‘ಶ್ರೇಷ್ಠ ವೈದ್ಯ’ರಾಗಿ ಡಾ.ಸಿ.ಆರ್‌.ಚಂದ್ರಶೇಖರ್‌ ಹಾಗೂಡಾ.ಗಿರಿಜಮ್ಮ

ಗುಲ್ಬರ್ಗ : ಪ್ರಸಿದ್ಧ ಮನೋವಿಜ್ಞಾನಿ ಡಾ. ಸಿ.ಆರ್‌. ಚಂದ್ರಶೇಖರ್‌ ಹಾಗೂ ಸ್ತ್ರೀರೋಗ ತಜ್ಞೆ ಡಾ. ಗಿರಿಜಮ್ಮ ಅವರನ್ನು ಡಾ. ಪಿ.ಇ ಎಸ್‌. ಶಂಕರ್‌ ಪ್ರತಿಷ್ಠಾನದ ‘ಶ್ರೇಷ್ಠ ವೈದ್ಯ’ ಸಾಹಿತಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಗುಲ್ಬರ್ಗ ಮೂಲದ ಈ ಪ್ರತಿಷ್ಠಾನ ಪ್ರತಿ ವರ್ಷ ನೀಡುವ ‘ವೈದ್ಯಶ್ರೀ’ ಪ್ರಶಸ್ತಿಗೆ ಬೆಂಗಳೂರಿನ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಮುಖ್ಯ ಯೋಗ ಚಿಕಿತ್ಸಾ ತಜ್ಞೆ ಡಾ. ಆರ್‌. ನಾಗರತ್ನ ಅವರು ಆಯ್ಕೆಯಾಗಿದ್ದಾರೆ. ಈ ವಿಷಯವನ್ನು ಪ್ರತಿಷ್ಠಾನದ ಕಾರ್ಯದರ್ಶಿ ಎಸ್‌. ಎಸ್‌. ಹಿರೇಮಠ ಗುರುವಾರ ತಿಳಿಸಿದರು.

ಜನವರಿ 1ರಂದು ಗುಲ್ಬರ್ಗದ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಿ.ಆರ್‌. ಚಂದ್ರಶೇಖರ್‌ ಅವರ ‘ನೀವು ಬಳಸುವ ಔಷಧಿಗಳು’ ಮತ್ತು ಗಿರಿಜಮ್ಮನವರ ‘ಗರ್ಭಿಣಿ ಮಹಿಳೆಯರಿಗೊಂದು ಕೈಪಿಡಿ’ ಎಂಬ ಕೃತಿಗಳನ್ನು ಗುರುತಿಸಿ ಪ್ರತಿಷ್ಠಾನ 2000ನೇ ವರ್ಷದ ಪ್ರಶಸ್ತಿ ನೀಡಲು ನಿರ್ಧರಿಸಿದೆ.

ಎರಡೂ ಪ್ರಶಸ್ತಿಗಳು ತಲಾ 5 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತವೆ. ಡಾ. ಆರ್‌. ನಾಗರತ್ನ ಅವರು ಯೋಗ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯನ್ನು ಗುರುತಿಸಿ ವೈದ್ಯ ಶ್ರೀ ಪ್ರಶಸ್ತಿಗೆಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು 10 ಸಾವಿರಿ ರೂಪಾಯಿ ನಗದು ಹಾಗೂ ಫಲಕವನ್ನೊಳಗೊಂಡಿರುತ್ತದೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+