ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಎಸ್‌ಟಿಡಿಸಿ- ಕೆಟಿಡಿಸಿ ಒಪ್ಪಂದ! ಪ್ರವಾಸೋದ್ಯಮದಲ್ಲಿ ಹೊಸ ಶಕೆ!

By Staff
|
Google Oneindia Kannada News

ಕೊಚ್ಚಿ: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಎಸ್‌ಟಿಡಿಸಿ) ಹಾಗೂ ಕೇರಳ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ(ಕೆಟಿಡಿಸಿ) ಒಪ್ಪಂದಕ್ಕೆ ಬರಲು ನಿಶ್ಚಯಿಸಿದ್ದು , ಸವಲತ್ತು ಸೌಕರ್ಯ ಹಾಗೂ ಕಲ್ಪನೆಗಳನ್ನು ಪರಸ್ಪರ ಬದಲಿಸಿಕೊಳ್ಳಲು ನಿರ್ಧರಿಸಿವೆ.

ಕೆಟಿಡಿಸಿ ಅಧ್ಯಕ್ಷೆ ಪದ್ಮಜಾ ವೇಣುಗೋಪಾಲ್‌ ಹಾಗೂ ಕೆಎಸ್‌ಟಿಡಿಸಿ ಮುಖ್ಯಸ್ಥೆ ಮನೋರಮ ಮಧ್ವಾರ ಶುಕ್ರವಾರ ಬೋಲ್‌ಗಟ್ಟಿಯಲ್ಲಿ ಕೆಟಿಡಿಸಿ ಮತ್ತು ಕೆಎಸ್‌ಟಿಡಿಸಿ ನಡುವಣ ಒಪ್ಪಂದದ ವಿವರಗಳನ್ನು ಸುದ್ದಿಗಾರರಿಗೆ ತಿಳಿಸಿದರು. ಒಪ್ಪಂದವಿನ್ನೂ ತಾತ್ವಿಕ ರೂಪದಲ್ಲಿದ್ದು ಶೀಘ್ರದಲ್ಲೇ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಹೇಳಿದರು.

ಒಪ್ಪಂದದ ಅನ್ವಯ ಉಭಯ ನಿಗಮಗಳೂ ಮತ್ತೊಂದು ನಿಗಮದ ಮಾರುಕಟ್ಟೆ ಏಜೆಂಟರಂತೆ ಕಾರ್ಯ ನಿರ್ವಹಿಸುತ್ತವೆ. ಎರಡೂ ನಿಗಮಗಳಲ್ಲಿ ಲಭ್ಯವಿರುವ ಇಂಟರ್ನೆಟ್‌ ಸವಲತ್ತಿನಿಂದಾಗಿ ಹೊಟೇಲ್‌ ಹಾಗೂ ಟ್ರಾವೆಲ್‌ ಪ್ಯಾಕೇಜ್‌ಗಳನ್ನು ಆನ್‌ಲೈನ್‌ ಮೂಲಕವೇ ಕಾದಿರಿಸಬಹುದಾಗಿದೆ. ಉದಾಹರಣೆಗೆ- ತಿರುವನಂತಪುರಂ ಹಾಗೂ ಕೊಚ್ಚಿಯಿಂದಲೇ ಫ್ಯಾಕ್ಸ್‌ ಅಥವಾ ಇ-ಮೇಲ್‌ ಮೂಲಕ ಕೆಎಸ್‌ಟಿಡಿಸಿ ಹೊಟೇಲ್‌ ರೂಂಗಳನ್ನು ಕಾದಿರಿಸಬಹುದು.

ಆಂಧ್ರಪ್ರದೇಶ, ರಾಜಸ್ತಾನ, ಪಶ್ಚಿಮಬಂಗಾಳ, ದೆಹಲಿ, ಗೋವಾ ಹಾಗೂ ಪಾಂಡಿಚೆರಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮಗಳೊಂದಿಗೂ ಕೆಟಿಡಿಸಿ ಮಾದರಿಯಲ್ಲಿ ಒಪ್ಪಂದಗಳನ್ನು ಸಾಧಿಸಲು ಕೆಎಸ್‌ಟಿಡಿಸಿ ಪ್ರಯತ್ನಗಳನ್ನು ನಡೆಸಿದೆ. ಭಾರತದ ಎಲ್ಲ ಪ್ರವಾಸಿ ಸ್ಥಳಗಳೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಉದ್ದೇಶ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಕೆಎಸ್‌ಟಿಡಿಸಿ ಕಾರ್ಯ ನಿರ್ವಾಹಕ ನಿರ್ದೇಶಕ ಕೆವಿಆರ್‌ ಠಾಗೂರ್‌ ತಿಳಿಸಿದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X