ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

www.thatskannada.com!

By Staff
|
Google Oneindia Kannada News

*ಎಸ್ಕೆ. ಶಾಮಸುಂದರ

ನಾವು ಸ್ವತಂತ್ರವಾಗಿ ಗುರ್ತಿಸಿಕೊಳ್ಳಲು ಯಾಕೆ ನಿರ್ಧರಿಸಿದೆವು?

ರೆಕ್ಕೆ ಬಲಿತ ಹಕ್ಕಿ ಗೂಡಿನಿಂದ ನೀಲಾಕಾಶಕ್ಕೆ ಜಿಗಿಯುವುದು; ತನ್ನದೇ ಆದ ಗೂಡು ಕಟ್ಟಿಕೊಳ್ಳುವುದು- ವಿಕಾಸ ಎಂದರೆ ಇದೇ ಅಲ್ಲವೇ. ಇಂಥದೊಂದು ಪರಿವರ್ತನೆಯ ತಿರುವಿನಲ್ಲಿ ನಾವು ನಿಂತಿದ್ದೇವೆ. www.oneindia.com ಬಳಗದ ಒಂದಂಗವಾಗಿದ್ದ ಗೀಗ ಸ್ವಂತಕಾಲ ಮೇಲೆ ನಿಲ್ಲುವ ಕಾಲ. ಆ ಕಾರಣದಿಂದಾಗಿಯೇ ಹೊಸ ನಾಮಕರಣ- www.thatskannada.com!

ಜನವರಿ 01, 2002- ಹೊಸ ವರ್ಷದಿಂದ ವರ್ಟಿಕಲ್‌ ಆಗಿ ನಮ್ಮ ಚಾನಲ್‌ ರೂಪಾಂತರಗೊಳ್ಳುತ್ತಿದೆ. ಇದು ಹೊಸ ಪರಿಯ ಬದುಕು. ಹೊಸ ಸಾಧನೆಯತ್ತ ತುಡಿತ. ಇದು ಮನ್ವಂತರ!

ನಮ್ಮ ಗೆಲುವಿನಲ್ಲಿ ನಿಮ್ಮ ಪಾತ್ರ

ನಮ್ಮ ಗೆಲುವಿಗೆ, ನಿರಂತರ ಬೆಳವಣಿಗೆಗೆ ಹಾಗೂ ಏರುಮುಖದ ಜನಪ್ರಿಯತೆಗೆ ಬಳಕೆದಾರರ ಪ್ರೀತಿಯೇ ಕಾರಣ. ಬಳಕೆದಾರರ ಕೊಡುಗೆಯೇ ನಮ್ಮ ಗೆಲುವ ಗುಟ್ಟಿನ ಹೂರಣ.

ಭಾಷಾ ವೈಶಿಷ್ಟ್ಯತೆ ನಮ್ಮ ಜನಪ್ರಿಯತೆಗೆ ಪ್ರಮುಖ ಕಾರಣ. ಆದರೆ, ಅದಷ್ಟೇ ನಮ್ಮ ಅಗ್ಗಳಿಕೆಯಲ್ಲ : ಮನೆಯಿಂದ ದೂರವಿದ್ದವರಿಗೊಂದು ಮನೆಯನ್ನು ವೆಬ್‌ಸೈಟ್‌ ಮೂಲಕ ಕಲ್ಪಿಸಿದ ತೃಪ್ತಿ ನಮ್ಮದು. ಸಾವಿರಾರು ಮೈಲು ದೂರದಲ್ಲಿ ತವರ ಸಾಮಿಪ್ಯ ಸಾಧಿಸಿಕೊಟ್ಟ ಸಮಾಧಾನಿಗರು ನಾವು.

ಕೇವಲ ಇಂಗ್ಲೀಷ್‌ ಭಾಷಾಂತರದ ಸುದ್ದಿಗಳನ್ನು ನಾವು ನಿಮಗೆ ಉಣಬಡಿಸಲಿಲ್ಲ . ಪ್ರಾದೇಶಿಕ ಸೊಗಡನ್ನು, ತವರು ನೆಲದ ಕದಲಿಕೆಗಳನ್ನು ಜತನದಿಂದ ಯುಕ್ತಾಯುಕ್ತತೆಯಿಂದ ಆಯ್ದು ತಂದೆವು. ಸದಾಕಾಲ ಬರಹದೊಳಗೊಂದು ಪ್ರೀತಿ-ಮಾನವೀಯತೆಯ ಎಳೆಯನ್ನು ಕಾಯ್ದುಕೊಳ್ಳುವ ಮೂಲಕ ನಿಮ್ಮ ಎದೆಗೆ ಲಗ್ಗೆ ಹಾಕುವ ಪ್ರಯತ್ನ ನಮ್ಮದು. ನೀವೇನು ಸಾಮಾನ್ಯದವರಾ? ಸುಲಭಕ್ಕೆ ಒಪ್ಪಿ(ಸಿ) ಕೊಳ್ಳುತ್ತೀರಾ!?

ಪ್ರತ್ಯೇಕ ಅಸ್ತಿತ್ವ, ಹಾಗೆಂದರೆ.. ?

ಜನಪ್ರಿಯತೆ ಹಾಗೂ ಆದಾಯ- ಎರಡರಲ್ಲೂ ಚಾನಲ್‌ ಬೆಳವಣಿಗೆಯ ಪಥದಲ್ಲಿದೆ. ಆ ಕಾರಣದಿಂದಲೇ ಚಾನಲ್‌ ಆರ್ಥಿಕವಾಗಿ ತನ್ನ ಭವಿಷ್ಯವನ್ನು ಸಾಧಿಸಿಕೊಳ್ಳುತ್ತದೆಂದು, ತನ್ನದೇ ಅಸ್ತಿತ್ವವನ್ನು ವರ್ಟಿಕಲ್‌ ಆಗುವ ಮೂಲಕ ಕಂಡುಕೊಳ್ಳಲು ಇದು ಸಕಾಲವೆಂದೂ ಮೇನೇಜ್‌ಮೆಂಟ್‌ ತೀರ್ಮಾನಿಸಿದೆ.

ದ ಎಲ್ಲ ಚಾನಲ್‌ಗಳಿಗೂ ಈಗ ಪ್ರತ್ಯೇಕ ಅಸ್ತಿತ್ವದ ಸಂಭ್ರಮ. ಈಗಾಗಲೇ ಜನಮನದಲ್ಲಿ ಭದ್ರವಾಗಿ ಬೇರೂರಿರುವ ಚಾನಲ್‌ಗಳು- ವರ್ಟಿಕಲ್‌ಗಳಾಗಿ ಸ್ವಂತ ಅಸ್ತಿತ್ವ ಹೊಂದುವುದರಿಂದ ತಮ್ಮದೇ ಗುಣಲಕ್ಷಣ ಹಾಗೂ ಸಮಗ್ರತೆಯನ್ನು ಹೊಂದುವುದೆನ್ನುವುದು ನಮ್ಮ ನಂಬುಗೆ.

ಗಿಂತ thatskannada ಹೇಗೆ ಭಿನ್ನವೆಂದರೆ.. ?

ಬಳಕೆದಾರರ ಭಾಗವಹಿಸುವಿಕೆ ಇನ್ನಷ್ಟು ಹೆಚ್ಚಾಗುವುದು. ಬರಹಗಳ ಗುಣಮಟ್ಟ ಹಾಗೂ ವ್ಯಾಪ್ತಿಯಲ್ಲಿ ಮತ್ತಷ್ಟು ಸುಧಾರಣೆ. ಪರಸ್ಪರ ಸಂವಹನದ ವೇದಿಕೆಗಳನ್ನು ಅವಕಾಶಗಳನ್ನು ಹೆಚ್ಚುಗೊಳಿಸುವುದು... ಹೀಗೆ ಕನಸುಗಳು, ಸವಾಲುಗಳು ನೂರಿವೆ. ಎಲ್ಲವು ಕಾಲಕಾಲಕ್ಕೆ ನಿಮ್ಮ ಮುಂದೆ ಬಿತ್ತರಗೊಳ್ಳಲಿವೆ.

ಹೊಸ ಕನಸು ನಿರೀಕ್ಷೆಗಳೊಂದಿಗೆ ಕರುಳಬಳ್ಳಿಯ ಕಡಿದುಕೊಂಡಿದ್ದೇವೆ; ತಾಯಿಯ ದೇಹದಿಂದ ಮಗು ಬೇರ್ಪಟ್ಟಂತೆ! ಹಬ್ಬಲಿ ರಸಬಳ್ಳಿ.. ಹೌದು! ನಿಮ್ಮ ಹಾರೈಕೆ ಸದಾ ಜೊತೆಯಿರುತ್ತದೆಂದು ನಂಬಿದ್ದೇವೆ.

ಮುಖಪುಟ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X