ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಳೆಯ ಬಂದೂಕುಗಳು ಮೂಲೆಗೆ,ಪೊಲೀಸರಿಗೆ AK47

By Staff
|
Google Oneindia Kannada News

ಬೆಂಗಳೂರು : ವ್ಯಾಪಕವಾಗುತ್ತಿರುವ ಭಯೋತ್ಪಾದಕತೆಯನ್ನು ಸಮರ್ಥವಾಗಿ ಎದುರಿಸಲು ಅನುವಾಗುವಂತೆ ನಗರದ ಪೊಲೀಸರಿಗೆ ಎಕೆ- 47 ಹಾಗೂ ಸ್ವಯಂ ಚಾಲಿತ ರೈಫಲ್‌ಗಳನ್ನು ಬಳಸುವ ಕುರಿತಾದ ತರಬೇತಿ ನೀಡಲು ಪೊಲೀಸ್‌ ಇಲಾಖೆ ಮುಂದಾಗಿದೆ.

ಪ್ರಮುಖ ಕಟ್ಟಡಗಳು ಅಥವಾ ಅತಿ ಗಣ್ಯ ವ್ಯಕ್ತಿಗಳ ಮೇಲೆ ಭಯೋತ್ಪಾದಕರ ದಾಳಿ ನಡೆದಲ್ಲಿ, ದಾಳಿಯನ್ನು ಸಮರ್ಥವಾಗಿ ಎದುರಿಸಲು ಪೊಲೀಸ್‌ ಪೇದೆಗಳಿಗೆ ಆಧುನಿಕ ಶಸ್ತ್ರಾಸ್ತ್ರಗಳನ್ನು ಬಳಸುವ ಕುರಿತು ಮಂಗಳವಾರದಿಂದಲೇ ತರಬೇತಿ ನೀಡಲಾಗುವುದು ಎಂದು ಬೆಂಗಳೂರು ಮಹಾನಗರ ಪೊಲೀಸ್‌ ಆಯುಕ್ತ ಎಚ್‌.ಟಿ. ಸಾಂಗ್ಲಿಯಾನ ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಧಾನಸೌಧ, ರಾಜಭವನ, ಮುಖ್ಯಮಂತ್ರಿ ಹಾಗೂ ಸಚಿವರ ನಿವಾಸಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಪ್ರಮುಖ ಸಾಫ್ಟ್‌ವೇರ್‌ ಕಂಪನಿಗಳ ಬಳಿ ನಿಯೋಜಿಸಲಾಗಿರುವ ಪೊಲೀಸರು ಈ ತರಬೇತಿಯನ್ನು ಮೊದಲ ಸರದಿಯಲ್ಲಿ ಪಡೆಯಲಿದ್ದಾರೆ. ಕ್ರಮೇಣ ರಾಜ್ಯದ ಉಳಿದ ನಗರಗಳ ಪೊಲೀಸರೂ ಈ ತರಬೇತಿ ಪಡೆಯುವರು. ತರಬೇತಿಯ ನಂತರ ಆಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸಲಾಗುವುದು ಎಂದು ಸಾಂಗ್ಲಿಯಾನ ಹೇಳಿದರು.

ಸಾಂಗ್ಲಿಯಾನ ಹಮ್ಮಿಕೊಂಡಿರುವ ಇತರ ಕ್ರಮಗಳು

  1. ಹೊಯ್ಸಳ ಹಾಗೂ ಚೀತಾ (ಮೋಟಾರ್‌ ಸೈಕಲ್‌)ಗಳಲ್ಲಿ ಗಸ್ತು ತಿರುಗುವ ಪೊಲೀಸರಿಗೆ ವಿಶೇಷ ಸಮವಸ್ತ್ರ . ಕಮಾಂಡೋ ರೀತಿಯ ಈ ವಸ್ತ್ರಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೆಚ್ಚು ಜೇಬುಗಳಿರುವ ದೊಗಲೆ ಪ್ಯಾಂಟ್‌ಗಳಲ್ಲಿ ಇನ್ನು ಮುಂದೆ ಹೊಯ್ಸಳ ಹಾಗೂ ಚೀತಾ ಪೊಲೀಸರು ಮಿಂಚಲಿದ್ದಾರೆ.
  2. ಪೇದೆಗಳು ಸೇರಿದಂತೆ ಎಲ್ಲ ಪೊಲೀಸರು ಎದೆಯ ಮೇಲೆ ತಮ್ಮ ಹೆಸರುಗಳುಳ್ಳ ಪಟ್ಟಿಗಳನ್ನು ಧರಿಸಬೇಕು.
  3. ಸ್ವಂತ ಕಾರ್ಯಗಳಿಗೆ ಬಳಸಲು ಪಡೆಯುವ ಮೋಟಾರ್‌ ಸೈಕಲ್‌, ಜೀಪು ಹಾಗೂ ಕಾರುಗಳಿಗೆ ತಿಂಗಳಿಗೆ 300 ರುಪಾಯಿ ಕಟ್ಟಬೇಕು. ಇಂಥ ಬಳಕೆ 500 ಕಿಮೀಗೆ ಮಾತ್ರ ಸೀಮಿತ.
(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X