ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗ್ಳೂರ್ಗೆ ಬಂತು ಅಮೆರಿಕನ್ನಡಿಗ ಜಗದೀಶ್‌ರ ನೆಟ್‌ಸ್ಕೇಲರ್‌ ಸಂಸ್ಥೆ

By Staff
|
Google Oneindia Kannada News

ಬೆಂಗಳೂರು : ಇಂಟರ್‌ನೆಟ್‌ ಟ್ರಾಫಿಕ್‌ ನಿಯಂತ್ರಣ ಕ್ಷೇತ್ರದಲ್ಲಿ ಅತ್ಯಾಧುನಿಕ ಹಾಗೂ ಕ್ರಾಂತಿಕಾರಿ ಸಾಧನಗಳನ್ನು ತಯಾರಿಸುವ ನೆಟ್‌ಸ್ಕೇಲರ್‌ ಬುಧವಾರ ತನ್ನ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಂಗಳೂರಿನಲ್ಲಿ ಆರಂಭಿಸಿತು.

ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಅಮೆರಿಕದಲ್ಲಿ ಹೆಸರು ಸಂಪಾದಿಸಿರುವ ಅನಿವಾಸಿ ಭಾರತೀಯ ಬಿ.ವಿ. ಜಗದೀಶ್‌ ಅವರು ಅಧ್ಯಕ್ಷರಾಗಿರುವ ಈ ಸಂಸ್ಧೆಯ ಬೆಂಗಳೂರು ಕಚೇರಿಯನ್ನು ರಾಜ್ಯದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಗದೀಶ್‌ ಅವರು, ಇಂಟರ್‌ನೆಟ್‌ ಟ್ರಾಫಿಕ್‌ ನಿಯಂತ್ರಣ ಕ್ಷೇತ್ರದಲ್ಲಿ ಅತ್ಯಂತ ಅತ್ಯಾಧುನಿಕ ಹಾಗೂ ವಿಶ್ವಾಸಾರ್ಹ ಉಪಕರಣಗಳನ್ನು ತಮ್ಮ ಸಂಸ್ಥೆ ಉತ್ಪಾದಿಸುತ್ತಿದೆ ಎಂದು ತಿಳಿಸಿದರು. ತಮ್ಮ ಕಂಪನಿ ತಯಾರಿಸಿರುವ ಉತ್ಪನ್ನಗಳಲ್ಲಿ ಒಂದಾದ ‘ರಿಕ್ವೆಸ್ಟ್‌ ಸ್ವಿಚ್‌’ ಕಳೆದ ಆರು ತಿಂಗಳ ಅಲ್ಪಾವಧಿಯಲ್ಲಿ ಹಲವಾರು ಅಂತಾರಾಷ್ಟ್ರೀಯ ಮನ್ನಣೆ - ಪ್ರಶಸ್ತಿಗಳನ್ನು ಪಡೆದಿದೆ ಎಂದು ತಿಳಿಸಿದರು.

ಈ ಅತ್ಯಾಧುನಿಕ ಉಪಕರಣ (ರಿಕ್ವೆಸ್ಟ್‌ ಸ್ವಿಚ್‌) ವೆಬ್‌ಸೈಟ್‌ಗಳ ಸಾಮರ್ಥ್ಯವನ್ನು ಪ್ರತಿಶತ 300ರಷ್ಟು ಹೆಚ್ಚಿಸುತ್ತದೆ, ಇದು ಇಂಟರ್‌ನೆಟ್‌ ಬಳಕೆದಾರರ ಬೇಡಿಕೆಗೆ ಶೇ.300ರಷ್ಟು ವೇಗದಲ್ಲಿ ಸ್ಪಂದಿಸುತ್ತದೆ ಎಂದು ಅವರು ವಿವರಿಸಿದರು. ಅದಲ್ಲದೆ ಈ ಸಾಧನವು ವೆಬ್‌ಸೈಟ್‌ ಹ್ಯಾಕರ್ಸ್‌ಗಳಿಂದಲೂ ರಕ್ಷಿಸುತ್ತದೆ ಎಂದರು.

ಪ್ರಸ್ತುತ ಬೆಂಗಳೂರಿನ ಕೇಂದ್ರದಲ್ಲಿ 15ರಿಂದ 20 ಮಂದಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಉತ್ತರೋತ್ತರದಲ್ಲಿ ಸಿಬ್ಬಂದಿಯ ಸಂಖ್ಯೆ ಹೆಚ್ಚಾಗಲಿದೆ ಎಂದರು. ‘ರಿಕ್ವೆಸ್ಟ್‌ ಸ್ವಿಚ್‌’ನ ಬೆಲೆ ಅದರ ಸಾಮರ್ಥ್ಯಕ್ಕೆ ಅನುಗುಣವಾಗಿ 15 ಸಾವಿರ ಅಮೆರಿಕನ್‌ ಡಾಲರ್‌ನಿಂದ 45ಸಾವಿರ ಅಮೆರಿಕನ್‌ ಡಾಲರ್‌ವರೆಗೂ ಇದೆ ಎಂದು ಜಗದೀಶ್‌ ತಿಳಿಸಿದರು.

ಈಗಾಗಲೇ ಅಮೆರಿಕ, ಇಂಗ್ಲೆಂಡ್‌, ಲ್ಯಾಟಿನ್‌ ಅಮೆರಿಕಾ, ಕೊರಿಯಾ, ಜಪಾನ್‌ನ 150ಕ್ಕೂ ಹೆಚ್ಚು ಕಂಪನಿಗಳು ತಮ್ಮ ಸಂಸ್ಥೆಯ ಅತ್ಯಾಧುನಿಕ ಉಪಕರಣಗಳನ್ನು ಬಳಸುತ್ತಿವೆ ಎಂದು ಅವರು ಹೇಳಿದರು. ಉದ್ಘಾಟನಾ ಸಮಾರಂಭದಲ್ಲಿ ಕಂಪನಿಯ ಏಷ್ಯಾ ಖಂಡದ ರೀಜನಲ್‌ ಜನರಲ್‌ ಮ್ಯಾನೇಜರ್‌ ರಾಕೇಶ್‌ ಸಿಂಗ್‌, ತಾಂತ್ರಿಕ ಅಧಿಕಾರಿ ಪ್ರಭಾಕರ್‌ ಸುಂದರರಾಜನ್‌ ಹಾಜರಿದ್ದರು.

(ಇನ್‌ಫೋ ವಾರ್ತೆ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X