• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ರಿಸ್ತನ ಹೊಸ ‘ಅವತಾರ’- ಭಾಗ 2

By Staff
|

Jesus Christ : The story behind the storiesಕ್ರಿಸ್ತನ ಪವಾಡಗಳು

ಹೀಬ್ರೂ ಭಾಷೆಯಲ್ಲಿ ‘ಪೆಷರ್‌’ ಎಂದರೆ ವ್ಯಾಖ್ಯಾನ ಎಂದರ್ಥ. ಕುಮ್ರನ್‌ನಲ್ಲಿ ದೊರೆತ ಹಸ್ತಪ್ರತಿಗಳಲ್ಲಿ ಕೆಲವನ್ನು ಪೆಷರ್‌ ಎಂಬ ವರ್ಗಕ್ಕೆ ಸೇರಿಸಲಾಗಿದೆ. ಇದುವರೆಗೂ ಭಕ್ತಿ ವಿಸ್ಮಯಗಳಿಂದ ನಂಬಿರುವ ಕೆಲವು ಪವಾಡಗಳ ಬಗ್ಗೆ ಬೆಳಕು ಚೆಲ್ಲುತ್ತವೆ. ಇದನ್ನು ಪ್ರಕಟಿಸಿದರೆ, ಪವಾಡಗಳು ಬಯಲಿಗೆ ಎಳೆದಂತಾಗಿ, ಬೈಬಲ್‌ ಹಾಗೂ ಕ್ರಿಶ್ಚಿಯನ್‌ ಧರ್ಮದ ನಂಬಿಕೆ, ಭಕ್ತಿ , ಗೌರವಗಳು ಮತ್ತೊಮ್ಮೆ ನಾಶವಾಗುವ ಭಯದಿಂದ ಚರ್ಚುಗಳು ಇದನ್ನು ಗುಟ್ಟಾಗಿಟ್ಟಿವೆ.

ಕ್ರಿಸ್ತ ಕನ್ಯೆಯ ಮಗ ಎಂಬುದೇ ಕ್ರಿಶ್ಚಿಯನ್‌ ಧರ್ಮದ ಅತ್ಯಂತ ಸೋಜಿಗನ ವಿಷಯ. ಇದಕ್ಕಿಂತ ತೀರಾ ಭಿನ್ನವಾದ ವಿಷಯವನ್ನು ಪೆಷರ್‌ ಹಸ್ತಪ್ರತಿಗಳು ತಿಳಿಸುತ್ತವೆ.

ಎನಿಸಿಗಳಲ್ಲಿ ಒಂದು ಪದ್ಧತಿ ಇದ್ದಿತು. ಸಂತತಿಯನ್ನು ಮುಂದುವರೆಸಬೇಕು ಎನ್ನುವ ಕೆಲವು ಪೀಠಾಧಿಕಾರಿಗಳು ಮದುವೆ ಆಗಬಹುದಿತ್ತು . ಅತಿ ಉನ್ನತ ಸ್ಥಾನದ ಎನಿಸಿಗಳು ದೈಹಿಕ ಸುಖ ಪಡೆಯುವಂತಿರಲಿಲ್ಲ - ಅದು ಒಂದು ಪಾಪ ಎಂದು ಪರಿಗಣಿಸಲಾಗಿತ್ತು . ಆದರೆ ಕೆಳಗಿನ ಸ್ಥರದ ‘ಪೀಠಾಧಿಕಾರಿಗಳು’ ತಮ್ಮ ಹೆಂಡತಿಯಾಂದಿಗೆ ವಾಸಿಸಲು ಮಠವನ್ನು ಬಿಟ್ಟು ಆಗಿಂದಾಗ್ಗೆ ಹೋಗಿ ಬರುತ್ತಿದ್ದರು. ಇಂತಹ ಮದುವೆಗಳು ನಡೆದಾಗ ಆ ಹೆಂಡತಿಗೆ ‘ನನ್‌’ ಸ್ಥಾನಮಾನ ಇರುತ್ತಿತ್ತು .

ಮೇರಿ ಕನ್ಯೆಯಾಗಿದ್ದುದು ಹೀಗೆ..

ಹೆಲೆನಿಸ್ಟಿಕ್‌ ಪ್ರಪಂಚದಲ್ಲಿ ನನ್‌ ಎಂದರೆ ಕನ್ಯೆ ಎಂಬರ್ಥವಿತ್ತು . ಆಕೆ ದೈಹಿಕವಾಗಿ ಕನ್ಯೆಯಾಗಿದ್ದಾಗಲೂ, ಋಷಿ ಪತ್ನಿಯಾಗಿದ್ದಲೂ ಅದೇ ಹೆಸರಿನಿಂದ ಕರೆಯಲಾಗುತ್ತಿತ್ತು . ಮದುವೆಗೆ ವಿವಿಧ ಹಂತಗಳಿದ್ದವು. ಮೊದಲು, ‘ಅರ್ಪಣೆಯ ಪ್ರಮಾಣ’ (vow of dedication)ನಂತರ ನಿಶ್ಚಿತಾರ್ಥ ಅವಧಿ. ಈ ಅವಧಿಯಲ್ಲಿ ದೈಹಿಕ ಸುಖ ಪಡುವಂತಿಲ್ಲ . ಈ ಅವಧಿ ಎಷ್ಟು ದೀರ್ಘ ಕಾಲವಾದರೆ ಅಷ್ಟು ದೀರ್ಘ ಕಾಲದವರೆಗೂ ಅವರು ದೂರ ದೂರವಿರಬೇಕು. ನಂತರ ಮೂರು ವರ್ಷಗಳ ಪ್ರಯೋಗಾವಧಿ ಒಳಗೊಂಡ ಮದುವೆ. ಇಲ್ಲಿ ದೈಹಿಕ ಸುಖ ಪಡಬಹುದು. ಪ್ರಯೋಗಾವಧಿಯ ನಂತರ ಹೆಣ್ಣು ಗರ್ಭಿಣಿಯಾದರೆ ಅವರಿಗೆ ಮರು ಮದುವೆ ಮಾಡುತ್ತಿದ್ದರು. ನಂತರ ವಿಚ್ಛೇದನಕ್ಕೆ ಅನುಮತಿ ಇರುತ್ತಿರಲಿಲ್ಲ .

ಅಂದರೆ, ಮೇರಿಯ ವಿಷಯ ಹೀಗೆ ಆಗಿದ್ದಿರಬಹುದು : ಜೋಸೆಫ್‌ನೊಂದಿಗೆ ನಿಶ್ಚಿತಾರ್ಥವಾದ ಮೇರಿ ಪ್ರಯೋಗಾವಧಿಯಲ್ಲಿ ಜೋಸೆಫ್‌ನೊಂದಿಗೆ ದೈಹಿಕ ಸಂಪರ್ಕದಿಂದ ಬಸಿರಾದಳು. ಹೊಸ ಒಡಂಬಡಿಕೆಯಲ್ಲಿ ಹೇಳಿದೆ ‘ if a man has a virgin, let them marry.’

ಮೇರಿ ಬಸಿರಾದಾಗ ಕಾನೂನಿನ ಪ್ರಕಾರ ಅವಳಿನ್ನೂ ಕನ್ಯೆಯೇ ಆಗಿದ್ದಳು. ಹೀಗಾಗಿ, ‘ಕನ್ಯೆಯ ಮಗ’ ಎಂಬುದು ಕೇವಲ ಪದಗಳ ದ್ವಂದ್ವಾರ್ಥದ ದೊಂಬರಾಟವೇ ಹೊರತೂ ಅದರಲ್ಲಿ ಪವಾಡವೇನಿಲ್ಲ . ಅನೇಕ ವರ್ಷಗಳಿಂದ ಲಭ್ಯವಿರುವ ಎನಿಸೀಗಳ ವಿವಾಹ ಸಂಪ್ರದಾಯಗಳು ಇವನ್ನು ತಿಳಿಸುತ್ತವೆ.

ಹಾಗಾದರೆ ಬೈಬಲ್‌ನಲ್ಲಿ ಬರುವ ಹೋಲಿ ಸ್ಪಿರಿಟ್‌ ಯಾರು?

ಎನಿಸಿಯಲ್ಲಿ ದೊರೆತಿರುವ ಹಸ್ತ ಪ್ರತಿಗಳ ಪ್ರಕಾರ, ಕೆಲವು ಜನರು ದೇವರ, ದೇವತೆಗಳ ಹಾಗೂ ಆತ್ಮಗಳ ಅಪರಾವತಾರವೆಂದು ನಂಬಿದ್ದರು. ಹಾಗೇ ಗ್ಯಾಬ್ರಿಯಲ್‌ ನಿಜವಾದ ರಕ್ತ ಮಾಂಸಗಳ ಒಬ್ಬ ಮನುಷ್ಯನಾಗಿದ್ದ. ಅದೇ ರೀತಿ ಹೋಲಿ ಸ್ಪಿರಿಟ್‌ ಎಂಬ ಜೋಸೆಫ್‌ ಹಾಗೂ ಕಥೆಯಲ್ಲಿರುವ ಮತ್ತಿತರ ಎಲ್ಲಾ ದೇವತೆಗಳೂ ಸಾಧಾರಣ ಮನುಷ್ಯರೇ ಆಗಿದ್ದರು.

ಈ ಸತ್ಯ ಸಂಗತಿಯಿಂದಾಗಿ ಇದುವರೆಗೆ ಆ ಪದಕ್ಕಿದ್ದ ಪವಿತ್ರವಾದ, ಭಯ, ಭಕ್ತಿ, ವಿಸ್ಮಯಗಳ ಮುಸುಕು ತೆರೆದಂತಾಗಿದೆ. ಜೀಸಸ್‌ನ ಬೀಜಾಂಕುರವಾಗಲೀ ಹುಟ್ಟಾಗಲೀ ಯಾವುದೇ ಸಾಧಾರಣ ಮನುಷ್ಯನ ಜೈವಿಕ ಪ್ರಕ್ರಿಯೆಯಂತೆಯೇ ನಡೆದಿದೆ. ಈ ಎಲ್ಲಾ ವಿವರಣೆಯೂ ಹಸ್ತಪ್ರತಿಗಳನ್ನು ಕೂಲಂಕಷವಾಗಿ ಓದಿ ಪಡೆದದ್ದು.

‘ಶ್ರೀಮಂತನೊಬ್ಬ ದೇವರ ರಾಜ್ಯದೊಳಕ್ಕೆ ಪ್ರವೇಶಿಸುವುದಕ್ಕಿಂತ ಒಂದು ಒಂಟೆ ಸೂಜಿಯ ಕಣ್ಣಲ್ಲಿ ಹಾದು ಹೋಗುವುದೇ ಹೆಚ್ಚು ಸುಲಭ ಸಾಧ್ಯ’ ಎಂಬ ಮಾತಿನ ನಿಜವಾದ ಅರ್ಥ, ವ್ಯಕ್ತಿಯಾಬ್ಬನಿಗೆ ಸನ್ಯಾಸಿಯ ವರ್ಗಗಳಿಗೆ ಏರಲು ಇರುವ ಒಂದೇ ಮಾರ್ಗವೆಂದರೆ ಮಠಗಳಲ್ಲಿ ಓದಿ ಹಂತ ಹಂತವಾಗಿ ಪದವೀಧರನಾಗುವುದು (ಆತನ ಸಾಮಾಜಿಕ ಸ್ಥಾನ ಮಾನಗಳು ಏನೇ ಆಗಿರಲಿ ಅದು ಅಪ್ರಸ್ತುತವಾಗುತ್ತದೆ ಎಂಬ ಅರ್ತದಲ್ಲಿ) ಎಂದಷ್ಟೇ !

ಇನ್ನೊಂದು ಪವಾಡ ನೋಡಲು ಪ್ಯಾಷರ್‌ ಬಳಸೋಣ.

ಜಾನ್‌ನ ಸುವಾರ್ತೆಗಳ ಪ್ರಕಾರ ಜೀಸಸ್‌ ಮಾಡಿದ ಅನೇಕ ಪವಾಡಗಳಲ್ಲಿ ಒಂದು ಪ್ರಮುಖವಾದುದು ಎಂದರೆ ಮದುವೆಯ ಔತಣದಲ್ಲಿ ಆತನು ನೀರನ್ನು ಹೆಂಡವಾಗಿ (ವೈನ್‌) ಪರಿವರ್ತಿಸಿದ್ದು. :

"And there were set there six waterpots of stone, after the manner of the purifying of the Jews, containing two or three fireskins apiece.

Jesus saith unto them, Fill the waterpots with
water, and they filled them up to the brim.

And he said unto them, Draw out now and bear unto
the governor of the feast, and they bear it.

The ruler of the feast tasted the water that was made
wine and knew not whence it was".

ಈಗ ಕುಮ್‌ರಾನ್‌ ಸಮುದಾಯದ ಪದ್ಧತಿಗಳು ಹಸ್ತಪ್ರತಿಗಳಿಂದ ಚಿರ ಪರಿಚಿತವಾಗಿವೆ. ತಮ್ಮ ಜನಾಂಗದ ಕೆಳಸ್ಥರದ ಜನರಿಗೆ ನೀರಿನ ಬ್ಯಾಪ್‌ಟಿಸಂ (ದೀಕ್ಷೆ) ನೀಡಿ ಸಮುದಾಯದ ಪವಿತ್ರ ಪೇಯವಾದ ವೈನ್‌ಅನ್ನು ಪೂರ್ಣ ಸದಸ್ಯರಿಗೆ ಮಾತ್ರ ನೀಡುತ್ತಿದ್ದರು. ನೀರನ್ನು ಹೆಂಡವಾಗಿ ಪರಿವರ್ತಿಸುವುದು ಎಂದರೆ, ಜೀಸಸ್‌ ಬಂದ ನಂತರ, ಪೂರ್ಣ ಸದಸ್ಯತ್ವವನ್ನು ಈವರೆಗೆ ನೀಡದಿದ್ದ ಜನರಿಗೂ ಸಹ ಈಗ ನೀಡಲು ಪ್ರಾರಂಭಿಸಿದ ಎಂದು ಇದರ ಅರ್ಥ. ಆಗಿನಿಂದ ಯಹೂದಿ-ಅಲ್ಲದವರು, ಹೆಂಗಸರು, ಹೆಂಗಸರು ಮತ್ತು ವಿವಾಹಸ್ಥರು ಸಹ (ಪ್ರಭು ಭೋಜನ ಸಂಸ್ಕಾರ) ಬ್ರೆಡ್‌ ಮತ್ತು ವೈನಿನ ಪವಿತ್ರವಾದ ಊಟ ಸ್ವೀಕರಿಸಲು ಯೋಗ್ಯರಾದರು.

ತಾವು ಯಾವುದನ್ನು ಸತ್ಯವೆಂದು ನಂಬಿ ಪ್ರವಾಚಿಸುತ್ತಿದ್ದಾರೋ ಅದು ತಪ್ಪು ಎಂದು ಸಾಬೀತಾಗಿಹೋಗುತ್ತದೆಂಬ ಅಳುಕಿಗೆ ಈಗ ಅಸ್ತಿತ್ವದಲ್ಲಿ ಇರುವ ಪಠ್ಯಕ್ಕೆ (ಬೈಬಲ್ಲಿಗೆ) ಇಲ್ಲಿ ದೊರೆತಿರುವ ತುಣುಕುಗಳನ್ನು ಸೇರಿಸಲು ಚರ್ಚು ಹಿಂದೇಟು ಹಾಕುತ್ತಿದೆ.

ಇದರಿಂದ ತಿಳಿಯುವ ಸಮಾಧಾನಕರವಾದ ಒಂದು ವಿಷಯವೇನೆಂದರೆ, ಜೀಸಸ್‌ ಎಂಬುವನು ನಿಜವಾಗಲೂ ಜೀವಂತವಾಗಿ ಇದ್ದ. ನಂತರದ ಬರಹಗಾರರ ಕಲ್ಪನೆಯಲ್ಲ ಎಂಬುದು ಸಾಬೀತಾಗುತ್ತದೆ. (ಆರ್ಕೀಬಾಲ್ಡ್‌ ರಾಬರ್ಟ್‌ಸನ್‌ ಭಾರೀ ವಿವಾದಾಸ್ಪದ ಪ್ರತಿಪಾದನೆಯನ್ನು ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು- ಬೈಬಲ್‌ ಘಟನೆಗಳು, ಜೀಸಸ್‌ ಎಂಬ ವ್ಯಕ್ತಿ, ಎಲ್ಲ ಕಟ್ಟು ಕಥೆ ಎಂದು ಹೇಳಿದ್ದ)

ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X