ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2000 ಜನರ ಒಮ್ಮೆಗೇ ಕೊಲ್ಲಲು ವಿಷಾನಿಲ ತಯಾರಿಸುತ್ತಿದ್ದ ಒಸಾಮ!

By Staff
|
Google Oneindia Kannada News

ಲಂಡನ್‌ : ಒಸಾಮ ಹಾಗೂ ಆತನ ಉಗ್ರ ಅಡ್ಡೆ ಅಲ್‌- ಖ್ವೆ ೖದಾ ತಯಾರಿಸಿರುವ ಜೈವಿಕ ಹಾಗೂ ರಾಸಾಯನಿಕ ಅಸ್ತ್ರಗಳನ್ನು ಪ್ರಾಣಿಗಳ ಮೇಲೆ ಪ್ರಯೋಗಿಸುತ್ತಿದ್ದ ವಿಷಯವನ್ನು ಬ್ರಿಟಿಷ್‌ ದೈನಿಕ ದಿ ಟೈಮ್ಸ್‌ ಪ್ರಕಟಿಸಿದೆ.

ಕಾಬೂಲಿನಲ್ಲಿ ಈಗ ಧ್ವಂಸವಾಗಿರುವ ಅಲ್‌- ಖ್ವೆ ೖದಾ ಕೇಂದ್ರಗಳನ್ನು ತಡಕಾಡಿ, ದಾಖಲೆಗಳನ್ನು ಹುಡುಕಿ ಪತ್ರಿಕೆ ಈ ಮಹತ್ತರ ವಿಷಯ ಸಂಗ್ರಹಿಸಿದೆ. ಅರೇಬಿಕ್‌, ಉರ್ದು, ಪರ್ಷಿಯನ್‌, ಮಂದರಿನ್‌, ರಷ್ಯನ್‌ ಹಾಗೂ ಇಂಗ್ಲಿಷ್‌ ಭಾಷೆಗಳ ಮಿಶ್ರಣ ದಾಖಲೆಗಳಲ್ಲಿವೆ. ಅವುಗಳನ್ನೆಲ್ಲಾ ಒಂದೆಡೆ ಕಲೆಹಾಕಿ, ಪತ್ರಿಕೆ ಇಂಗ್ಲಿಷ್‌ಗೆ ತರ್ಜುಮೆ ಮಾಡಿದೆ.

ಒಸಾಮನ ಈಚಿನ ಗುರಿ ಏನಾಗಿತ್ತು?: ರ್ಯಾಸಿನ್‌, ಸಯನೈಡ್‌ ಮತ್ತು ಬಾಟುಲಿನ್‌ ವಿಷಗಳನ್ನು ಭಾರೀ ಪ್ರಮಾಣದಲ್ಲಿ ತಯಾರಿಸುವುದು. ಈ ಪ್ರಮಾಣ ಎಷ್ಟಿರಬೇಕೆಂದರೆ, 2000 ಮಂದಿಯನ್ನು ಏಕಕಾಲದಲ್ಲಿ ಕೊಲ್ಲುವಷ್ಟು. ಈ ನಿಟ್ಟಿನಲ್ಲಿ ಪ್ರಯೋಗಗಳಿಗೂ ಚಾಲನೆ ದೊರೆತಿರುವುದು ಗೊತ್ತಾಗಿದೆ. ಸಯನೈಡ್‌ ಅನಿಲ (1988ರಲ್ಲಿ ಇರಾಕಿ ಅಧ್ಯಕ್ಷ ಸದ್ದಾಂ ಹುಸೇನ್‌ ನೂರಾರು ಖುರ್ದೂಗಳನ್ನು ಕೊಲ್ಲಲು ಈ ಅನಿಲ ಬಳಸಿದ್ದರು) ಸೇರಿದಂತೆ ರಾಸಾಯನಿಕ ಅಸ್ತ್ರಗಳನ್ನು ಮೊಲಗಳ ಮೇಲೆ ಪ್ರಯೋಗಿಸಲಾಗಿದೆ.

ಅಲ್‌- ಖ್ವೆ ೖದಾದಲ್ಲಿ ಕಲಿತವರೆಷ್ಟು?: ಸುಮಾರು 70 ಸಾವಿರ ! ಸಿಕ್ಕಿರುವ ಕಾಗದ ಪತ್ರಗಳಿಂದ ತಿಳಿದುಬಂದಿರುವ ಮಾಹಿತಿ ಇದು. ಕಳೆದ ಆರು ವರ್ಷಗಳಲ್ಲಿ ಇಷ್ಟೊಂದು ಜನ ಇಲ್ಲಿ ತರಪೇತಿ ಪಡೆದಿದ್ದಾರೆ. ಕಲಿತ ನಂತರ ಇವರೆಲ್ಲಾ ಅಮೆರಿಕ, ಕೆನಡಾ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ರಷ್ಯಾಗಳಲ್ಲಿ ನೆಲೆಸಿದ್ದಾರೆ.

(ಪಿಟಿಐ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X