ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದಕತೆ ಹತ್ತಿಕ್ಕಿ,ಯುದ್ಧ ಸನ್ನಿ ದೂರವಿಡಿ- ವಿ.ಆರ್‌.ಕೃಷ್ಣ ಅಯ್ಯರ್‌

By Staff
|
Google Oneindia Kannada News

ಬೆಂಗಳೂರು : ಡಿಸೆಂಬರ್‌ 13 ರಂದು ಪಾರ್ಲಿಮೆಂಟ್‌ ಭವನದ ಮೇಲೆ ನಡೆದ ದಾಳಿಗೆ ಭಾರತ ತಕ್ಕ ಪ್ರತ್ಯುತ್ತರ ಕೊಡಬೇಕು ಎಂದು ಸುಪ್ರಿಂಕೋರ್ಟ್‌ನ ಮಾಜಿ ನ್ಯಾಯಾಧೀಶ ವಿ.ಆರ್‌. ಕೃಷ್ಣ ಅಯ್ಯರ್‌ ಅಭಿಪ್ರಾಯ ಪಟ್ಟಿದ್ದಾರೆ.

ಮಾನವ ಸ್ವಾತಂತ್ರ್ಯದ ಅತಿ ದೊಡ್ಡ ಹಾಗೂ ಪವಿತ್ರ ಪ್ರತೀಕವಾಗಿರುವ ಸಂಸತ್ತಿನ ಮೇಲೆ ನಡೆದಿರುವ ದಾಳಿ ಅಕ್ಷಮ್ಯ. ಪಾರ್ಲಿಮೆಂಟ್‌ ನಾಶಗೊಳಿಸುವ ಪ್ರಯತ್ನ ನಿಸ್ಸಂಶಯವಾಗಿ ಭಯೋತ್ಪಾದಕತೆ. ಇಂಥ ಭಯೋತ್ಪಾದಕತೆಯ ವಿರುದ್ಧ ಇಡೀ ದೇಶ ಕಠಿಣ ನಿರ್ಧಾರದಿಂದ ಹೋರಾಡಬೇಕು ಎಂದು ಸೋಮವಾರ ಗಾಂಧಿ ಭವನದಲ್ಲಿ ನೀಡಿದ ಉಪನ್ಯಾಸದಲ್ಲಿ ಕೃಷ್ಣ ಅಯ್ಯರ್‌ ಹೇಳಿದರು.

ಮುಷರ್ರಫ್‌ ಉದಾರ ಭಾವ ತೋರುತ್ತಾರೆಂದು ನಿರೀಕ್ಷಿಸುವುದು ತಪ್ಪು . ಭಯೋತ್ಪಾದಕತೆ ಹತ್ತಿಕ್ಕಲು ಹೋರಾಟ ಅಗತ್ಯ. ಆದರೆ, ಪೂರ್ವಾಗ್ರಹಗಳಾಗಲೀ, ಯುದ್ಧ ಸನ್ನಿಯಾಗಲೀ ಸಲ್ಲದು ಎಂದು ಅಯ್ಯರ್‌ ಎಚ್ಚರಿಸಿದರು. ಭಯೋತ್ಪಾದಕತೆ ವಿರುದ್ಧ ಹೋರಾಟದ ಜೊತೆ ಜೊತೆಗೇ ಜನರ ಮನಸ್ಸಿನಲ್ಲಿ ಶಾಂತಿಯ ಬೀಜ ಬಿತ್ತಬೇಕು ಎಂದು ಅವರು ಹೇಳಿದರು.

ಭಯೋತ್ಪಾದಕತೆಯನ್ನು ಯುದ್ಧ ಹತ್ತಿಕ್ಕಲು ಸಾಧ್ಯವಿಲ್ಲ . ಜಾಗತಿಕ ಭಯೋತ್ಪಾದಕತೆಯನ್ನು ಗಾಂಧಿ ಅವರ ದೃಷ್ಟಿಕೋನದಿಂದ ಪರಿಹರಿಸಬೇಕು. ಯುದ್ಧ ಕೊನೆಯಿಲ್ಲದ ಸಾವುಗಳಿಗೆ ಕಾರಣವಾಗುತ್ತದೆ ಎಂದು ಆಪ್ಘನ್‌ ಯುದ್ಧದ ಬಗ್ಗೆ ಅವರು ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಭಯೋತ್ಪಾದಕತೆ ವೈವಿಧ್ಯತೆಯನ್ನು ಹೊಂದಿದ್ದು ಕನ್ಯೂಸಮರಿಸಂ ಹಾಗೂ ಬಹುರಾಷ್ಟ್ರೀಯ ಕಂಪನಿಯಗಳ ಭಯೋತ್ಪಾದಕತೆ ಬಗೆಗೆ ಜಾಗೃತಿ ಮೂಡಬೇಕು ಎಂದು ಕೃಷ್ಣ ಅಯ್ಯರ್‌ ಹೇಳಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X