ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಸ್ವ- ಘೋಷಿತ ಮಾರ್ಕ್ಸಿಸ್ಟ್‌ ಪಟವರ್ಧನ್‌ರಿಂದ ಚರಿತ್ರೆ ತಿರುವು ಮುರುವು’

By Staff
|
Google Oneindia Kannada News

ನ್ಯೂಯಾರ್ಕ್‌: ಅಮೆರಿಕನ್‌ ಮ್ಯೂಸಿಯಂ ಆಫ್‌ ನ್ಯಾಷನಲ್‌ ಹಿಸ್ಟರಿಯು ಪ್ರದರ್ಶಿಸುತ್ತಿರುವ ಡಾಕ್ಯುಮೆಂಟರಿಯು ಹಿಂದುತ್ವ ಮತ್ತು ಭಾರತೀಯ ಚರಿತ್ರೆಯನ್ನು ವಿರೂಪಗೊಳಿಸುವಂತಿದೆ ಎಂದು ಅಮೆರಿಕಾದ ವಿಶ್ವಹಿಂದೂ ಪರಿಷತ್‌ ಶಾಖೆ ತನ್ನ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಈ ಡಾಕ್ಯುಮೆಂಟರಿಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

ಪ್ರದರ್ಶನಾಲಯದ ನಿರ್ದೇಶಕ ಎಲೈನ್‌ ಕಾರ್ನೋ ಅವರಿಗೆ ಪರಿಷತ್‌ನ ಮುಖ್ಯ ಕಾರ್ಯದರ್ಶಿ ಗೌರಗ್‌ ಜಿ. ವೈಷ್ಣವ್‌ ಅವರು ಬರೆದ ಪತ್ರದಲ್ಲಿ ಈ ಆಗ್ರಹವನ್ನು ಮಂಡಿಸಲಾಗಿದೆ. ಆನಂದ್‌ ಪಟವರ್ಧನ್‌ ನಿರ್ಮಿಸಿರುವ ‘ ವಿ ಆರ್‌ ನಾಟ್‌ ಮಂಕೀಸ್‌’ ಮತ್ತು ‘ ಇನ್‌ ದ ನೇಮ್‌ ಆಫ್‌ ಗಾಡ್‌’ ಎಂಬ ಎರಡು ಸಾಕ್ಷ್ಯ ಚಿತ್ರಗಳು ಜನರನ್ನು ತಪ್ಪು ಮಾಹಿತಿಗಳೊಂದಿಗೆ ದಾರಿತಪ್ಪಿಸುವಂತಿದೆ. ಮಾತ್ರವಲ್ಲದೆ, ರಾಜಕೀಯ ಪ್ರೇರಿತ ಮಾರ್ಕ್ಸ್‌ವಾದವನ್ನು ಅದು ಬೆಂಬಲಿಸುತ್ತಿದೆ ಎಂದು ವೈಷ್ಣವ್‌ ತಮ್ಮ ಪತ್ರದಲ್ಲಿ ಬರೆದಿದ್ದಾರೆ.

ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿಷಯಗಳನ್ನು , ಬಡವ ಮತ್ತು ಶ್ರೀಮಂತರ, ದಲಿತರ ಮತ್ತು ಮೇಲ್ಜಾತಿಯವರ ನಡುವಿನ ಹೋರಾಟದ ಸಮಸ್ಯೆಯನ್ನಾಗಿ ಪ್ರತಿಪಾದಿಸುವುದು ಹಾಗೂ ಅದಕ್ಕೆ ಮಾರ್ಕ್ಸ್‌ ವಾದವೊಂದನ್ನೇ ಪರಿಹಾರವೆಂದು ಪಟವರ್ಧನ್‌ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿರುವ ವೈಷ್ಣವ್‌, ಅವರನ್ನು ಸ್ವ- ಘೋಷಿತ ಮಾರ್ಕ್ಸಿಸ್ಟ್‌ ಎಂದು ಪತ್ರದಲ್ಲಿ ಬಣ್ಣಿಸಿದ್ದಾರೆ.

ಒಂದು ಸಾಕ್ಷ್ಯ ಚಿತ್ರದಲ್ಲಿ ರಾಮಾಯಣದ ಮುಖ್ಯ ಪಾತ್ರ ರಾಮನನ್ನು ದ್ರಾವಿಡರ ಮೇಲೆ ಆರ್ಯರ ಶೋಷಣೆ ಆಗುತ್ತಿರುವಂತೆ ಬಿಂಬಿಸಲಾಗಿದೆ ಎಂಬ ವಿಷಯವನ್ನು ಉಲ್ಲೇಖಿಸಿರುವ ವೈಷ್ಣವ್‌, ಈ ಎರಡೂ ಸಾಕ್ಷ್ಯ ಚಿತ್ರಗಳನ್ನು ತಕ್ಷಣವೇ ಪ್ರದರ್ಶನಾಲಯದಿಂದ ಹಿಂದೆಗೆಯಬೇಕು ಎಂದು ಆಗ್ರಹಿಸಿದ್ದಾರೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X