ಕೃಷ್ಣ ನಂ. ಒನ್ನೂ.. ಪ್ರತಿಪಕ್ಷಗಳ ಪ್ರತಿಕ್ರಿಯೆಯೂ..
ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮತ್ತೊಮ್ಮೆ ರಾಷ್ಟ್ರದ ಅತ್ಯುತ್ತಮ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇತ್ತ ಕನಕಪುರ ಉಪಚುನಾವಣೆ ಹಣಾಹಣಿ ನಡೆಯುತ್ತಿರುವಾಗ ಕೃಷ್ಣರ ಮಕುಟಕ್ಕೆ ಅನಾಯಾಸವಾಗಿ ಬಂದ ಈ ಗರಿ ಪ್ರತಿಪಕ್ಷಗಳಿಗೆ ಹಾಗೂ ಕೃಷ್ಣ ವಿರೋಧಿಗಳಿಗೆ ನುಂಗಲಾರದ ತುತ್ತಾಗಿದೆ.
ಎರಡು ಬಾರಿ ಕೃಷ್ಣ ನಂಬರ್ 1 ಎನಿಸಿಕೊಂಡಿರುವ ಬಗ್ಗೆ ಕೇಳಿ ಬಂದಿದ್ದ ಮತ್ತು ಕೇಳಿಬರುತ್ತಿರುವ ಪ್ರತಿಕ್ರಿಯೆಗಳು ಹೀಗಿವೆ:
- ಕೃಷ್ಣಾ ನಂ.ಒನ್ನಾ? ಇಂಡ್ಯಾ ಟುಡೆ ಕೊಟ್ರೇನು ಪ್ರಯೋಜ್ನ. ಮಂಡ್ಯ ಟುಡೆ ಕೊಡಬೇಕು -ಕಾಂಗ್ರೆಸ್ ಬಂಡಾಯ ಸದಸ್ಯ
- ದಿಲ್ಲಿ ಸರ್ಟಿಫಿಕೇಟ್ ಪಡದ್ರೆ ಸಾಲ್ದು, ಹಳ್ಳಿ ಸರ್ಟಿಫಿಕೇಟ್ ಪಡೀಬೇಕು - ಜಗದೀಶ ಶೆಟ್ಟರ್
- ನವಕರ್ನಾಟಕ ಶಿಲ್ಪಿ ಕೆಂಗಲ್ ಹನುಮಂತಯ್ಯ, ದೇವರಾಜ ಅರಸು, ನಿಜಲಿಂಗಪ್ಪ ಅವರಿಗಿಂತ ಕೃಷ್ಣ ದೊಡ್ಡೋರಾ? - ಪ್ರತಿಪಕ್ಷ ಮುಖಂಡರು.
- ಸರಕಾರಿ ನೌಕರರಿಗೆ ಸಂಬಳ ಕೊಡಲೂ ಸರಕಾರದ ಖಜಾನೆಯಲ್ಲಿ ಹಣವಿಲ್ಲ. ಆದರೂ ಕೃಷ್ಣ ನಂ.1. ಯಾರು ಯಾರನ್ನು ಎಲ್ಲಿ ಸಮೀಕ್ಷೆ ಮಾಡಿದರೋ ಗೊತ್ತಿಲ್ಲ. ಇದು ಚುನಾವಣೆ ಲಾಭಕ್ಕಾಗಿ ಹಣ ಕೊಟ್ಟು ಬರಸಿಕೊಳ್ಳಲಾದ ಸಮೀಕ್ಷೆ - ಸಿದ್ಧರಾಮಯ್ಯ, ಜಾತ್ಯತೀತ ದಳ ವಸಿಷ್ಠ.
- ರಾಜ್ಯದಲ್ಲೊಂದು ಸರಕಾರ ಇದೆ. ಅದಕ್ಕೊಬ್ಬರು ಮುಖ್ಯಮಂತ್ರಿ ಇದ್ದಾರೆ ಅಂತ ಸಾಬೀತು ಮಾಡಿದ್ದೇ ಎಸ್.ಎಂ. ಕೃಷ್ಣ ಅವರಲ್ಲದೆ ಮತ್ಯಾರು ನಂ.1 ಆಗಲು ಸಾಧ್ಯ - ಕಾಂಗ್ರೆಸ್ ವರಿಷ್ಠರು.
ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಹೇಳಿಕೆ- - ಕೃಷ್ಣ ನಂ.1 ಅನ್ನೋದನ್ನು ಅವರ ಆಡಳಿತ ನೋಡಿ ಅಳೆಯಬೇಕೇ ಹೊರತು, ವೇಷ ಭೂಷಣ, ಸರಳ ಸಜ್ಜನಿಕೆ ನೋಡಿ ಅಲ್ಲ, ಮಾಹಿತಿ ತಂತ್ರಜ್ಞಾನ ಕ್ಷೇತ್ರ ಒಂದನ್ನು ಬಿಟ್ಟು ಕೃಷ್ಣ , ಮತ್ತಾವ ಕ್ಷೇತ್ರದಲ್ಲೂ ಗಮನಾರ್ಹ ಸಾಧನೆ ಮಾಡಿಲ್ಲ .
- ಕೃಷ್ಣರ ಕಾಲದಲ್ಲಿ ನಡೆದಿರುವಷ್ಟು ರೈತರ ಆತ್ಮಹತ್ಯೆ ಮತ್ತಾವ ಮುಖ್ಯಮಂತ್ರಿ ಕಾಲದಲ್ಲೂ ನಡೆದಿಲ್ಲ ಆದರೂ ಅವರು ನಂ.1. ಹ್ಹ.ಹ್ಹ.. ಹ್ಹಹಹ
- ಸಚಿವ ಸಂಪುಟ ಸಹೋದ್ಯೋಗಿಗಳ ಮೇಲೆ ಆರೋಪ ಇದ್ದರೂ, ಅವರನ್ನು ರಕ್ಷಿಸುವ, ಹೈಕಮಾಂಡ್ ಒತ್ತಡಕ್ಕೆ ಮಣಿದು, ನಕಲಿ ಛಾಪಾ ಕಾಗದ ಹಗರಣದಲ್ಲಿ ದೃಢ ನಿರ್ಧಾರ ತಳೆಯದ ಕೃಷ್ಣರಿಗೆ ಹೇಗೆ ನಂ.1 ಪಟ್ಟ ಬಂತೆಂಬುದೇ ಯಕ್ಷಪ್ರಶ್ನೆ.
ಜನಪ್ರಿಯತೆಯ ತುತ್ತತುದಿಯಲ್ಲಿರುವ ಎಸ್.ಎಂ. ಕೃಷ್ಣ ನಂ.1 ಮುಖ್ಯಮಂತ್ರಿ
ಮುಖಪುಟ / ಕೃಷ್ಣಗಾರುಡಿಯ ಕನ್ನಡಿ












Click it and Unblock the Notifications