂ, ಪ್ರತಿಯಾಬ್ಬರೂ ಪ್ರತ್ಯೇಕ ಗುರುತು ಪತ್ರ ಹಾಜರುಪಡಿಸಬೇಕು ಎಂಬ ವಿಷಯದಲ್ಲಿ ಚುನಾವಣೆ ಸಿಬ್ಬಿಂದಿ ಹಾಗೂ ಮತದಾರರ ನಡುವೆ ವಾಗ್ವಾದಗಳು ನಡೆದಿವೆ. ರಾಮನಗರದಲ್ಲಿ ಕೆಲವು ಮತದಾರರು ಸಿಬ್ಬಂದಿಯಾಂದಿಗೆ ಜಗಳ ಮಾಡಿದ ವರದಿಗಳು ಬಂದಿವೆ.

(ಇನ್‌ಫೋ ವಾರ್ತೆ)

ಮುಖಪುಟ / ಕನಕಪುರವೆಂಬ ಕುರುಕ್ಷೇತ್ರ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X