ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಯಲ ಬಟ್ಟೆಯ ತೊಟ್ಟ ಕಾರ್ಕಳದ ಬಾಹುಬಲಿಗೆ ಮಹಾ ಮಜ್ಜನ

By Staff
|
Google Oneindia Kannada News

ಕಾರ್ಕಳ: ಇಲ್ಲಿನ ಭಗವಾನ್‌ ಬಾಹುಬಲಿ ಮೂರ್ತಿಗೆ ಫೆಬ್ರವರಿ ತಿಂಗಳಲ್ಲಿ ನಡೆಯುವ ಮಹಾ ಮಸ್ತಕಾಭಿಷೇಕ ಉತ್ಸವದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು , ಡಿಸೆಂಬರ್‌ 25 ರಿಂದ ಸಾರ್ವಜನಿಕರು ಅಟ್ಟಿಳಿಗೆಗೆ ಹೋಗಿ ಬಾಹುಬಲಿಯನ್ನು ಸಮೀಪದಿಂದ ನೋಡಬಹುದಾಗಿದೆ.

ಮಹಾಮಜ್ಜನದ ಅಂಗವಾಗಿ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಗಳನ್ನು ಬಿಡುಗಡೆ ಮಾಡಲಿದೆ. ಬಾಹುಬಲಿ ಬೆಟ್ಟದ ಪ್ರಾಂಗಣದ ಸುತ್ತ ಹಾಗೂ ಹಿರಿಯಂಗಡಿ ಮಾನಸ್ತಂಭದ ಆವರಣದಲ್ಲಿ ಚಪ್ಪಡಿ ಕಲ್ಲು ಹಾಸುವುದು ಮತ್ತು ಡಾಮರೀಕರಣ ಕಾಮಗಾರಿಗಳ 30 ಲಕ್ಷ ರುಪಾಯಿ ಯೋಜನೆಯನ್ನು ಪುರಾತತ್ವ ಇಲಾಖೆ ಪ್ರಕಟಿಸಿದೆ.

ಕಾರ್ಕಳ ದಾನಶಾಲಾ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಮಹಾ ಮಸ್ತಕಾಭಿಷೇಕ ಸಮಿತಿಯ ವಿಶೇಷ ಸಭೆಯು ವಿವಿಧ ಸಮಿತಿಗಳ ಕಾರ್ಯ ಪ್ರಗತಿಯ ಸಮೀಕ್ಷೆ ನಡೆಸಿತು. ಫ್ಯಾಕ್ಸ್‌ ಹಾಗೂ ಇ- ಮೇಲ್‌ ಸೌಲಭ್ಯಗಳನ್ನು ಮಹಾಮಸ್ತಕಾಭಿಷೇಕ ಸಮಿತಿ ಕಚೇರಿಗೆ ಕಲ್ಪಿಸಲು ಸಭೆ ನಿರ್ಧರಿಸಿತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X