ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಚಾನೆಲ್‌ಗೆ ಸವಾಲೊಡ್ಡಲು ಬರುತ್ತಿದ್ದಾಳೆ ‘ಭಾರತಿ’

By Staff
|
Google Oneindia Kannada News

ಬೆಂಗಳೂರು : ಖಾಸಗಿಯವರಿಗೆ ಸವಾಲೊಡ್ಡಲು ತಲೆ ಎತ್ತಿರುವ ಹಾಗೂ ತಲೆ ಎತ್ತುತ್ತಿರುವ ಭಾರತ ಸರಕಾರದ ಒಡೆತನದ ಕೆಲವು ಸಂಸ್ಥೆಗಳ ಹೆಸರು ಏನು ಗೊತ್ತೆ? ‘ಭಾರತಿ’.

ಖಾಸಗಿ ಮೊಬೈಲ್‌ ಸಂಸ್ಥೆಗಳು ದೇಶವನ್ನೆಲ್ಲಾ ಆವರಿಸಿದ ಮೇಲೆ, ದೀರ್ಘ ಆಕಳಿಕೆಯಿಂದ ಎದ್ದ ಟೆಲಿಕಾಂ ಇಲಾಖೆ ‘ಸ್ಪರ್ಧಾ ಜಗತ್ತಿನಲ್ಲಿ ಗುಣಮಟ್ಟದ ಸೇವೆಯೇ ಪ್ರಧಾನ’ ಎಂಬ ಘೋಷಣೆಯಾಂದಿಗೆ ‘ಭಾರತಿ ಮೊಬೈಲ್‌’ ಸೇವೆಯನ್ನು ಆರಂಭಿಸಿತು. (ಇದರ ಗುಣಮಟ್ಟದ ಬಗ್ಗೆ ಗ್ರಾಹಕರ ಅಪಸ್ವರ ಇದೆ ಎಂಬುದು ಬೇರೆ ಮಾತು).

ಸರಕಾರಿ ಒಡೆತನದಲ್ಲಿದ್ದು, ಈಗ ಸ್ವಾಯತ್ತ ಸಂಸ್ಥೆ ಯಾಗಿರುವ ‘ಪ್ರಸಾರ ಭಾರತಿ’ಯು ಖಾಸಗಿ ದೂರದರ್ಶನ ಚಾನೆಲ್‌ಗಳ ಸವಾಲು ಎದುರಿಸಲು ‘ಭಾರತಿ’ ಎಂಬ ಹೊಸ ದೂರದರ್ಶನ ಚಾನೆಲ್‌ ಆರಂಭಿಸುತ್ತಿದೆ. ದಿನದ 24 ಗಂಟೆಯೂ ಕಾರ್ಯಕ್ರಮ ಬಿತ್ತರಿಸುವ ಈ ಹೊಸ ಚಾನೆಲ್‌ ಗಣರಾಜ್ಯ ದಿನದಿಂದ ಅಂದರೆ 2002ರ ಜನವರಿ 26ರಿಂದ ಕಾರ್ಯ ನಿರ್ವಹಿಸಲಿದೆ.

ಈ ವಿಷಯವನ್ನು ನವದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿರುವ ಪ್ರಸಾರ ಭಾರತಿಯ ಮುಖ್ಯ ಕಾರ್ಯನಿರ್ವಾಹಕ ಅನಿಲ್‌ ಬೈಜಲ್‌ ಅವರು, ಭಾರತಿಯು ಕಲೆ, ಸಂಸ್ಕೃತಿ, ಆರೋಗ್ಯ, ದೈಹಿಕ ವ್ಯಾಯಾಮದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತದೆ ಎಂದು ಹೇಳಿದ್ದಾರೆ.

ಇದು ಒಂದು ಆರೋಗ್ಯಕರ ಬೆಳವಣಿಗೆಯೇ. ‘ಭಾರತಿ’ಯು ಭಾರತಾದ್ಯಂತ ಜನಮೆಚ್ಚುಗೆ ಪಡೆಯುವಂತ ಹಾಗೂ ಉಪಯುಕ್ತವಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಿ ಎಂದು ಹಾರೈಸೋಣ.

(ಇನ್‌ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X