ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಿ.18ರಂದು ಕುಂಭಾಸಿ ಆನೆಗುಡ್ಡೆ ಗಣಪತಿಯ ಬ್ರಹ್ಮರಥೋತ್ಸವ

By Staff
|
Google Oneindia Kannada News

ಕುಂದಾಪುರ: ಇಲ್ಲಿಗೆ 9 ಕಿ.ಮೀಟರ್‌ ದೂರದಲ್ಲಿರುವ ಕುಂಭಾಸಿಯ ಆನೆಗುಡ್ಡೆ ವಿನಾಯಕ ದೇವಾಲಯದಲ್ಲಿ ಡಿ.18ರಂದು ಬ್ರಹ್ಮರಥೋತ್ಸವ ಹಾಗೂ ಸಹಸ್ರ ನಾರಿಕೇರ ಗಣಯಾಗವು ಜರುಗಲಿದೆ. ವೃಷನಾಮ ಸಂವತ್ಸರ ಮಾರ್ಗಶಿರ ಶುದ್ಧ ಚತುರ್ಥಿಯ ಮಂಗಳವಾರ ಅಭಿಜಿನ್ಮುಹೂರ್ತದಲ್ಲಿ ರಥೋತ್ಸವ ನೆರವೇರಲಿದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ರಥೋತ್ಸವದ ಅಂಗವಾಗಿ ಡಿ.15ರ ಶನಿವಾರದಿಂದ 19ರ ಬುಧವಾರದವರೆಗೆ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗಲಿದೆ. ಕಾರ್ಯಕ್ರಮ ಪಟ್ಟಿ ಇಂತಿದೆ:

ಡಿ 15: ಬೆಳಗ್ಗೆ - ಗಣಹೋಮ, ಸತ್ಯಗಣಪತಿ ವ್ರತ, ಸಂಜೆ: ಶೇಷಗಿರಿದಾಸರಿಂದ ದಾಸರ ಪದಗಳು, ರಾತ್ರಿ: ರಂಗಪೂಜೆ, ಡೋಲಾರೋಹಣ, ಪಲ್ಲಕ್ಕಿ ಉತ್ಸವ.

ಡಿ.16: ಬೆಳಗ್ಗೆ - ಗಣಹೋಮ, ಕಲಶಾಭಿಷೇಕ, ಸಂಜೆ: ಮಾಧವಗುಡಿ ಅವರಿಂದ ಸಂಗೀತಸಂಜೆ, ರಾತ್ರಿ: ಪುರ ಮೆರವಣಿಗೆ, ಪಲ್ಲಕ್ಕಿ ಉತ್ಸವ.

ಡಿ.17: ಬೆಳಗ್ಗೆ - ಗಣಯಾಗ, ಸಂಜೆ : ಪುತ್ತೂರು ನರಸಿಂಹನಾಯಕ್‌ ಅವರಿಂದ ಸುಗಮ ಸಂಗೀತ, ರಾತ್ರಿ: ರಂಗಪೂಜೆ, ಪಲ್ಲಕ್ಕಿ ಮಹೋತ್ಸವ.

ಡಿ. 18: ಬೆಳಗ್ಗೆ - ಸಹಸ್ರ ನಾರಿಕೇರ ಗಣಯಾಗ ಮತ್ತು ಬ್ರಹ್ಮರಥೋತ್ಸವ, ಅನ್ನಸಂತರ್ಪಣೆ. ಸಂಜೆ : ಗಣೇಶ್‌ ಕುದ್ರೋಳಿ ಅವರಿಂದ ವಿಸ್ಮಯ ಜಾದೂ, ರಾತ್ರಿ: ಸುಡುಮದ್ದು ಪ್ರದರ್ಶನ, ಹಾಗೂ ಸಾಲಿಗ್ರಾಮದ ಗುರುಪ್ರಸಾದಿತ ಯಕ್ಷಗಾನ ಮಂಡಳಿಯಿಂದ ಬಯಲಾಟ.

ಡಿ. 19: ಬೆಳಗ್ಗೆ - ಚೂರ್ಣೋತ್ಸವ, ವಸಂತಾರಾಧನೆ ಹಾಗೂ ಉಡುಪಿಯ ಫಲಿಮಾರು ಮಠದ ಶ್ರೀಅನಂತಕೃಷ್ಣ ಆಚಾರ್ಯರಿಂದ ಪ್ರವಚನ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X