ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದ್ಯುತ್‌ ಇಲಾಖೆಗೆ ಮೊದಲೇ ಭಾರೀ ಶಾಕ್‌ ಕೊಟ್ಟ ಜಲಮಂಡಳಿ

By Staff
|
Google Oneindia Kannada News

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್‌ ದರ ಏರಿಸುವ ಪ್ರಸ್ತಾಪ ಪದೇ ಪದೇ ಆಗುತ್ತಿದೆ. ಈ ಮಧ್ಯೆ ಯಾವುದೇ ಸದ್ದು ಗದ್ದಲ ಇಲ್ಲದೆ ಜಲ ಮಂಡಳಿ ಭಾರೀ ಪ್ರಮಾಣದಲ್ಲಿ ನಗರ ನೀರು ದರ ಏರಿಸಿ, ವಿದ್ಯುದಾಘಾತ ನೀಡಿದೆ. ಇದು ಬೆಂಗಳೂರಿಗರಿಗೆ ಹೊಸ ವರ್ಷದ ವಿಶೇಷ ಕೊಡುಗೆ!

ಹೊಸ ದರಗಳ ರೀತ್ಯ ಬೆಂಗಳೂರು ನಗರದಲ್ಲಿ ನೀರು ಬಳಕೆ ಕನಿಷ್ಠ ದರ 70 ರುಪಾಯಿಯಿಂದ 118ಕ್ಕೆ ಏರಿದೆ. ನೀರು ಬಳಕೆಯ ಪ್ರಮಾಣದ ಆಧಾರದ ಮೇಲೆ ಎರಡು ಹಂತಗಳಲ್ಲಿ ದರವನ್ನು ಏರಿಸಲಾಗಿದೆ. 15 ಸಾವಿರ ಲೀಟರ್‌ವರೆಗೆ ಪ್ರತಿಶತ 68 ಹಾಗೂ 15 ಸಾವಿರದಿಂದ ಒಂದು ಲಕ್ಷ ಲೀಟರ್‌ವರೆಗೆ ಶೇ.71ರಷ್ಟು ದರ ಏರಿಸಲಾಗಿದೆ.

ಹಾಲಿ ಇದ್ದ ಕನಿಷ್ಠ ದರ 70ನ್ನು ತೊಂಬತ್ತು ರುಪಾಯಿಗೆ ಏರಿಸಿರುವ ಮಂಡಳಿ, ಅದಕ್ಕೆ ಹೊಸದಾಗಿ 18 ರುಪಾಯಿಗಳ ಒಳಚರಂಡಿ ನಿರ್ವಹಣೆ ಶುಲ್ಕ ಹಾಗೂ 10 ರುಪಾಯಿ ಮೀಟರ್‌ ನಿರ್ವಹಣೆ ಶುಲ್ಕವನ್ನೂ ಸೇರಿಸಿ ಕನಿಷ್ಠ ದರವನ್ನು 118ರುಪಾಯಿಗಳಿಗೆ ತಂದಿದೆ.

ಹೊಸ ದರವು ವಸತಿ ಸಮುಚ್ಚಯ ಹಾಗೂ ಸಾಮಾನ್ಯ ವಸತಿ ಪ್ರದೇಶಗಳಿಗೂ ಅನ್ವಯಿಸುತ್ತದೆ. ಈ ವಿಷಯವನ್ನು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಎಂ.ಎನ್‌. ವಿದ್ಯಾಶಂಕರ್‌ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

ಮಂಡಳಿಯು ಕಳೆದ 6 ವರ್ಷಗಳಿಂದ ನೀರು ದರ ಏರಿಸಿಯೇ ಇರಲಿಲ್ಲ. 1995ರಲ್ಲಿ ಶೇ.15ರಷ್ಟು ನೀರು ದರ ಏರಿಸಲಾಗಿತ್ತು. ಈಗ ನೀರು ದರ ಏರಿಸದೆ ವಿಧಿಯೇ ಇರಲಿಲ್ಲ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು. ಹೋಟೆಲ್‌, ಕಲ್ಯಾಣ ಮಂಟಪ, ಸಿನಿಮಾ ಮಂದಿರಗಳೂ ಸೇರಿದಂತೆ ವಸತಿಯೇತರ ನೀರು ಬಳಕೆಯ ದರವನ್ನು 275 ರುಪಾಯಿಗಳಿಂದ 330ಕ್ಕೆ ಹೆಚ್ಚಿಸಲಾಗಿದೆ. ಕೈಗಾರಿಕೆಗಳು ಮತ್ತು ಈಜುಕೊಳಗಳಿಗೆ ಬೆಲೆ ಏರಿಕೆಯಿಂದ ರಿಯಾಯಿತಿ ನೀಡಲಾಗಿದೆ ಎಂದು ಅವರು ಹೇಳಿದರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X