For Daily Alerts
ಹೊಸ ವರ್ಷದ ಕೊಡುಗೆ: ಜನವರಿ1ರಿಂದ ಅಧ್ಯಾಪಕರ ಪ್ರತಿಭಟನೆ
ಬೆಂಗಳೂರು : ಸಂಯುಕ್ತ ಪದವಿ ಕಾಲೇಜುಗಳ ವಿಭಜನೆ, ಪರೀಕ್ಷಾ ಸಂಭಾವನೆ ರದ್ದು ಹಾಗೂ ಉನ್ನತ ಶಿಕ್ಷಣ ನೀತಿಯಲ್ಲಿ ಸರ್ಕಾರದ ಧೋರಣೆಯನ್ನು ವಿರೋಧಿಸಿ ವಿಶ್ವವಿದ್ಯಾಲಯ ಮತ್ತು ಕಾಲೇಜು ಅಧ್ಯಾಪಕರ ಸಂಘಗಳ ಒಕ್ಕೂಟ ಜನವರಿ 1ರಿಂದ ಹಂತ ಹಂತವಾಗಿ ಪ್ರತಿಭಟನೆ ನಡೆಸಲಿದೆ.
ಜನವರಿ 1ರಿಂದ ಪ್ರತಿನಿತ್ಯ ಕಪ್ಪು ಪಟ್ಟಿ ಕಟ್ಟಿಕೊಂಡು ಕೆಲಸದ ನಡುವೆಯೇ ಪ್ರತಿಭಟನೆ ಪ್ರಾರಂಭಿಸಲಾಗುವುದು. ಜನವರಿ 7ರಿಂದ 13ರವರೆಗೆ ಅಧ್ಯಾಪಕರು ತಮ್ಮ ತಮ್ಮ ಕಾಲೇಜುಗಳಲ್ಲಿ ಧರಣಿ ನಡೆಸುವರು. ಜನವರಿ 15ರಿಂದ 21ರವರಗೆ ರಾಜ್ಯದ ಕಾಲೇಜು ಶಿಕ್ಷಣ ಪ್ರಾದೇಶಿಕ ಜಂಟಿ ನಿರ್ದೇಶನಾಲಯಗಳು, ತಹಶೀಲ್ದಾರ್ ಕಚೇರಿಗಳು ಮತ್ತು ಜಿಲ್ಲಾಧಿಕಾರಿ ಕಚೇರಿಗಳ ಮುಂದೆ ಧರಣಿ ನಡೆಸಲಾಗುವುದು ಎಂದು ಒಕ್ಕೂಟದ ಪ್ರಕಟಣೆ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...