ದೇವೇಗೌಡರು ಗಂಡೂ ಅಲ್ಲ, ಹೆಣ್ಣೂ ಅಲ್ಲ : ಕೇಂದ್ರ ಸಚಿವರ ಶೋಧನೆ
ಮಂಗಳೂರು : ‘ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೆಣ್ಣೂ ಅಲ್ಲ , ಗಂಡೂ ಅಲ್ಲ !’
ಕನಕಪುರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ವಿ.ಧನಂಜಯಕುಮಾರ್ ಅವರು ದೇವೇಗೌಡರನ್ನು ಟೀಕಿಸಿದ್ದು ಈ ರೀತಿ.
ಒಂದು ಕಡೆ ಕಾಂಗ್ರೆಸ್ಸನ್ನು ಇನ್ನೊಂದು ಕಡೆ ಬಿಜೆಪಿಯನ್ನು ಬಯ್ಯುವುದರಲ್ಲಿ ನಿರತರಾಗಿರುವ ದೇವೇಗೌಡ ಹೆಣ್ಣೂ ಅಲ್ಲ , ಗಂಡೂ ಅಲ್ಲ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಧನಂಜಯಕುಮಾರ್ ಛೇಡಿಸಿದರು. ಉಭಯ ಲಿಂಗಕ್ಕೂ ಸೇರದ ಗೌಡರು ಯಾವ ಗುಂಪಿಗೆ ಸೇರುತ್ತಾರೆ ಅನ್ನುವುದರ ಬಗ್ಗೆ ಅವರು ಸ್ಪಷ್ಟವಾಗಿ ಹೇಳಲಿಲ್ಲ .
ದೇವೇಗೌಡರು ಕನಕಪುರದಲ್ಲಿ ಗೆದ್ದರೂ ಅವರಿಂದ ಜನತೆಗೆ ಏನೂ ಉಪಯೋಗ ಆಗುವುದಿಲ್ಲ . ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳೆರಡನ್ನೂ ಬಯ್ಯುವ ಗೌಡರು ಲೋಕಸಭೆಯಲ್ಲಿ ಕುಳಿತುಕೊಳ್ಳುವುದಾದರೂ ಎಲ್ಲಿ ? ಗೌಡರ ಬದಲಿಗೆ ಶಿವಕುಮಾರ್ ಗೆದ್ದರೆ, ಕನಿಷ್ಠ ವಿರೋಧ ಪಕ್ಷದಲ್ಲಾದರೂ ಕೆಲಸ ಮಾಡುತ್ತಾರೆ. ಕನಕಪುರದಲ್ಲಿ ನೇರ ಸ್ಪರ್ಧೆ ಇರುವುದೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಎಂದು ಅವರು ಅಭಿಪ್ರಾಯಪಟ್ಟರು.
1997ರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲದಿಂದ ಪ್ರಧಾನಿಯಾಗಿದ್ದ ದೇವೇಗೌಡ, ಈಗ ಆ ಪಕ್ಷವನ್ನೇ ಹಿಗ್ಗಾಮುಗ್ಗಾ ತೆಗಳುತ್ತಿದ್ದಾರೆ. ಪ್ರಧಾನಿ ವಾಜಪೇಯಿ ಅವರನ್ನೂ ಹಳಿಯುತ್ತಿದ್ದಾರೆ. ತಾವು ಪ್ರಧಾನಿ ಆಗಿದ್ದಾಗ ಯಾವ ಅಭಿವೃದ್ಧಿ ಕಾರ್ಯಗಳಾಗಿದ್ದವು ಎನ್ನುವುದನ್ನು ಗೌಡರು ಬಹಿರಂಗಪಡಿಸಲಿ ಎಂದು ಧನಂಜಯಕುಮಾರ್ ಮಾಜಿ ಪ್ರಧಾನಿಗೆ ಸವಾಲು ಹಾಕಿದರು.
(ಇನ್ಫೋ ವಾರ್ತೆ)
ಕನಕಪುರ ‘ಕುರುಕ್ಷೇತ್ರ’ದ ಪರ್ವಗಳು..
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications