ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿಗರಿಗೆ ಮುಚ್ಚಿದ ಕಾಳೀ ನದಿ ವೀಕ್ಷಣಾ ಗೋಪುರದ ಬಾಗಿಲು

By Staff
|
Google Oneindia Kannada News

ದಾಂಡೇಲಿ : ರಾಜ್ಯ ವಿದ್ಯುತ್‌ ಪ್ರಸರಣ ನಿಗಮ ಕಾಳೀ ನದಿ ದಂಡೆ ಮೇಲಿನ ವೀಕ್ಷಣಾ ಗೋಪುರ ‘ಸೈಕ್‌ ಪಾಯಿಂಟ್‌’ಗೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಿದೆ.

ದಾಂಡೇಲಿಯಿಂದ 23 ಕಿ.ಮೀ. ದೂರದ ಅಂಬಿಕಾನಗರದಲ್ಲಿರುವ ಈ ವೀಕ್ಷಣಾ ಗೋಪುರ ಕಳೆದ ಹಲವು ವರ್ಷಗಳಿಂದ ಡಿಸೆಂಬರ್‌ - ಜನವರಿ ತಿಂಗಳಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. ಈ ಗೋಪುರದಿಂದ , ಏರು ತಗ್ಗುಗಳಲ್ಲಿ ಹರಿದು ಬರುವ ಕಾಳಿ ನದಿ, ನದಿ ಕಣಿವೆ, ಪಶ್ಚಿಮ ಘಟ್ಟ ಅರಣ್ಯ ಪ್ರದೇಶದ ರಮ್ಯ ನೋಟ ಪ್ರವಾಸಿಗರ ಗಮನ ಸಳೆಯುತ್ತಿತ್ತು.

ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ , ಮುನ್ನೆಚ್ಚರಿಕೆ ಕ್ರಮವಾಗಿ ಈ ವೀಕ್ಷಣಾ ಗೋಪುರಕ್ಕೆ ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲು ಕೆಪಿಟಿಸಿಎಲ್‌ನಿರ್ಧರಿಸಿದೆ. ಗೋಪುರವು ದಾಂಡೇಲಿ ವನ್ಯ ಮೃಗಾರಣ್ಯಕ್ಕೆ ಸೇರಿದ್ದು.

ದಾಂಡೇಲಿ ಅಭಯಾರಣ್ಯಕ್ಕೆ ಭೇಟಿ ನೀಡಿದ ಪ್ರವಾಸಿಗರು ಈ ವೀಕ್ಷಣಾ ಗೋಪುರದಲ್ಲಿ ಬೆಟ್ಟದೆಡೆಗಳಲ್ಲಿ ಹರಿದುಬರುವ ಕಾಳೀ ನದಿಯ ಸೊಬಗನ್ನು ನೋಡಿಯೇ ಹಿಂತಿರುಗುತ್ತಿದ್ದರು. ವಿಪರ್ಯಾಸವೆಂದರೆ ದಾಂಡೇಲಿ ಅಭಯಾರಣ್ಯದ ಅಧಿಕಾರಿಗಳಿಗೆ ಕೆಪಿಟಿಸಿಎಲ್‌ನ ಪ್ರಕಟಣೆ ತಿಳಿದಂತೆ ಕಾಣಿಸುವುದಿಲ್ಲ. ಅವರು ವೀಕ್ಷಣಾ ಗೋಪುರಕ್ಕೆ ಪ್ರವಾಸಿಗರನ್ನು ಆಹ್ವಾನಿಸಿ ಕರಪತ್ರಗಳನ್ನು ಹಂಚುತ್ತಲೇ ಇದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X